ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫೯ ಸರ್ಗ ೨೦ ) ಕಿಸ್ಮಿಂಧಾಕಾಂಡವು. ನು ಹತನಾಗಿ ಬಿದ್ದಿರುವುದನ್ನು ನೋಡುತಿದ್ದಷ್ಟೂ ತಾರೆಯ ಮನಸ್ಸು ಸಂಕಟದಿಂದ ಕುದಿಯುತಿತ್ತು ಬುಡದೊಡನೆ ಕಿತ್ತು ಹಾಕಿದ ಮರದಂ ತೆ ನಿಶ್ಲೇಷ್ಮನಾಗಿ ಬಿದ್ದಿರುವ ಆ ಪತಿಯನ್ನು ನೋಡಿ ಪ್ರಲಾಪಿಸಲಾ ರಂಭಿಸಿದಳು” “ಹಾಪ್ರಿಯನೆ' ಯುದ್ಧದಲ್ಲಿ ಭಯಂಕರವಾದ ಪರಾಕ್ರಮ ವುಳ್ಳವನಾಗಿ, ವೀರರಿಗೆಲ್ಲಾ ವೀರನಾಗಿ, ಸಮಸ್ತಕಪಿಗಳಿಗೂ ನಾಥನಾದ ನೀನು, ಈಗ ದುಃಖಿತಳಾಗಿ ಬಂದಿರುವ ನನ್ನನ್ನು ಎಂದಿನಂತೆ ಮಾತಾಡಿಸದಿರು ವುದೇಕೆ? ಹಾ ವೀರನೆ' ನಾನು ಎಂದಿಗೂ ನಿನ್ನಲ್ಲಿ ದೋಷವನ್ನೆಣಿಸಿದಳಲ್ಲವ ಲ್ಲಾ 'ಎಲೈ ವಾನರಸಿಂಹನೆ' ಏಳು' ಹೀಗೇಕ ನೆಲದಮೇಲೆ ಮಲಗಿರುವೆ? ತಮವಾದ ಹಾಸಿಗೆಯಲ್ಲಿ ಮಲಗಬಾರದೆ?ನಿಮ್ಮಂತಹ ಗಾಜಶ್ರೇಷ್ಠರು ಹೀ ಗೆ ಬರೀನೆಲದಮೇಲೆ ಮಲಗುವುದಂಟಿ? ಎಲೈ ಭೂನಾಥನೆ ' ನನಗಿಂತಲೂ ಈ ಭೂಮಿಯೇ ನಿನಗೆ ಹೆಚ್ಚು ಪ್ರೀತಿಪಾತ್ರಳಾದಳೆ? ಪ್ರಾಣವು ಹೋದ ರೂ ಆಕೆಯನ್ನು ಬಿಡಲಾರದೆ ಅಪ್ಪಿಕೊಂಡು, ನನ್ನನ್ನು ಹೀಗೆ ಅನಾ ದರಿಸು ತಿರುವೆಯಾ?ಎಲೈ ವೀರನೆ' ಈಗ ನಿನಗಾದರೋ,ನಿನ್ನ ಥರದಿಂದ,ಸ್ವರ್ಗ ಮಾರ್ಗದಲ್ಲಿಯೂ ಈ ಕಿಷಿಂಧೆಯಂತೆಯೇ ಮನೋಹರವಾದ ಬೇರೊಂದು ಸ್ಥಾನವು ಸಿದ್ಧವಾಗಿರುವುದೆಂಬುದರಲ್ಲಿ ಸಂದೇಹವಿಲ್ಲ ಆದರ ನಾವು ನಿ ನೊಡಗೂಡಿ ಇಲ್ಲಿನ ಮಕರಂದಗಂಧವುಳ್ಳ ತೋಟಗಳಲ್ಲಿ ಆಡಿದ ಆಟಗಳೆಲ್ಲ ವೂ ಇಂದಿಗೆ ತೀರಿತ್ತಲ್ಲವೆ? ಸಲಗಗಳಿಗೆಲ್ಲಾ ಸಲಗನಾಗಿದ್ದ ನೀನು ಹೀಗೆ ಮೃತಿಯನ್ನು ಹೊಂದಿದಮೇಲೆ, ನನಗೆ ಇನ್ನು ಯಾವವಿಧದಲ್ಲಿ ಸಂತೋ ಷವುಂಟು? ಇನ್ನು ನಾನು ನಿರಾಶಳಾದೆನಲ್ಲಾ 'ದುಃಖಸಮುದ್ರದಲ್ಲಿ ಮುಳು ಗಿಹೋದೆನು ಕೈಹಿಡಿದ ಗಂಡನಾದ ನೀನು ಹೀಗೆ ಸತ್ತುಬಿದ್ದಿರುವುದ ನ್ನು ನೋಡಿಯ, ನನ್ನ ಹೃದಯವು ಸಹಸ್ರಭಾಗವಾಗಿ ಒಡೆಯದಿರುವುದ ನ್ನು ನೋಡಿದರೆ, ಈ ನನ್ನ ಎದೆಯನ್ನು ಕಲ್ಲೆದೆಯೆಂದೇ ಎಣಿಸಬೇಕಾಗಿದೆ | ಎಲೈ ವಾನರರಾಜನೆ'ಸುಗ್ರೀವನ ಭಾರೈಯನ್ನ ಪಹರಿಸಿ ಆತನನ್ನು ದೇಶದಿಂ ದ ಓಡಿಸಿದುದಕ್ಕೆ ಈಗ ತಕ್ಕ ಫಲವುಂಟಾಯಿತೆ? ನಿನ್ನ ಶ್ರೇಯಃಕಾಂಕ್ಷಣಿ ಯಾದ ನಾನು,ನಿನಗೆ ಎಷ್ಟೋ ಹಿತವನ್ನು ಹೇಳಿದೆನು ನನ್ನನ್ನೂ ನಿಂದಿಸಿ ಕ ಳುಹಿಸಿದೆಯಲ್ಲಾ! ಎಲೆ ಆರ್ಯನೆ' ನೀನು ಈಗ ವೀರಸ್ವರ್ಗವನ್ನು ಸೇರಿದ