ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೩ ಸರ್ಗ ೨೪ ] ಕಮೆಂಧಾಕಾಂಡವು ದುಃಖದಿಂದ ತಪಿಸುತ್ತ, ಆಗಾಗ ತಾರೆಯನ್ನು ನೋಡಿನೋಡಿ ತಾನೂ ಕ ಣ್ಣೀರುಬಿಡುತಿದ್ದನು ಹಾಗೆಯೇ ಮೆಲ್ಲಗೆ ರಾಮನ ಬಳಿಗೆ ಬಂದು ನಿಂತ ನು ಕೈಯಲ್ಲಿ ಧನುಸ್ಸನ್ನೂ,ಸರ್ಪಸಮಾನಗಳಾದ ಬಾಣಗಳನ್ನೂ ಧರಿಸಿನಿಂ ತಿರುವ ಸತ್ವಲಕ್ಷಣಲಕ್ಷಿತನಾದ ಆ ರಾಮನ ಪಕ್ಕದಲ್ಲಿ ನಿಂತು, ಯಶಸ್ವಿ ಯಾದ ಆತನನ್ನು ಕುರಿತು, (ಎಲೈ ರಾಜೇಂದ್ರನೆ ! ನೀನಂತೂ ನನಗೆ ಪ್ರತಿಜ್ಞೆ ಮಾಡಿಕೊಟ್ಟ ಕಾಠ್ಯವನ್ನು ನಿರ್ವಹಿಸಿಬಿಟ್ಟೆ ! ಆ ಕಾರಕ್ಕೆ ಫಲವೂ ಸನ್ನಿಹಿತವಾಗಿರುವುದು ಆದರೇನು ? ಈಗ ನನಗೆ ರಾಜ್ಯಭೋ ಗಗಳಲ್ಲಿ ಆಸಯ ತಪ್ಪಿಹೋಯಿತು ಕೊನೆಗೆ ನನ್ನ ಜೀವದಮೇಲೆಯೇ ನನಗೆ ಆಸಯಿಲ್ಲ ಇದೊ' ಇತ್ತಲಾಗಿ ನನ್ನಣ್ಣನ ಪ್ರಿಯಪತ್ನಿ ಯಾದ ತಾರೆ ಯು, ತಡೆಯಲಾರದ ಸಂಕಟದಿಂದ ರೋದಿಸುತ್ತಿರುವಳು ಅತ್ತಲಾಗಿ ನಮ್ಮ ನಗರವಾಸಿಗಳೆಲ್ಲರೂ ದುಃಖದಿಂದ ಕೊರಗಿ ಕೂಗಿಡುತ್ತಿರುವರು ಈ ಅಂಗದನ ದುಃಖವನ್ನು ನೋಡಿದರೆ, ಇನ್ನು ಮೇಲೆ ಇವನು ಬದುಕಿರುವ ನೋ ಇಲ್ಲವೋ ಎಂಬ ಸಂದೇಹವೇ ಉಂಟಾಗುತ್ತಿರುವುದು ನಾನು ಅಜ್ಞಾ ನದಿಂದ ನನ್ನ ನನ್ನೇ ಕೊಲ್ಲಿಸಿದುದಲ್ಲದೆ, ಈ ಸ್ಥಿತಿಯಲ್ಲಿ ರಾಜ್ಯಸುಖ ವನ್ನೂ ಅನುಭವಿಸಬೇಕೆ? ರಾಮಾ' ಈಗ ನನಗೆ ರಾಜ್ಯದಲ್ಲಿ ಆಸೆಯೇ ಹೋ ಯಿತು ಏನೋ ಕೂಪದಿಂದಲೂ, ಈರ್ಷ್ಮೆಯಿಂದಲೂ, ಬಹುಕಷ್ಟದ ಶೆಗೆ ಸಿಕ್ಕಿಬಿದ್ದ ಜಿಹಾಸೆಯಿಂದಲೂ ನಾನು ಮೊದಲು ಅಜ್ಞಾನವಶನಾಗಿ, ಅಣ್ಣನನ್ನೇ ಕೊಲ್ಲಿಸಿಬಿಟ್ಟೆನು ಈಗ ವಾನರೇಂದ್ರನಾದ ಆತನು ಸತ್ತು ಬಿದ್ದಿ ರುವುದನ್ನು ನೋಡಿದಮೇಲೆ, ಆ ಕ್ರೋಧೋತ್ಸಾಹಗಳೆಲ್ಲವೂ ಅಡಗಿಹೋ ದುವು ಈಗ ತೀವ್ರದುಃಖದಿಂದ ತಪಿಸುತ್ತಿರುವೆನು ಈಗ ನನಗೆ ಋಶ್ಯ ಮೂಕಪಕ್ವತವಾಸವೇ ಮೇಲೆಂದು ತೋರಿರುವುದು ವಾನರಯೋಗ್ಯವಾದ ನಮ್ಮ ಸ್ವವೃತ್ತಿಯನ್ನೇ ಅವಲಂಬಿಸಿ, ಆ ಚಿತ್ರಕೂಟದಲ್ಲಿಯೇ ಹೇಗೋ ಕಾಲವನ್ನು ಕಳೆದುಬಿಡುವುದು ಉತ್ತಮವೆಂದು ನನಗೆ ತೋರಿರುವುದೇಕೊ ರತು, ಈಗ ಸ್ವರ್ಗವೇ ಕೈಗೆ ಸೇರಿದರೂ ನನಗೆ ರುಚಿಸುವುದಿಲ್ಲ ರಾಮಾ' ಈಗ ನಾನು ಇನ್ನೆಷ್ಟು ಹೇಳಿದರೇನು? ಹಿಂದೆ ಅನೇಕಯುದ್ಧಗಳಲ್ಲಿ ಈ ನನ್ನಣ್ಣನು ನನ್ನನ್ನು ಹೊಡೆದೋಡಿಸುವಾಗಲೂ, “ನಾನು ನಿನ್ನನ್ನು ಕೊಲ್ಲಲಾರೆನು ! 93