ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೮ ಶ್ರೀಮದ್ರಾಮಾಯಣವು [ಸರ್ಗ, ೬೦. ಲ್ಪಟ್ಟ, ಬೇರೊಂದು ಸಿಕ್ಕದಂತೆ, ರಾಮನಿಂದ ಹತನಾಗಿ ಬಿದ್ದಿರುವುದನ್ನು ನೋಡಿದಳು ಮತ್ತು ಆ ವಾಲಿಯು ಪರಾಕ್ರಮಾದಿಗುಣಗಳಿಂದ ಸಮಸ್ತ ಲೋಕಕ್ಕೂ ಪೂಜ್ಯನಾಗಿದ್ದರೂ ತಮ್ಮನ ಭಾರೈಯನ್ನ ಪಹರಿಸಿದ ದೋಷ ಕ್ಯಾಗಿ ರಾಮನಿಂದ ಹತನಾಗಿ ಬಿದ್ದು,ಸಯ್ಯಲೋಕಪೂಜ್ಯವಾಗಿಯೂ ಧ್ವಜಗ ಳಿಂದಲೂ, ವೇದಿಕೆಗಳಿಂದಲೂ ಅಲಂಕೃತವಾಗಿಯೂ ಇರುವ ಚೈತ್ಯವೃಕ್ಷ ವು, ತನ್ನಲ್ಲಿರುವ ಸರಗಳ ಆಸೆಗಾಗಿ ಗರುಡನಿಂದ ಮುರಿದುಕೆಡಹಲ್ಲ ಟೈರುವಂತೆ ಕಾಣುತಿದನು, ಹೀಗೆ ಸತ್ತು ಬಿದ್ದಿರುವ ತನ್ನ ಪತಿಯಾದ ವಾಲಿಯನ್ನು ಕಂಡೊಡನೆ, ತಾರೆಯು ಇತ್ತಲಾಗಿ ಬಿಲ್ಲನ್ನು ನಮ್ಮಿ ಸಿಂತಿ ರುವ ರಾಮನನ್ನೂ , ಮತ್ತು ರಾಮನ ಸಮೀಪದಲ್ಲಿ ನಿಂತಿದ್ದ ಅವನ ತಮ್ಮ ನಾದ ಲಕ್ಷಣವನ್ನೂ, ತನ್ನ ಮೈದುನನಾದ ಸುಗ್ರೀವನನ್ನೂ, ಕಂಡರೂ ಕಾಣದಂದೆ, ಲಕ್ಷಮಾಡದೆ ಮುಂದೆ ದಾಟಿಹೋಗಿ, ತನ್ನ ಪತಿಯಬಳಿಗೆ ಬಂದು, ಅವನು ನಿಶೆ ತನನಾಗಿರುವುದನ್ನು ಕಂಡು ದುಃಖದಿಂದ ಮೂರ್ಛ ಬಿದ್ದಳು ನಿದ್ರೆಯಿಂದೆದ್ದಂತೆ ಸ್ವಲ್ಪಹೊತ್ತಿನಮೇಲೆ ಚೇತರಿಸಿಕೊಂಡು, ಮೃತ್ಯುಪಾಶಒದ್ಧನಾದ ಆ ವಾಲಿಯನ್ನು ನೋಡಿ, 'ಹಾ'ಆ‌ ಪುತ್ರನೇ” ಎಂದು ಗೋಳಿಡುತಿದ್ದಳು ಹೀಗೆ ಕುರರಪಕ್ಷಿಯಂತೆ ಕೂಗಿ ಪ್ರಲಾಪಿಸು ತಿರುವ ತಾರೆಯನ್ನೂ, ಅವಳ ಸಮೀಪದಲ್ಲಿ ದೈನ್ಯದಿಂದ ನಿಂತಿರುವ ಅಂಗ ದನನ್ನೂ ನೋಡಿದೊಡನೆ ಸುಗ್ರೀವನಿಗೂ ತಡೆಯಲಾರದ ದುಃಖವುಂಟಾ ಯಿತು ಇಲ್ಲಿಗೆ ಹತ್ತೊಂಬತ್ತನೆಯಸರ್ಗವು ( ತಾರೆಯು ದುಖದಿಂದ ವಾಲಿಯ ದೇಹವನ್ನಪ್ಪಿ. w•ಕೊಂಡು, ಅನೇಕವಿಧದಲ್ಲಿ ಪ್ರಲಾಪಿಸಿ, ಕೊನೆಗೆ ಪ್ರಾ! (ಯೋಪವೇಶವನ್ನು ಮಾಡುವುದಾಗಿ ನಿಶ್ಚಯಿಸಿದುದು ) ಹೀಗೆ ಪ್ರಾಣಾಂತಕರವಾದ ರಾಮಬಾಣದಿಂದ ಹತನಾಗಿ ನೆಲದಮೇ ಆ ಬಿದ್ದಿದ್ದ ತನ್ನ ಪತಿಯನ್ನು ನೋಡಿ,ಚಂದ್ರಮುಖಿಯಾದ ತಾರೆಯು, ದುಃ ಖದಿಂದ ಅವನ ಮೃತದೇಹವನ್ನಪ್ಪಿಕೊಂಡು ಗೋಳಿಡುತ್ತಿದ್ದಳು ಮಹೇ ನನಂತೆ ದಿವ್ಯತೇಜಸ್ಸಿನಿಂದ ಕೂಡಿ, ಮದದಾನೆಯಂತಿದ್ದ ಆ ಕಪಿರಾಜ