ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೦ ಶ್ರೀಮದ್ರಾಮಾಯಣವು [ಸರ್ಗ ೨೩ ಥಾ' ಈಗ ನಿನ್ನ ಸುತ್ತಲೂ ಎಷ್ಮಮಂದಿ ಭಲ್ಲಕವರರೂ, ವಾನರಿ ರೂ ನಿಂತು ಸೇವಿಸುತ್ತಿರುವರು ಅವರೆಲ್ಲರನ್ನೂ ನೀನು ಉಪೇಕ್ಷಿಸು ತಿರುವೆಯಲ್ಲಾ? ಇವರ ರೋದನಧ್ವನಿಗಳಾಗಲಿ, ದುಃಖಿತನಾದ ಅಂಗದನ ಗೋಳಾಟವಾಗಲಿ,ನನ್ನ ವಿಲಾಪವಾಗಲಿ ನಿನ್ನ ಕಿವಿಗೆ ಬೀಳುವುಲ್ಲವೆ?ನಾವು ಇಷ್ಟು ಗಟ್ಟಿಯಾಗಿ ಕೂಗಿದರೂ ನಿನಗೆ ಎಚ್ಚರವಾಗುವುದಿಲ್ಲವೆ? ಮೊದಲು ನೀನು ಯುದ್ಧದಲ್ಲಿ ಕೊಂಗಶತ್ರುಗಳನ್ನು ಎಲ್ಲಿಮಲಗಿಸುತಿದ್ದೆಯೋ ಅಂತಹ ವೀರಶಯನದಲ್ಲಿ ಈಗ ಸೀನೇ ಮಲಗಬೇಕಾಯಿತೆ? ನೀನು ಯುದ್ಧಪಾಯ ಣನಾದುದರಿಂದ ಯುದ್ಧದಲ್ಲಿಯೇ ನಿನಗೆ ಮರಣವುಂಟಾಯಿತು ಈಗ ನಿನ್ನ ಬಲವೂ ಪರಿಶುದ್ಧವಾಯಿತು ನಿನ್ನ ವಂಶವೂ ಶುದ್ಧವಾಯಿತು ಹಾ' ಪ್ರಿಯನೆ' ಅನಾಥೆಯಾದ ನನ್ನನ್ನು ಇಲ್ಲಿ ಒಂಟಿಯಾಗಿ ಬಿಟ್ಟು ಹೋ ಗುವುದುಚಿತವೆ? ಲೋಕದಲ್ಲಿ ಬುದ್ಧಿಶಾಲಿಯಾದವನು ಶೂರರಿಗೆ ಹೆಣ್ಣನ್ನು ಕೊಟ್ಟು ಮದುವೆಮಾಡಬಾರದು 'ಶೂರನಾದ ನಿನ್ನನ್ನು ಕೈಹಿಡಿದುದರಿಂದ ಲೇ ಈಗ ನಾನು ಈ ವೈಧವ್ಯವನ್ನು ಹೊಂದಿ ಕೆಟ್ಟೆನಲ್ಲವ? ನನ್ನ ಮಾ ನವೂ ಕಟ್ಟೆತು ನನ್ನ ಗೌರವವೂ ಹಾಳಾಯಿತು ನನಗೆ ಶಾಶ್ವತಫಲಪ್ರದ ವಾದ ಪತಿಶುಶೂಷೆಯಂಬ ಸದ್ದತಿಯೂ ಕಟ್ಟಿತು ಇಷ್ಟೆ ಸಾಲದೆ, ವಿ. ಶಾಲವಾದ ಶೋಕಸಾಗರದಲ್ಲಿಯೂ ನಾನು ಮುಳುಗಿಹೋದೆನು ಕಲನವಾ ದ ನನ್ನ ಹೃದಯವನ್ನು ಶಿಲಾಮಯವೆಂದೇ ಹೇಳಬೇಕ) ಕೈಹಿಡಿದ ಗಂಡ ನು ಮುಂದೆ ಸತ್ತು ಬಿದ್ದಿರುವುದನ್ನು ನೋಡಿಯೂ ಇದು ಸಹಭಾಗವಾ ಗಿ ಒಡೆಯದಿರುವುದಲ್ಲವೆ? ನೀನು ನನಗೆ ಪತಿಯುಮಾತ್ರವೇ ಅಲ್ಲ ! ನನ್ನಲ್ಲಿ ಕೇವಲಮಿತ್ರನಂತೆಯೂ ಇದ್ದು, ಸಹಜವಾದ ಪ್ರೀತಿಯಿಂದ ಪೋಷಿ ಸುತಿದ್ದೆಯಲ್ಲಾ' ಇಂತಹ ಪ್ರಾಣಪ್ರಿಯನಾದ ನಿನ್ನನ್ನು ಕಳೆದುಕೊಂಡ ರೂ ನನ್ನ ಎದೆಯು ಸೀಳಿಹೋಗದೆ ಕಲ್ಲಿನಂತೆ ದೃಢವಾಗಿರುವುದು ಯುದ್ಧ ದಲ್ಲಿ ಮಹಾಪರಾಕ್ರಮಿಯೆನಿಸಿಕೊಂಡ ಸಿನಗೂ ಹೀಗೆ ಮರಣವುಂಟಾಯಿತೆ ಎಷ್ಟು ಮಕ್ಕಳಿದ್ದರೇನು? ಎಷ್ಟು ಧನಧಾನ್ಯ ಸಮೃದ್ಧಿಯಿದ್ದರೇನು? ಗಂಡ ನಿಲ್ಲದ ಹೆಂಗಸು ಮುಂಡೆಯೆನಿಸಿಕೊಳ್ಳದಿರಲು ಎಲೈ ವೀರನೆ' ಆರಗಿನ ಬ ಇವುಳ್ಳ (ಇಂದ್ರಗೋಪದಂತೆ ಕೆಂಪಾದ) ಮೇಲುಹೊದ್ದಿಕೆಯಿಂದ ಕೂ