ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬೦ ಶ್ರೀಮದ್ರಾಮಾಯಣವು (ಸರ್ಗ ೨೦ ರೆ, ಅಲ್ಲಿ ರೂಪಯೌವನಗಳಿಂದ ಹೆಮ್ಮೆಗೊಂಡು, ಕಾಮತಂತ್ರಗಳಲ್ಲಿ ಕುಶ ಲರಾದ ಅಪ್ಪರಸ್ತಿಯರ ಮನಸ್ಸನ್ನೂ ನಿನ್ನ ಸೌಂದಯ್ಯವು ವಶಪಡಿಸುವು ದರಲ್ಲಿ ಸಂದೇಹವಿಲ್ಲ ಮುಖ್ಯವಾಗಿ ನಿನ್ನ ಪ್ರಾಣಗಳನ್ನು ಕೊನೆಮುಟ್ಟಿಸು ವ ದುಷ್ಕಾಲವು ಬಂದೊದಗಿತು ಅದರಿಂದಲೇ ಯಾರ ವೀರಕ್ಕೂ ವಶನಾ ಗದ ನೀನು, ಈ ಅಲ್ಪ ನಾದ ಸುಗ್ರೀವನ ಕೈಗೆ ಸಿಕ್ಕಿ ಸಾಯಬೇಕಾಯಿತು ಲೋಕೋತ್ತರವಾದ ಕಕುತ್ಮವಂಶದಲ್ಲಿ ಹುಟ್ಟಿಯೂ ಈ ರಾಮನು, ಇ ತರರೊಡನೆ ಯುದ್ಧ ಮಾಡುತ್ತಿದ್ದ ನಿನ್ನನ್ನು ನಿಷ್ಕಾರಣವಾಗಿ ಕೊಂ ದು, ಸ್ವಲ್ಪವಾದರೂ ಮನಸ್ಸಿನಲ್ಲಿ ಪಶ್ಚಾತ್ತಾಪವಿಲ್ಲದೆ ನಿಂತಿರುವನಲ್ಲಾ ! ಇದಕ್ಕಿಂತಲೂ ಅನುಚಿತವೇನುಂಟು ? ಹುಟ್ಟಿದಂದಿನಿಂದ ದುಃಖವನ್ನೇ ಕಂಡರಿಯದೆ ಬಳೆದ ನಾನು, ಈಗ ಈ ವೈಧವ್ಯವನ್ನೂ, ದುಃಖವನ್ನೂ, ಸಂಕಟವನ್ನೂ ಅನುಭವಿಸುತ್ತ, ದಿಕ್ಕಿಲ್ಲದವಳಂತೆ ದೈನ್ಯದಿಂದ ಬದುಕ ಬೇಕಾಯಿತೆ? ನನ್ನ ಪಾಡೂ ಹಾಗಿರಲಿ ! ಬಾಲ್ಯದಿಂದಲೂ ಅತಿಮೋಹ ದಿಂದ ಸುಖದಲ್ಲಿಯೇ ಬಳಸಲ್ಪಟ್ಟ ಸುಕುಮಾರಾಂಗನಾದ ಈ ಅಂಗದನ ಗತಿಯೇನು ? ಇವನ ಚಿಕ್ಕಪ್ಪನು ದಾಯಾದದ್ವೇಷದಿಂದ ಇನ್ನು ಮೇಲೆ ಆಗಾಗ ಇವನನ್ನು ಕೂರದೃಷ್ಟಿಯಿಂದ ನೋಡಿದರೆ ಇವನ ಅವಸ್ಥೆಯೇ | ನಾಗುವುದೋ ! ಎಲೆ ವತ್ವ ಅಂಗವಾ ' ಬಾ ! ನಿನ್ನ ತಂದೆಯನ್ನು ಈ - ಗಲೇ ಚೆನ್ನಾಗಿ ನೋಡಿಬಿಡು' ಇನ್ನು ಮೇಲೆ ನಿನಗೆ ನಿನ್ನ ತಂದೆಯ ದರ್ಶನವ್ರ ದುರ್ಲಭವಾಗಿ ಹೋಗುವುದು ಎಲೈ ಆರಪತ್ರನೆ ! ನಿನ್ನ ಪ್ರಿಯಪುತ್ರನಾದ ಅಂಗದನು ಬಂದು ನಿಂತಿರುವನು ನೋಡು' ನೀನು ಪರ ಲೋಕಪ್ರಯಾಣಕ್ಕೆ ಸಿದ್ಧನಾಗಿರುವೆಯಲ್ಲವೆ ನಿನ್ನ ಪುತ್ರನನ್ನು ಸಮಾಧಾ ನಪಡಿಸು' ಅವನ ತಲೆಯಪ್ಪಾ ಫಾಣಿಸು' ಅವನಿಗೆ ಹೇಳಬೇಕಾದ ಬುದ್ಧಿ ವಾದಗಳನ್ನು ಹೇಳು' ಆಹಾ' ಲೋಕೈಕವೀರನಾದ ನಿನ್ನನ್ನು ಕೊಲ್ಲುವ ವಿಷಯದಲ್ಲಿ ರಾಮನು ಎಂತಹ ಸಾಹಸವನ್ನು ಮಾಡಿದನು " ಹೇಗಾದರೂ ಹೋಗಲಿ! ಮುಖ್ಯವಾಗಿ ಅವನು ಸುಗ್ರೀವನಿಗೆ ಮಾಡಿಕೊಟ್ಟ ಪ್ರತಿಜ್ಞೆ ಯನ್ನು ತೀರಿಸಿ ಋಣಮುಕ್ತನಾದನು ಎಲೈ ಸುಗ್ರೀವನೆ' ನಿನ್ನ ಕೋರಿಕೆ ಯು ಕೈಗೂಡಿತೆ? ಇನ್ನು ನೀನು ಝುಮೆಯೊಡಗೂಡಿ ನಿಷ್ಕಂಟಕವಾಗಿ