ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬೨ ಶ್ರೀಮದ್ರಾಮಾಯಣವು [ಸರ್ಗ ೨೧. ಕೈ ಹನುಮಂತನು ಶಾಸ್ಕಾರಗಳನ್ನು ತಿಳಿಸಿ,ದು ? ಖಿತೆಯಾದ ತಾರೆಯನ್ನು ಸಮಾಧಾನಪಡಿಸುತ್ತ ಅಂಗದನ ಶರೊವೃದ್ಧಿಯನ್ನು ನೋಡಿಕೊಂಡು | ಸಂತುಷ್ಟಳಾಗಿರುವಂತೆ " ಹೇಳಿದುದು ತಾರೆಯು ತನ್ನ ಪತಿಯೊಡನೆ ಸಹಮರಣವೇ ತನಗೆ ಎಲ್ಲಕ್ಕಿಂತ { ಲೂ ಮೇಲಾದ ಸುಖವೆಂದು ದು ಖಿಸುತ್ತಿದ್ದುದು ; - ಆಕಾಶದಿಂದುದಿರಿಬಿದ್ದ ತಾರೆಯಂತೆ ದುಃಖದಿಂದ ನೆಲದಲ್ಲಿ ಬಿದ್ದು ಹೊರಳುತ್ತಿರುವ ತಾರೆಯನ್ನು ನೋಡಿ, ವಾನರಶ್ರೇಷ್ಠನಾದ ಹನುಮಂತ ನು, ಆಕೆಯನ್ನು ಮೆಲ್ಲಗೆ ಸಮಾಧಾನಪಡಿಸುತ್ತ ಎಲೈ, ಪೂಜ್ಯಳೆ' ಲೋಕ ದಲ್ಲಿ ಯಾವ ಪ್ರಾಣಿಗಳಾದರೂ, ತಮ್ಮ ತಮ್ಮ ಗುಣದೋಷಗಳನ್ನನುಸರಿಸಿ ನಡೆಸಿದ ಸುಕೃತದುಷ್ಟತಗಳ ಫಲದಿಂದಲೇ ಪರಲೋಕದಲ್ಲಿ ಸುಖದುಃಖ ಗಳನ್ನನುಭವಿಸುವುವು ಅದನ್ನು ತಪ್ಪಿಸಿಕೊಳ್ಳುವುದಕ್ಕೆ ಯಾರಿಂದ ಸಾಧ್ಯವಲ್ಲ ಆದುದರಿಂದ ಲೋಕದಲ್ಲಿ ಪ್ರತಿಯೊಂದು ಪ್ರಾಣಿಯೂ ತನ್ನ ತನ್ನ ಆತ್ಮವನ್ನು ಕುರಿತೇ ಚಿಂತಿಸಬೇಕಾಗಿರುವುದು ಹೀಗೆ ನಿನ್ನ ಆತ್ಮವನ್ನು ಕುರಿತೇ ನೀನು ಚಿಂತಿಸಿ ದುಃಖಿಸಬೇಕಾಗಿರುವಾಗ, ಬೇರೊಬ್ಬರ ಚಿಂತೆಯು ನಿನಗೇಕೆ? ಸ್ವತಃ ಕೇವಲಹೀನಳಾದ ನೀನು ಮತ್ತೊಬ್ಬನ ದೈನ್ಯವನ್ನು ನೋಡಿ ಮರುಕಪಡುವೆಯಾ? ನೀರಿನ ಗುಳ್ಳೆಯಂತೆ ಕ್ಷಣಭಂಗುರವಾದ ಈ ಮನುಷ್ಯ ದೇಹದಲ್ಲಿ ಯಾರಿಗಾಗಿ ಯಾರು ಶೋಕಿಸಬಹುದು? ತಮ್ಮ ಬದು ಕೇ ತಮಗೆ ಸಂದಿಗ್ಧವಾಗಿರುವಾಗ ಮತ್ತೊಬ್ಬರಿಗಾಗಿ ದುಃಖಿಸಬೇಕೆ ? ಈ ದುಃಖವನ್ನು ಬಿಡು' ಕಳೆದುಹೋದುದನ್ನು ಕುರಿತು ಚಿಂತೆಯೇಕೆ ? ಪ್ರ ಕೃತದಲ್ಲಿ ನಿನ್ನ ಕಣ್ಣ ಮುಂದೆ ಬದುಕಿರುವ ಕುಮಾರನಾದ ಅಂಗದನನ್ನು ಚನ್ನಾಗಿ ಕಾಪಾಡಿಕೊಂಡು, ಮುಂದೆ ಇವನ ಪರವೃದ್ಧಿಗೆ ಬೇಕಾದ ಉ ಪಾಯಗಳಾಗುವವೆಂಬುದನ್ನು ಚಿಂತಿಸು' ಲೋಕದಲ್ಲಿ ಪ್ರಾಣಿಗಳಿಗೆ ಜನನ ಮರಣಗಳು ಸ್ಥಿರವಲ್ಲವೆಂಬುದನ್ನು ನೀನು ತಿಳಿಯದವಳಲ್ಲ. ಆದುದರಿಂದ ಎಲೈ ನೀತಿಜ್ಞಳೆ' ಈ ರೋದನವನ್ನು ಬಿಡು ' ಲೋಕದಲ್ಲಿ ಕೇವಲಶ್ರೀ