ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೪ ಶ್ರೀಮದ್ರಾಮಾಯಣವು [ಸರ್ಗ, ೨೪. ಬದುಕು' ಹೋಗು ” ಎಂದು ಮರುಕದಿಂದ ಕೊಲ್ಲದೆ ಬಿಟ್ಟಿರುವನು ಕೃತ ಘ್ನು ನಾದ ನಾನಾದರೋ ಆ ಅಣ್ಣನನ್ನೆ ಕೊಲ್ಲಿಸಿದೆನಲ್ಲಾ ' ಮುಖ್ಯ ವಾಗಿ ಆತನು ಮಹಾತ್ಮನಾದುದರಿಂದ, ಅವನ ಗುಣಕ್ಕೆ ತಕ್ಕ ಮಾತುಗಳನ್ನೇ ಆಡಿದನು.ಪಾಪಿಯಾದ ನಾನಾದರೋ ನನ್ನ ಯೋಗ್ಯತೆಗೆ ತಕ್ಕಂತೆ ಈ ಪಾ ಪಕೃತ್ಯವನ್ನು ನಡೆಸಿಬಿಟ್ಟೆನು ಲೋಕದಲ್ಲಿ ಬೇರೆಯಾವನು ನನ್ನಂತೆ ದುರಾಸೆ ಗೊಳಗಾಗಿ ರಾಜ್ಯಸುಖಕ್ಕೂ, ಅಣ್ಣನ ಸಾವಿನಿಂದುಂಟಾದ ದುಃಖಕ್ಕೂ ಇ ರುವತಾರತಮ್ಯವನ್ನೂ ವಿಚಾರಿಸದೆ,ಹೀಗೆ ಮಹಾತ್ಮನಾದ ಅಣ್ಣನನ್ನೇ ಕೊ ಲ್ಲಿಸುವನು ನನ್ನ ನಾದರೋ ತನ್ನ ಮಹತ್ಯಕ್ಕೆ ಲೋಪವು ಬರಬಾರದೆಂ ಬುದಕ್ಕಾಗಿಯೇ, ಹಿಂದೆ ಅನೇಕಯುದ್ಧಗಳಲ್ಲಿ ನನ್ನನ್ನು ಕೊಲ್ಲದೆ ಮನ್ನಿಸಿಬಿಟ್ಟ ನು ನಾನಾದರೋ ನನ್ನ ದುರ್ಬುದ್ಧಿಗೆ ತಕ್ಕಂತೆ ನೀತಿಯನ್ನು ಮೀರಿ ಆ ಅಣ್ಣ ನನ್ನೇ ಕೊಲ್ಲಿಸಿದೆನು ಹಿಂದಿನ ಯುದ್ಧದಲ್ಲಿ ಒಮ್ಮೆ ಈತನು ಬೀಸಿಬಡಿದ ಮರ ದ ಕೊಂಬೆಗಳಿಂದ, ನಾನು ಮೈಮುರಿಸಿಕೊಂಡು ಅಳುತ್ತ ಕುಳಿತಿರುವಾಗ, ಈ ನನ್ನಣ್ಣನು ಎಷ್ಟೋ ಮರುಕದಿಂದ ಬಂದು, ನನ್ನನ್ನು ನೋಡಿ ಸಮಾ ಧಾನವಾಕ್ಯದಿಂದ ಇನ್ನು ಮೇಲಾದರೂ ನೀನು ಯುದ್ಧಕ್ಕೆ ಬರಬೇಡ ! ಹೋಗು” ಎಂದು ಹೇಳಿ ಕಳುಹಿಸಿಬಿಟ್ಟನು ಇದರಿಂದ ಅವನು ತನ್ನ ಒಡ ಹುಟ್ಟಿದ ಪ್ರೇಮವನ್ನೂ, ತನ್ನ ಸೌಜನ್ಯವನ್ನೂ ,ಧರ್ಮವನ್ನೂ ಬಿಡದೆ ಕಾ ಪಾಡಿಕೊಂಡನು ಪಾಪಿಯಾದ ನಾನಾದರೂ ಈ ದುಷ್ಕೃತ್ಯದಿಂದ ನನ್ನ ಕೋಪವನ್ನೂ, ನನ್ನ ದುರಾಸೆಯನ್ನೂ, ನನ್ನ ಕಪಿಸ್ವಭಾವವನ್ನೂ ಚೆನ್ನಾಗಿ ಹೊರಪಡಿಸಿಬಿಟ್ಟೆನು ರಾಮಾ ! ಈಗ ನಾನು ಎಷ್ಟು ಪರಿತಪಿಸಿದ ರೇನು' ಇಂದ್ರನು ತಮ್ಮ ಪುತ್ರನಾದ ವಿಶ್ವರೂಪವನ್ನು ಕೊಂದು,ಮಹಾ ಪಾತಕಕ್ಕೊಳಗಾದಂತೆ, ನಾನೂ ಒಡಹುಟ್ಟಿದ ಅಣ್ಣನನ್ನೇ ಕೊಂದು ಪಾ ಪಿಯಾದೆನು ಈಗ ನಾನು ನಡೆಸಿದ ಪಾಪಕೃತ್ಯವು ಸ ತಸ್ತಿಕನಿಂದಿತ ವಾದುದು ಮನಸ್ಸಿನಿಂದಲೂ ನೆನೆಸತಕ್ಕುದಲ್ಲ ಈ ದುರಾಶೆಯು ಯಾವ ಫಮೌತುಕನಿಗೂ ಹುಟ್ಟತಕ್ಕುದಲ್ಲ ಹೆಚ್ಚಾಗಿ ಹೇಳಿದುದರಿಂದೇನು? ಕಣ್ಣಿಂದ ನೋಡಿ ಸಹಿಸಬಾರದ ಪಾಪಕಾರವನ್ನು ಮಾಡಿಬಿಟ್ಟೆನು ಎಲೈ ಮಿತ್ರನೆ' ಪೂತ್ವದಲ್ಲಿ ಇಂದ್ರನಿಗೆ ವಿಶ್ವರೂಪನನ್ನು ಕೊಂದುದರಿಂದ ಬಂದ ಪಾಪನ