ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೪ ಶ್ರೀಮದ್ರಾಮಾಯಣವು [ಸರ್ಗ ೧೮. ಹೊಂದಿದಂತಾಯಿತು, ನಮ್ಮಿಬ್ಬರಿಗೂ ಇದು ಧರಹೇತುವೆಂದೇ ನಿಸ್ಸಂ ಶಯವಾಗಿ ನಿಶ್ಚಯಿಸಿರುವೆನು ಆದುದರಿಂದ ನಮ್ಮಿಬ್ಬರ ವಿಷಯವಾಗಿ ಯೂ ನೀನು ಚಿಂತಿಸಬೇಕಾದುದಿಲ್ಲ ಯಾವರಾಜನು ದಂಡಿಸಬೇಕಾದವ ನನ್ನು ದಂಡಿಸುವನೋ, ಯಾವನು ತನ್ನ ಪಾಪಕ್ಕೆ ತಕ್ಕ ಶಿಕ್ಷೆಯನ್ನು ಹೊಂ ದುವನೋ, ಅವರಿಬ್ಬರೂ, ತಮ್ಮ ದೋಷಗಳನ್ನು ಕಳೆದುಕೊಂಡು ಕೃತಾ ರ್ಥರಾಗುವರು ಆದುದರಿಂದ ಧರಶಾಸ್ತ್ರವನ್ನನುಸರಿಸಿಯೇ ನೀನು ಶಿಕ್ಷೆ ತನಾಗಿರುವುದರಿಂದ,ಇಂದಿಗೆ ನಿನ್ನ ಪಾಪವೂ ನೀಗಿತು ಈಗ ನೀನು ಶುಚಿತ್ವ ವನ್ನೂ ಹೊಂದಿದಂತಾಯಿತು ಎಲೈ ವಾನರೇಂದ್ರನೆ' ಈಗ ನಿನ್ನ ಮನಸ್ಸಿ ನಲ್ಲಿರುವ, ದುಃಖವನ್ನೂ, ಮೋಹವನ್ನೂ, ಭಯವನ್ನೂ ಬಿಟ್ಟುಬಿಡು ಹೈ ವಗತಿಯನ್ನು ತಪ್ಪಿಸಿಕೊಳ್ಳಬೇಕೆಂದರೆ ನಿನಗೆ ಸಾಧ್ಯವೇ? ಎಲೆ ವಾಲಿ | ಅಂಗದನ ವಿಷಯವಾಗಿ ನೀನೇಕೆ ಚಿಂತಿಸುವೆ ? ಅವನು ನಿನ್ನಲ್ಲಿ ಹೇಗೆ ವರ್ತಿಸುವನೋ ಹಾಗೆಯೇ ನನ್ನಲ್ಲಿಯೂ ಈ ಸುಗ್ರೀವನಲ್ಲಿಯೂ ಪಿತೃಭ ಕಿಯನ್ನು ತೋರಿಸುವನೆಂಬುದರಲ್ಲಿ ಸಂದೇಹವಿಲ್ಲ ಅಂತಹ ಗುಣಾಢನಾದ ಅಂಗದನನ್ನು ನಾವು ಪ್ರೇಮದಿಂದ ನೋಡಿಕೊಳ್ಳಬೇಕಂಬ ವಿಷಯದಲ್ಲಿ ನೀ ನು ನಮಗೆ ಹೇಳಬೇಕ? ನಾವು ಅವನನ್ನು ಪತ್ರವಾತ್ಸಲ್ಯದಿಂದಲೇ ಪೋಷಿ ಸುವೆವು” ಎಂದನು ಮಹಾತ್ಮನಾಗಿಯೂ ಧರಮಾರ್ಗಕಸಿರತನಾಗಿ ಯೂ, ರಣವೀರನಾಗಿಯೂ ಇರುವ ರಾಮನು, ಕಿವಿಗಿಂಪಾದ ಈ ಮಾತು ಗಳನ್ನು ಹೇಳಿದಮೇಲೆ, ವಾಲಿಯು ಮನಸ್ಸಿನ ಚಿಂತೆಯನ್ನು ಬಿಟ್ಟು, ಕಾ ಲೋಚಿತವಾದ ಮಾತಿನಿಂದ ಆ ರಾಮನನ್ನು ಕುರಿತು ಲೋಕಪ್ರಭುವಾ ದ ಎಲೈ ರಾಜೇಂದ್ರನೆ' ನೀನು ದೇವೇಂದ್ರನಿಗೆ ಸಮನಾದವನು ಶತ್ರುಭ ಯಂಕರವಾದ ಪರಾಕ್ರಮವುಳ್ಳವನು ಆದರ ನಿನ್ನ ಬಾಣದಿಂದ ಪೀಡಿತ ನಾದ ನಾನು, ಆ ಬಾಣವೇದನೆಯಿಂದ ಮೈಮರೆತು ನಿನ್ನ ನ್ನು ವಿಶೇಷವಾಗಿ ದೂಷಿಸಿದೆನು ಈ ಅಪರಾಧಕ್ಕಾಗಿ ನೀನು ನನ್ನಲ್ಲಿ ಕೋಪವನ್ನಿಡದೆ ಮನ್ನಿ ಸಬೇಕೆಂಬುದೇ ನನ್ನ ಮುಖ್ಯಪ್ರಾರ್ಥನೆಯು” ಎಂದು ಹೇಳಿ ಕೈಮುಗಿದನು ಇಲ್ಲಿಗೆ ಹದಿನೆಂಟನೆಯಸರ್ಗವು