ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೩ || ಕಿಷಿಂಧಾಕಾಂಡವು. ೧೪೭೧ ಡಿದ ಸುಪ್ಪತ್ತಿಗೆಯಲ್ಲಿ ಮಲಗಿರುವಂತೆ, ನಿನ್ನ ದೇಹದಿಂದ ಹೊರಟ ಈ ರಕ್ಕೆ ಪ್ರವಾಹದಲ್ಲಿಯೇ ನೀನು ಮಲಗಬೇಕಾಯಿತೆ?ನೆಲದ ಮಣ್ಣಿನಿಂದಲೂ ರಕ್ತ ದಿಂದಲೂ ತುಂಬಿದ ಈ ನಿನ್ನ ದೇಹವನ್ನು, ಈಗ ನಾನು ನನ್ನ ತೋಳುಗಳಿಂ ದ ಹೇಗೆ ಅಪ್ಪಿಕೊಳ್ಳಲಿ' ನಿನ್ನೊಡನೆ ಭಯಂಕರವಾದ ವೈರವನ್ನು ಬಳಸಿ, ಪ್ರಾಣಭಯದಿಂದ ತತ್ತಳಿಸುತಿದ್ದ ಸುಗ್ರೀವನು, ಈಗ ಕೃತಕೃತ್ಯನಾದನು | ರಾಮನ ಒಂದೇ ಬಾಣದಿಂದ ಅವನ ಭಯವೆಲ್ಲವೂ ನೀಗಿತು ಹಾನಾಧನೆ ! ನಿನ್ನ ಎದೆಯಲ್ಲಿ ನಾಟಿಕೊಂಡಿರುವ ಈ ಕ್ರೂರಬಾಣವು ನಾನು ನಿನ್ನನ್ನು ಆಲಿಂಗಿಸಿಕೊಳ್ಳದಂತೆ ತಪ್ಪಿಸುತ್ತಿರುವುದಲ್ಲಾ ' ಮೃತನಾದ ನಿನ್ನನ್ನು ನೋಡುತ್ತಿರುವುದರಿಂದಲೇ ನನ್ನ ಆಸೆಯನ್ನು ತೀರಿಸಿಕೊಳ್ಳಬೇಕಾಗಿರುವುದು” ಎಂದು ನಾನಾವಿಧದಲ್ಲಿ ಗೋಳಿಡುತಿದ್ದಳು ಇಷ್ಟರಲ್ಲಿ ನೀಲನೆಂಬ ವಾನ ರಶ್ರೇಷ್ಠ ನು(ವಾಲಿಯಬಳಿಗೆ ಬಂದು, ತಗುಹೆಯಲ್ಲಿ ಹೊಕ್ಕಿರುವ ಹಾವ ನ್ನು ಹೊರಕ್ಕೆಳೆಯುವಂತ, ಅವನ ಎದೆಯಲ್ಲಿ ನಾಟಿದ್ದ ಬಾಣವನ್ನು ಕಿತ್ತುಬಿ ಟ್ಯನು ಆಗ ಕಿತ್ತಬಾಣದ ಕಾಂತಿಯು ಅಸ್ತಗಿರಿಯ ಶಿಖರದಿಂದ ಹೊರಟು ಬರುವ ಸೂರಪ್ರಭೆಯಂತೆ ಜ್ವಲಿಸುತಿತ್ತು ಸುಗ್ರೀವನ ಮುಷ್ಟಿಫುತಗ ಳಿಂದಲೂ,ರಾಮನ ಬಾಣಹತಿಯಿಂದಲೂ ಉಂಟಾದ ಗಾಯಗಳಿಂದ ಆವಾ ವಿಯ ಸಾಂಗಗಳಿಂದಲೂ ರಕ್ತವು ಸೋರುತ್ತ, ಕಮ್ಮಣ್ಣಿನಿಂದ ಕಲಿತು ಬೆಟ್ಟದಿಂದ ಬೀಳುವ ಮಳೆಯ ನೀರಿನ ಪ್ರವಾಹದಂತೆ ಕಾಣುತಿತ್ತು ತಾರೆ ಯು ಬಾರಿಬಾರಿಗೂ ಆವಾಲಿಯ ಮೈಮೇಲಿನ ಧೂಳಿಯನ್ನೊರೆಸುತ್ತ,ಅಸ್ತ್ರ ಹತನಾಗಿ ಬಿದ್ದಿರುವ ಅವನ ಮುಂದೆ ಕುಳಿತು, ತನ್ನ ಕಣ್ಣೀರುಗಳಿಂದ ಅವನ ಮೈಯನ್ನು ನೆನೆಸುತಿದ್ದಳು ಹೀಗೆ ತಾರೆಯು ರಕ್ತದಿಂದ ತೊಯ್ದ ಮೈಯು ತೃವನಾಗಿ ಬಿದ್ದಿರುವ ವಾಲಿಯನ್ನು ನೋಡುತ್ತ, ತನ್ನ ಮಗನಾದ ಅಂಗದ ನನ್ನು ಕುರಿತು, “ಎಲೈವತ್ಸನೆ' ನಿನ್ನ ತಂದೆಗುಂಟಾಗಿರುವ ಭಯಂಕರವಾದ ಈ ಚರಮಾವಸ್ಥೆಯನ್ನು ನೋಡಿದೆಯಾ? ಪಾಪಿಯಾದ ಸುಗ್ರೀವನು ತನ್ನ ವೈರವನ್ನು ಕೊನೆಗಾಣಿಸಿಬಿಟ್ಟನು ಎಲೈಪುತ್ರನೆ' ಬಾಲಸೂರನಂತೆ ಹೊ ಳೆಯುವ ಮೈಯುಳ್ಳವನಾಗಿ ಯಮಲೋಕಪ್ರಯಾಣಕ್ಕೆ ಸಿದ್ಧನಾಗಿರುವ ನಿನ್ನ ತಂದೆಗೆ ನಮಸ್ಕರಿಸುಎಂದಳು ಆಗ ಅಂಗದನು ಅಕ್ಷಣವೇ ಮುಂದೆ