ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೦ ಶ್ರೀಮದ್ರಾಮಾಯಣವು [ಸರ್ಗ, ೧೮, ರಿಸಿಯೇ ನಿನ್ನನ್ನು ವಧಿಸಿರುವೆವು, ನಾವು ಯಾವವಿಧದಲ್ಲಿಯೂ ಸ್ವತಂತ್ರರಲ್ಲ. ಅತ್ತಲಾಗಿ ಭರತನಾಜ್ಞೆಗೆ ಅಧೀನರಾಗಿರುವೆವು ಇತ್ತಲಾಗಿ ಧರಕ್ಕೆ ಕಟ್ಟು ಬಿದ್ದಿರುವೆವು ಆದುದರಿಂದ ನಾವು ರಾಜಾಜ್ಞೆಗೂ ಶಾಸ್ತ್ರಕ್ಕೂ ಬದ್ಧರಾ ಗಿಯೇ ಯಾವಕೆಲಸವನ್ನಾ ದರೂ ನಡೆಸುವವರೇ ಹೊರತು,ನಮ್ಮ ಕೋಪ ಪ್ರಸಾದಗಳನ್ನೇ ಆಧಾರವಾಗಿಟ್ಟುಕೊಂಡು ಇತರರಿಗೆ ನಿಗ್ರಹಾನುಗ್ರಹಗಳ ನ್ನು ಮಾಡತಕ್ಕವರಲ್ಲ ಎಲೈ ವಾನರನೆ'*ಮತ್ತೊಂದು ಕಾರಣವನ್ನೂ ಹೇಳು ವೆನುಕೇಳು ಅದು ಇನ್ನೂ ವಿಶೇಷವಾಗಿ ಹೇತುಯುಕ್ತವಾಗಿರುವುದರಿಂದ, ಅದನ್ನು ಕೇಳಿದಮೇಲೆ ನಿನಗೆ ನನ್ನ ಮೇಲಿರುವ ಕೋಪವು ನಿಶೇಷವಾಗಿ ಹೋಗಬಹುದು ಮರೆಯಲ್ಲಿದ್ದು ನಾನು ನಿನ್ನನ್ನು ವಧಿಸಿದುದಕ್ಕಾಗಿ ಆಕ್ಷೇಪಿ ಸಿ, ನನ್ನನ್ನು ಯಮಲೋಕಕ್ಕೆ ಕಳುಹಿಸುವುದಾಗಿ ಹೇಳಿದೆಯಲ್ಲವ?ನೀನು ಇ ಷ್ಟು ಕ್ರೂರವಾಕ್ಯಗಳನ್ನಾಡಿದ್ದರೂ, ನನಗೆ ಸ್ವಲ್ಪಮಾತ್ರವೂ ಮನಸ್ತಾಪವಿ ಲ್ಲ ಇದರಿಂದ ನನಗೆ ಕೋಪವೂ ಇಲ್ಲ ಮನುಷ್ಯರು ಕಾಡಿನಲ್ಲಿ ಬಲೆಗಳಿಂದ ಲೂ ಹಗ್ಗಗಳಿಂದಲೂ, ಇನ್ನೂ ಅನೇಕ ಸಾಧನಗಳಿಂದಲೂ ಬೇಟೆಯಾಡಿ, ಮೃಗಗಳನ್ನು ಕೂಗ್ಲಿವರು ಕಲವು ಮೃಗಗಳನ್ನು ಪ್ರತ್ಯಕ್ಷದಲ್ಲಿ ನಿಂತುಹೊ ಡೆಯುವರು ಕೆಲವನ್ನು ಮರೆಯಲ್ಲಿ ನಿಂತು ಕೊಲ್ಲುವರು ಹೀಗೆ ನಾ ನಾವಿಧವಾದ ಕಪಟವ್ಯಾಪಾರದಿಂದ ಕಾಡುಮೃಗಗಳನ್ನು ಕೊಲ್ಲುವುದುಂ ಟು ಮಾಂಸಾಬಿಗಳು ಕಾಡಿನಲ್ಲಿ ಮೃಗಗಳು ಓಡುತಿದ್ದರೂ, ಭಯದಿಂದ ನಡುಗುತ್ತಿದ್ದರೂ, ನಂಬಿಕೆಯಿಂದ ನಿರಯವಾಗಿ ನಿಂತಿದ್ದರೂ, ಎಚ್ಚರಿಕೆ ಯಿಂದಿದ್ದರೂ, ಪ್ರಮಾದದಿಂದಿದ್ದರೂ, ಹಿಮ್ಮೊಗವಾಗಿದ್ದರೂ ಯಾವಸಿ ತಿಯಲ್ಲಿಯೂ ದಯಾದಾಕ್ಷಿಣ್ಯಗಳನ್ನು ತೋರಿಸದೆ ಕೊಂದುಬಿಡುವರು ? ದರಿಂದ ದೋಷವೇನೂ ಕಾಣಲಿಲ್ಲ ಧರ ಪ್ರವೀಣರಾದ ರಾಜರ್ಷಿಗಳೂ ಹೀಗೆ ಕಾಡಿನಲ್ಲಿ ಬೇಟೆಯಾಡುವರು ಎಲೈ ವಾನರನೆ' ಆ ಮಾರ್ಗವನ್ನನು

  • ವಾಲಿಯು ವಾನರನಾಗಿದ್ದರೂ, ಮನುಷ್ಯರಂತೆ ರಾಜ್ಯಪಾಲನ ಸಂಧಿ ಪಾಸನಾದಿಗಳನ್ನು ನಡೆಸುತ್ತ, ಶಾಸ್ತ್ರವಶ್ಯನಾಗಿದ್ದುದರಿಂದ, ರಾಮನು ಇದುವರೆಗೆ ಅದಕ್ಕನುಗುಣಗಳಾದ ಪರಿಹಾರಗಳನ್ನೇ ಹೇಳಿ, ಇದುಮೊದಲು ಕೇವಲವಾನರತ್ವನ ನ್ನು ಕುರಿತು ಕೆಲವು ಪರಿಹಾರಗಳನ್ನು ಹೇಳುವನು.