ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮.] ಕಿಷಿಂಧಾಕಾಂಡವು ೧೪೫೩ ರಕ್ಷಿಸುವುದಕ್ಕೂ, ಸತ್ವವಿಧದಲ್ಲಿಯೂ ನೀನು ಸ್ವತಂತ್ರನು ಎಲೈ ರಾಜೇಂ ದ್ರನೆ' ನಿನಗೆ ಭರತನಲ್ಲಿಯ, ಲಕ್ಷಣನಲ್ಲಿಯೂ ಯಾವಯಾವವಿಧವಾದ ಪ್ರೀತಿಯುಂಟೋ, ಆ ವಿಧವಾದ ಪ್ರೀತಿಯನ್ನೇ ಸುಗ್ರೀವನಲ್ಲಿಯೂ, ಆಂಗ ದನಲ್ಲಿಯೂ ತೋರಿಸುತ್ತಿರಬೇಕು ತಾರೆಯು ನಿರೂಷೆಯಾಗಿದ್ದರೂ, ನ ಪತ್ನಿ ಯಾದುದರಿಂದ ನನ್ನ ದೋಷಕ್ಕ ಸಮಭಾಗಿನಿಯಾಗಿ,ಸುಗ್ರೀವನಿಗೆ ಕೆಡುಕನ್ನು ಮಾಡಿದಂತೆಯೇ ಎಣಿಸಬೇಕಾಗುವುದು ಈ ವೈರವನ್ನು ಮ ನಸ್ಸಿನಲ್ಲಿಟ್ಟು ಸುಗ್ರೀವನು ಆ ತಾರೆಯನ್ನು ಎಷ್ಟು ಮಾತ್ರವೂ ಅವಮಾನಿಸ ದಂತ ಸೀನು ನೋಡಿಕೊಳ್ಳಬೇಕು ಎಲೈ ರಘುವಂಶೋತ್ತಮನೆ' ನಿನ್ನ ಅನು ಗ್ರಹವನ್ನೇ ಹೊಂದಿ ನಿನ್ನ ಮನಸ್ಸನ್ನನುವರ್ತಿಸಿ, ನಿನಗಧೀನನಾಗಿಯೇ ನಾನು ನಡೆಸಿದ್ದರೆ, ನನಗೆ ನನ್ನ ರಾಜ್ಯವೂ,ನನ್ನ ಪ್ರಾಣವೂ ನಿಲ್ಲುವುದೇನೂ ಅಸಾಧ್ಯ ವಾಗಿರಲಿಲ್ಲ ನನ್ನ ರಾಜ್ಯವೂಂದುಮಾತ್ರವೇ ಅಲ್ಲದೆ ಈ ಸಮಸ್ತಭೂ ಮಂಡಲವನ್ನೂ ,ಕೊನೆಗೆ ದೇವಲೋಕವನ್ನಾ ದರೂ ಸಂಪಾದಿಸುವುದು ಆ ಸಾಧ್ಯವಾಗುತ್ತಿರಲಿಲ್ಲ ಆದರ ನನ್ನ ಉದ್ದೇಶವೇ ಬೇರೆ' ಅದರನಿಜಸ್ಥಿತಿಯನ್ನೂ ತಿಳಿಸಿಬಿಡುವೆನು ಕೇಳು ನನಗೆ ಬಹುಕಾಲದಿಂದ ಹೇಗಾದರೂ ನಿನ್ನ ಕೈಯಿಂ ದ ಸಾಯಬೇಕಂಬ ಆಸೆಯಿದ್ದುದರಿಂದಲೇ, ತಾರೆಯು ನನ್ನನ್ನು ಎಷ್ಟೋ ವಿಧದಿಂದ ತಡೆದರೂ ನಾನು ಸುಗ್ರೀವನೊಡನೆ ಯುದ್ಧಕ್ಕೆ ಬಂದೆನು ” ಎಂ ದನು ವಾಲಿಯು ವಿನಯದಿಂದ ಈ ವಾಕ್ಯವನ್ನು ಹೇಳಿ ಸುಮ್ಮನಿರಲು, ಆಮೇಲೆ ರಾಮನ,ಹೀಗೆ ಅಜ್ಞಾನವನ್ನು ಬಿಟ್ಟು ಶುದ್ಧವಾದ ಜ್ಞಾನವನ್ನು ಹೊಂದಿ ಮಾತಾಡುತ್ತಿರುವ ಆ ವಾಲಿಯನ್ನು ನೋಡಿ, ಧಮ್ಮಸ್ವರೂಪವು ಚೆನ್ನಾಗಿ ವ್ಯಕ್ತವಾಗುವಂತೆ ಸಾಮವಾಕ್ಯಗಳಿಂದ 1 ಎಲೆ ಕಪಿರಾಜನೆ' ನಿನ್ನ ಮಗನಾದ ಅಂಗದನ ವಿಷಯವಾಗಿ ನೀನು ಸ್ವಲ್ಪವೂ ಚಿಂತಿಸಬೇಡ' ಮತ್ತು ನಿನ್ನನ್ನು ಕೊಂದುದಕ್ಕಾಗಿ ನನ್ನ ವಿಷಯದಲ್ಲಿಯಾಗಲಿ, ಸಹೋ ದರಭಾರೆಯನ್ನ ಪಹರಿಸಿದುದಕ್ಕಾಗಿ ನಿನ್ನ ವಿಷಯವಾಗಿಯೇ ಆಗಲಿ ನೀ ನು ದೋಷವನ್ನೆಣಿಸಬೇಕಾದುದಿಲ್ಲ ಈಗ ನಾನು ನಿನ್ನನ್ನು ಕೊಂದುದ ರಿಂದ ರಾಜನಾದ ನನ್ನ ಧಮ್ಮವನ್ನು ನಡೆಸಿದಂತಾಯಿತು ನನ್ನಿಂದ ಹತನಾದ ನೀನೂ ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತರೂಪವಾದ ಶಿಕ್ಷೆಯನ್ನು