ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೨ ಶ್ರೀಮದ್ರಾಮಾಯಣವು (ಸರ್ಗ, ೨೪, ಬಂದು,ದುಂಡಾದ ತನ್ನ ಎರಡು ಭುಜಗಳಿಂದಲೂ ತಂದೆಯ ಪಾದಗಳನ್ನು ಹಿಡಿದುಕೊಂಡು, ಎಲೈತಾತನೆ' ಅಂಗದನಾದ ನಾನು ನಮಸ್ಕರಿಸುವೆನು” ಎಂದನು ಆಗ ತಾರೆಯು ದುಃಖದಿಂದ, 'ಎಲೆ ನಾಥಾ'ಈ ಅಂಗದನು ನಮ ಸ್ಕರಿಸುವಾಗ (ಪತ್ರಾ' ದೀರ್ಘಯತ್ಯಂತನಾಗು” ಎಂದು ಆಶೀರ್ವಾ ದಮಾಡುತಿದ್ದ ನೀನು ಈಗ ಮಾತಾಡದಿರುವುದೇಕೆ? ಸಿಂಹದಿಂದ ಹತವಾಗಿ ಬಿಟ್ಟಿರುವ ವೃಷಭವನ್ನು ವತ್ಸ ಸಹಿತವಾದ ಹಸುವು ಬಂದು ನಕ್ಕುವಂತೆ, ಗ ತಪ್ರಾಣನಾದ ನಿನ್ನ ನ್ನು ನಾನೂ, ಈ ಅಂಗದನೂ ಬಂದು ಎಷ್ಟು ಲಾಲಿಸಿದ ರೇನು? ಮುಖ್ಯವಾಗಿ ನೀನು ಯುದ್ಧವೆಂಬ ಯಜ್ಞವನ್ನಾರಂಭಿಸಿ,ರಾಮಬಾ ಣವೆಂಬ ನೀರಿನಲ್ಲಿ ಅವಧೃತಸ್ನಾ ನವನ್ನೂ ನಡೆಸಿಬಿಟ್ಟಿಆದರೆ ನನ್ನನ್ನು ಬಿಟ್ಟು, ಅಪತ್ನಿ ಕನಾದ ನಿನ್ನ ಅವಚ್ಛತಾ ವವು ಹೇಗೆ ಸಫಲವಾದೀತು? ಅಯ್ಯ ನಾಥನೆ' ಇದೇನು? ಇಂದ್ರನು ನಿನ್ನಲ್ಲಿ ಪ್ರಸನ್ನ ನಾಗಿ ಅನುಗ್ರಹಿಸಿಕೊಟ್ಟ ಆ ಕಾಂಚನಮಾಲಿಕೆಯು, ಈಗ ನಿನ್ನ ಕರದಲ್ಲಿಲ್ಲದಿರುವುದಕ್ಕೆ ಕಾರಣವೇನು? ಎಲೈವೀರನೆ' ಸೂರನು ಅಸ್ತಂಗತನಾದರೂ ಅವನ ಪ್ರಭೆಯು ಮೇರು ವನ್ನು ಬಿಡದಂತೆ, ಪ್ರಾಣವು ನಿನ್ನನ್ನು ಬಿಟ್ಟುಹೋದರೂ ರಾಜಲಕ್ಷ್ಮಿ ಯು ನಿನ್ನನ್ನು ಬಿಡುವುದಿಲ್ಲ ಎಷ್ಟಾದರೇನು? ಮೊದಲು ನನ್ನ ಹಿತವಾದವನ್ನು ನೀನು ಕೇಳಲಿಲ್ಲ ನಿನ್ನನ್ನು ತಡೆಯುವುದಕ್ಕೂ ನನಗೆ ಸಾಧ್ಯವಿಲ್ಲದೆಹೋಯಿ ತು ಮುಖ್ಯವಾಗಿ ಈಗ ನೀನೊಬ್ಬನೇ ಹತನಾದೆಯೆಂದೆಣಿಸಬೇಡ' ನಾನೂ ಕೆಟ್ಟೆನ ಈ ಅಂಗದನೂ ಕೆಟ್ಟನು ಇಂದಿಗೆ ನಮ್ಮ ಸಮಸ್ತಭಾಗ್ಯವೂ ಕೈ ಬಿಟ್ಟು ಹೋದಂತೆಯೇ ಎಣಿಸಬೇಕಾಗಿದೆ” ಎಂದಳು ಇಲ್ಲಿಗೆ ಇಪ್ಪತ್ತು ಮೂ ರನೆಯ ಸರ್ಗವು ( ಸುಗ್ರೀವನ ದುಃಖವು ತಾರೆಯು ಆತನನ್ನು ಸಮಾ | ಧಾನಪಡಿಸಿ ರಾಮನಲ್ಲಿ ತನ್ನ ಪ್ರತಿಪಕ್ಕಿಯನ್ನು ತೋರಿಸಿದುದು ಹೀಗೆ ಮಿತಿಮೀರಿ ಕಣ್ಣೀರನ್ನು ಸುರಿಸುತ್ತ,ದುಃಖಸಮುದ್ರದಲ್ಲಿ ಮು ಳುಗಿದಂತಿದ್ದ ತಾರೆಯನ್ನು ನೋಡಿದಾಗ, ಸುಗ್ರೀವನಿಗೂ ಪಶ್ಚಾತ್ತಾಪವು ಹುಟ್ಟಿತು ತನ್ನಣ್ಣನ ಸಾವಿಗಾಗಿ ಮನಸ್ಸಿನಲ್ಲಿ ಸಂಕಟವುಂಟಾಯಿತು ಹೀಗೆ