ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬೪ - ಶ್ರೀಮದ್ರಾಮಾಯಣವು (ಸರ್ಗ ೨7 ವೇ ಇದು' ದುಃಖದಿಂದ ಸುಮ್ಮನಿರುವುದಕ್ಕೆ ಇದು ಸಮಯವಲ್ಲ ಕಪಿರಾ ಜನಾದ ವಾಲಿಗೆ ಆಪರಸಂಸ್ಕಾರಗಳನ್ನು ನಡೆಸಬೇಕಾದುದೇ ಈಗಿನ ಮೊ ದಲನೆಯಕಾಠ್ಯವು ಅಂಗದನಿಗೆ ರಾಜ್ಯಾಭಿಷೇಕವನ್ನು ನಡೆಸಬೇಕಾದುದು ಎರಡನೆಯದು ಈ ಎರಡುಕಾರಗಳೂ ಈಗಲೇ ನಡೆಯಬೇಕು ನೀನು ನಿನ್ನ ಪುತ್ರನು ಸಿಂಹಾಸನವನ್ನೇರಿ ಕುಳ್ಳಿರುವುದನ್ನು ನೋಡಿದಕ್ಷಣದಲ್ಲಿ ಈ ನಿನ್ನ ದುಃಖವೆಲ್ಲವೂ ಶಾಂತವಾಗುವುದು ” ಎಂದನು ಪತಿಶೋಕದಿಂದ ಪೀ ಡಿತೆಯಾದ ತಾರೆಯು, ಆ ಹನುಮಂತನ ವಾಕ್ಯಕ್ಕೆ ಪ್ರತ್ಯುತ್ತರವನ್ನು ಹೇಳ ಲಾರಂಭಿಸಿ, “ಎಲೈ ಹನುಮಂತನೆ' ಈ ಅಂಗದಸಿಗೆ ಸಮಾನರಾದ ಇನ್ನೂ ನೂರಾರುಮಂದಿ ಮಕ್ಕಳನ್ನು ಪಡೆದಿದ್ದರೂ, ಅವರೆಲ್ಲರ ಮೇಿಯನ್ನೂ ನೋಡುವುದರಿಂದುಂಟಾಗುವ ಸುಖವು. ಈಗ ಇಲ್ಲಿ ಬಿದ್ದಿರುವ ವಾಲಿ ಯ ಮೃತದೇಹಸ್ಪರ್ಶದಿಂದುಂಟಾಗುವ ಸುಖಕ್ಕಣೆಯಾಗಲಾರದು ಈ ವಾಲಿಯ ಅಪರಸಂಸ್ಕಾರಗಳಿಗಾಗಲಿ, ಅಂಗದನ ಪಟ್ಟಾಭಿಷೇಕಕ್ಕಾಗಲಿ ಸೀಮಾತ್ರಳಾದ ನಾನೇನು ಮಾಡಬಲ್ಲೆನು? ಈ ಅಂಗದನುಂಟು' ಅವನ ಚಿಕ್ಕತಂದೆಯಾದ ಈ ಸುಗ್ರೀವನುಂಟು, ಇನ್ನು ಮೇಲೆ ಯಾವಕಾರಗಳ ನ್ನು ನಡೆಸುವುದಕ್ಕೂ ಅವನೇ ಬಾಧ್ಯನು ತಂದೆಯಿಲ್ಲದ ಮೇಲೆ ಸಮಸ್ತ ವಿಷ ಯದಲ್ಲಿಯೂ ಚಿಕ್ಕತಂದೆಯೇ ಬಾಧ್ಯನೇಹೊರತು ನಾನಲ್ಲ ನಾನರರಾಜ ನಾದ ಈ ವಾಲಿಯ ಪಾದವನ್ನಾಶ್ರಯಿಸುವುದಕ್ಕಿಂತಲೂ, ಈ ಲೋಕದಲ್ಲಿ ಯಾಗಲಿ, ಪರಲೋಕದಲ್ಲಿಯಾಗಲಿ, ನನಗೆ ಬೇರೊಂದೂ ಯುಕ್ತವಾಗಿ ತೋರಲಿಲ್ಲ ಆದುದರಿಂದ ಯುದ್ಧದಲ್ಲಿ ಶತ್ರುವನ್ನಿ ದಿರಿಸಿ ಹತನಾಗಿ ಬಿದ್ದ ಈ ವಾಲಿಯು ಮಲಗಿರುವ ಶಯನವೇ, ಈಗ ನನಗೂ ಮಲಗುವುದಕ್ಕೆ ಯೋಗ್ಯವಾದ ಸ್ಥಳವಾಗಿರುವುದು ಇದನ್ನು ಬಿಟ್ಟು ಬೇರೆಯಾವುದೂ ನನ ಗೆ ಯುಕ್ತವಲ್ಲ” ಎಂದಳು ಇಲ್ಲಿಗೆ ಇಪ್ಪತ್ತೊಂದನೆಯ ಸರ್ಗ ವು