ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩೫ ಸರ್ಗ ೨೨.] ಕಿಷಿಂಧಾಕಾಂಡವು (ಮೂರ್ಛಹೊಂದಿ ಮೃತಪ್ರಾಯನಾಗಿದ್ದ ವಾಲಿಯು ) 3 ಸ್ವಲ್ಪವಾಗಿಚೇತರಿಸಿಕೊಂಡುಮುಂದೆ ನಡೆಸಬೇಕಾದ ಕೆಲಸಗಳನ್ನು ತಿಳಿಸಿದುದು ಮೂರ್ಛಹೊಂದಿ ಅರ್ಥಪ್ರಾಣದಿಂದ ಸಂಕಟಪಡುತ್ತಿದ್ದ ವಾಲಿ ಯು, ಮೆಲ್ಲಗೆ ಕಣ್ಣು ಬಿಟ್ಟು, ಸುತ್ತಲೂ ನೋಡುತ್ತ ಮೆಲ್ಲಮೆಲ್ಲಗೆ ಉಸಿರು ಬಿಡುತಿದ್ದನು ಮೊದಲು ಆ ವಾಲಿಯು ಕಣ್ಣೆತ್ತಿ ನೋಡಿದಾಗ, ತನ್ನ ಮಗ ನಾದ ಅಂಗದನಮುಂದೆ ನಿಂತಿದ್ದ ಸುಗ್ರೀವನನ್ನು ಕಂಡನು ತನ್ನ ಕಾಲ್ಯದಲ್ಲಿ ಜಯಹೊಂದಿ ನಿಂತಿದ್ದ ಆತನನ್ನು ಕರೆದು, ಸ್ಪುಟಾಕ್ಷರಗಳೊಡನೆ ಸ್ನೇಹ ಪೂಕವಾದ ಮಾತಿನಿಂದ, ನಮ್ಮ ಸುಗ್ರೀವಾ' ನಾನು ನಿನ್ನನ್ನು ರಾ ಜ್ಯದಿಂದ ಹೊರಡಿಸಿ, ನಿನ್ನ ಪತ್ನಿ ಯನ್ನೂ ಅಪಹರಿಸಿದೆನೆಂದು, ನನ್ನ ವಿಷ ಯದಲ್ಲಿ ನೀನು ದೋಷವನ್ನು ಮನಸ್ಸಿನಲ್ಲಿಡಬೇಡ' ನಾನು ಈ ದುರ್ದಶೆ ಯನ್ನು ಹೊಂದಬೇಕೆಂಬ ವಿಧಿಯಿದ್ದುದಕ್ಕಾಗಿಯೇ ನನಗೆ ಆ ವಿಧವಾದ ಬುದ್ಧಿಮೋಹವುಂಟಾಯಿತು, ಅದೇ ನನ್ನ ನ್ನು ಬಲಾತ್ಕರಿಸಿ ಈ ಅಕೃತ್ಯವನ್ನೂ ಮಾಡಿಸಿತೆಂದು ಭಾವಿಸು' ಎಲೈವತ್ರನೆ' ನಾವಿಬ್ಬರೂ ಸೇರಿ ಈ ರಾಜ್ಯ ಸುಖವನ್ನಾಗಲಿ, ಒಡಹುಟ್ಟಿದ ಪ್ರೇಮದಿಂದುಂಟಾದ ಸಂತೋಷವನ್ನಾ ಗಲಿ, ಏಕಕಾಲದಲ್ಲಿ ಅನುಭವಿಸಬಾರದೆಂಬದೇ ದೈವಸಂಕಲ್ಪವಾಗಿತ್ತೆಂ ದು ನನಗೆ ತೋರಿರುವುದು ಆ ದೈವಸಂಕಲ್ಪವನ್ನು ಮೀರುವುದಕ್ಕೆ ಯಾ ರಿಂದ ಸಾಧ್ಯವು' ಎಲೈವನೆ' ಇದೋ ನಾನು ಯಮಲೋಕಪ್ರಯಾ ಣಕ್ಕೆ ಸಿದ್ಧನಾಗಿರುವೆನು ನೀನು ನಮ್ಮ ವಾನರರಾಜ್ಯವನ್ನು ಸ್ವೀಕರಿಸಿ ಪರಿಪಾಲಿಸು' ಈ ನನ್ನ ಪ್ರಾಣಗಳೊಡನೆ, ನನ್ನ ರಾಜ್ಯವೂ, ವಿಸ್ತಾರವಾದ ನನ್ನ ಸಂಪತ್ತೂ, ಯಾರಿಗೂ ಅಜಯ್ಯನೆಂಬ ನನ್ನ ಪ್ರಖ್ಯಾತಿಯೂ ಈಗ ನನ್ನನ್ನು ಬಿಟ್ಟು ಹೋಗುತ್ತಿರುವುದು ನಾನು ಈ ದುರವಸ್ಥೆಯಲ್ಲಿರುವಾಗ ನಿ ನಗೆ ಹೇಳುವ ಮಾತನ್ನು ತಪ್ಪದೆ ನಡೆಸಬೇಕು ಒಂದುವೇಳೆ ನಿನಗೆ ಅದನ್ನು ನಡೆಸುವುದು ಕಷ್ಟವೆಂದು ತೋರಿದರೂ ಪ್ರಯತ್ನ ಪಟ್ಟು ನಡೆಸಿಯೇ ತೀರ ಬೇಕು-ಇದೋ'ನನ್ನ ಪುತ್ರನಾದ ಅಂಗದನು ಇಲ್ಲಿ ಕಣ್ಣೀರುಬಿಡುತ್ತ ನೆಲದ ಮೇಲೆಬಿದ್ದು ಹೊರಳುವುದನ್ನು ನೋಡು' ಬಾಲ್ಯದಿಂದಲೂ, ಸುಖದಿಂದಲೇ