ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೦]. ಕಿಷಿಂಧಾಕಂದವು ೧೪೬೧ ರಾಜ್ಯವನ್ನನುಭವಿಸು' ನಿನಗೆ ಶತ್ರುವಾಗಿದ್ದ ಸಹೋದರನನ್ನು ಕೊಂದಾ ಯಿತಷ್ಟೆ? ಹಾಪ್ರಿಯನೆ' ಇದೇನು' ನಾನು ಇಷ್ಟು ವಿಧದಲ್ಲಿ ಪ್ರಲಾಪಿಸುತಿ ದ್ದರೂ ನೀನು ಪ್ರೀತಿಯಿಂದ ನನ್ನನ್ನು ಮಾತಾಡಿಸದಿರುವುದೇಕೆ ? ಒಂದು ವೇಳೆ ನಿನಗೆ ನನ್ನಲ್ಲಿ ಪ್ರೀತಿಯಿಲ್ಲದಿದ್ದರೂ ಹೋಗಲಿ ! ನಿನ್ನ ಇತರಪತ್ತಿಯ ರೆಲ್ಲರೂ ಇಲ್ಲಿ ಬಂದು ನಿಂತಿರುವರು ಅವರನಾ ದರೂ ನೋಡುಎಂದು ಹು ಚೌಳಂತೆ ನಾನಾವಿಧದಿಂದ ಗೋಳಿಡುತಿದ್ದಳು ಅವಳ ಗೋಳಾಟವನ್ನು ಕೇ ಳಿ ಸುತ್ತಲೂ ಇದ್ದ ಇತರವಾನರಸೀಯರೆಲ್ಲರೂ, ಸಂಕಟದಿಂದ ತಪಿಸು ತ್ಯ, ದುಃಖಿತನಾದ ಅಂಗದನನ್ನು ಕರೆದು ಸಮಾಧಾನಪಡಿಸುತ್ತದೈನ್ಯದಿಂ ದ ಅಳುತಿದ್ದರು ತಾರಯು ಬಾರಿಬಾರಿಗೂ ತನ್ನ ಪತಿಯನ್ನು ನೋಡಿ ದುಃಖಿ ಸುತ್ತ ಆತನನ್ನು ಕುರಿತು ಹಾ' ಪ್ರಾಣನಾಥನೆ' ಮಹಾವೀರವುಳ್ಳ ನಿನ್ನ ತೋಳುಗಳು ಯಾವಾಗಲೂ ಅಂಗದಾಲಂಕೃತಗಳಾಗಿ ಶೋಭಿಸುತ್ತಿರುವು ವಲ್ಲವೆ' ಈ ನಿನ್ನ ತೋಳುಗಳಿಗೆ ಪ್ರಧಾನಭೂಷಣನಾದ ಈ ಅಂಗದನನ್ನೇ ಬಿಟ್ಟು, ನೀನು ಇಷ್ಟು ದೀರ್ಘಕಾಲಪ್ರಯಾಣಕ್ಕೆ ಸಿದ್ಧನಾಗಿರುವುದುಂಟೆ? ಗುಣಗಳಲ್ಲಿ ನಿನ್ನನ್ನೇ ಹೋಲುತ್ತಿರುವ ಈ ಪುತ್ರರತ್ನ ವನ್ನು ಬಿಟ್ಟು ಹೋ ಗುವುದು ನಿನಗುಚಿತವೆ? ಪತ್ರವತ್ಸಲನೆಂಬ ನಿನ್ನ ಖ್ಯಾತಿಯನ್ನುಳಿಸಿಕೊಳ್ಳ ಬೇಡವೆ' ಎಲೈ ಪ್ರಿಯನೆ' ನೀನು ನನ್ನ ನ್ಯೂ , ನಿನ್ನ ಪತ್ರನಾದ ಈ ಅಂಗದ ನನ್ನೂ ಹೀಗೆ ನಿರಾಕರಿಸಿ, ಚಿರಕಾಲಪ್ರಯಾಣಕ್ಕೆ ಸಿದ್ಧನಾಗಿರುವೆಯಲ್ಲಾ! ನಿನ್ನ ವಿಷಯದಲ್ಲಿ ನಾನಾಗಲಿ, ಅಂಗದನಾಗಲಿ ಮಾಡಿದ ಅಪ್ರಿಯವೇನು? ಎಲೈ ಮಹಾಬಾಹುವೆ?ಒಂದುವೇಳೆ ನಾನು ಅಜ್ಞಾನದಿಂದ ನಿನಗೆ ಏನಾದ ರೂ ಅಪ್ರಿಯವನ್ನು ಮಾಡಿದ್ದರೂ ಮನ್ನಿಸಿಬಿಡು ನಿನ್ನ ಪಾದಗಳಿಗೆ ತಲೆಯ ನ್ನು ಸೋಕಿಸಿ ಪ್ರಣಾಮಮಾಡುವೆನು ಎಂದು ನಾನಾವಿಧದಿಂದ ರೋದಿ ಸುತಿದ್ದಳು ಹೀಗೆ ತಾರೆಯು ಇತರವಾನರಸಿಯರೊಡನೆ ಸತಿಯ ಸಮೀ ಪದಲ್ಲಿ ಅಳುತ್ತಿದ್ದು, ಕೊನೆಗೆ ತನ್ನ ಸಂಕಟವನ್ನು ತಡೆಯಲಾರದೆ, ಆ ವಾಲಿ ಯು ಬಿದ್ದಿದ್ದ ಕಡೆಯಲ್ಲಿಯೇ ತಾನೂ ಪ್ರಾಯೋಪವೇಶವನ್ನು ಮಾಡಿ ಸಾ ಯುವುದಾಗಿ ನಿಶ್ಚಯಿಸಿಕೊಂಡಳು ಇಲ್ಲಿಗೆ ಇಪ್ಪತ್ತನೆಯಸರ್ಗವು