ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೪ ] ಕಿಷಿಂಧಾಕಾಂಡವು ೧೪೭೫ ನ್ನು # ಈ ಭೂಮಿಯೂ, ನೀರೂ, ಮರಗಳೂ, ಸ್ತ್ರೀಯರೂ ಹಂಚಿ ಕೊಂಡುಬಿಟ್ಟರು ಭಾಗ್ಯವಂತರಿಗೆ ನಾಲ್ಕು ಕಡೆಗಳಿಂದಲೂ ಸಹಾಯಸಂ ಪತ್ತು ಒದಗಿಬರುವುದು ಕಾಡುಕಪಿಯಾದ ನನ್ನ ಪಾಪವನ್ನು ಹೊತ್ತು ಕೊಳ್ಳುವುದಕ್ಕೆ ಯಾರುತಾನೇ ಇಷ್ಟ ಪಡುವರು? ಅಧರ್ಮಯುಕ್ತವಾಗಿ ವಂಶನಾಶಕ್ಕೆ ಹೇತುವಾದ ಈ ಫರಕೃತ್ಯವನ್ನು ನಡೆಸಿಬಿಟ್ಟ ಮೇಲೆ, ನಾ ನು ಯಾವ ಪ್ರಜೆಗಳ ಗೌರವಕ್ಕೆ ಪಾತ್ರನಾಗುವೆನು ? ನಾನು ಯ್ ವರಾಜ್ಯಕ್ಕೂ ಅರ್ಹನಲ್ಲ ಇನ್ನು ನನಗೆ ಮುಖ್ಯರಾಜ್ಯಾಭಿಷೇಕವೆಂದರೇನು ? ಕೇವಲನಿಂದ್ಯವಾಗಿಯೂ, ತುಚ್ಛವಾಗಿಯೂ, ಸಲೋಕಕ್ಕೂ ತ್ಯಾಜ್ಯವಾ ಗಿಯೂ ಇರುವ ಪಾಪವನ್ನು ನಡೆಸಿಬಿಟ್ಟಿರುವೆನು ಮಳೆಯ ನೀರಿನ ಪ್ರವಾ ಹವು ಒಟ್ಟಾಗಿಸೇರಿ, ವೇಗದಿಂದ ಬಂದು ಹಳ್ಳದಲ್ಲಿ ದುಮ್ಮಿಕ್ಕುವಂತೆ,ತಡೆಯ ಲಾರದ ಶೋಕಭಾರವು ನನ್ನ ಮನಸ್ಸನ್ನು ತುಂಬಿಬಿಟ್ಟಿರುವುದು ಭ್ರಾತೃ ಹತ್ಯೆಯೆಂಬ ಬೆನ್ನು ಮತ್ತು ಬಾಲಗಳಿಂದಲೂ, ಅವನ ಮನಸ್ಸಂತಾಪಗಳೆಂಬ ಸುಂಡಿಲು, ಕಣ್ಣು, ತಲೆ, ಕೊಂಬುಗಳೆಂಬ ಮುಂದಿನ ಅವಯವಗಳಿಂದ ಲೂ ಕೂಡಿದ ಮಹಾಪಾತಕವೆಂಬ ಮದದಾನೆಯು, ನದಿಯ ದಡವನ್ನು ತಿ ವಿದು ಕೆಡಹುವಂತೆ, ನಾನಾವಿಧವಾಗಿ ನನ್ನ ನ್ನು ಹಿಂಸಿಸುತ್ತಿರುವುದು ಬ ಣ್ಣಗೆಟ್ಟ ಬೆಳ್ಳಿಯನ್ನು ಬೆಂಕಿಯಲ್ಲಿಟ್ಟು, ಊದುವಾಗ, ಅದು ಕಿಟ್ಟವನ್ನು ಬಿ ಟ್ಯ, ಬೇರ್ಪ್ಪಡುವಂತೆ, ನನಗೆ ಕುಲಕ್ರಮಾಗತವಾಗಿರುವ ಸಚ್ಚರಿತ್ರಗಳೆಲ್ಲ ವೂ, ನನ್ನ ಮನಸ್ಸಿನಲ್ಲಿರುವ ಫೋರಪಾಪವನ್ನು ನೋಡಿ ಸಹಿಸಲಾರದೆ, ನ ನ್ನ ಸಂಬಂಧವನ್ನೇ ಬಿಟ್ಟು ಹಿಂತಿರುಗಿ ಹೋಗುತ್ತಿರುವುವು ಎಲೈ ಮಿತ್ರನೆ' ತಂದೆಯ ಮರಣಕ್ಕಾಗಿ ಈ ಅಂಗದನು ತಾಳಲಾರದ ಸಂಕಟದಿಂದ ತಪಿ ಸುವುದನ್ನು ನೋಡಿ, ಮಹಾಬಲಾಡ್ಯರಾದ ಈ ವಾನರರೆಲ್ಲರಿಗೂ ಈಗಲೇ ಅರ್ಧಪ್ರಾಣವು ಹೋದಂತೆ ಕಾಣುವುದು ಈ ಅನರಗಳಿಗೆಲ್ಲಾ ನಾನೇ ಮೂಲವಾದೆನಲ್ಲಾ ' ಸಾಜನ್ಯದಿಂದಲೂ, ತಂದೆತಾಯಿಗಳಲ್ಲಿ ವಿಧೇಯತೆ ಯಿಂದಲೂ ನಡೆದುಕೊಳ್ಳುವ ಪುತ್ರರನ್ನು ಲೋಕದಲ್ಲಿ ಸುಲಭವಾಗಿ

  • ಭೂಮಿಯಲ್ಲಿ ಊಷರರೂಪದಿಂದಲೂ, ನೀರಿನಲ್ಲಿ ನೆರೆಯ ರೂಪದಿಂದ ಲೂ, ಮರಗಳಲ್ಲಿ ಅಂಟಿನರೂಪದಿಂದಲೂ, ಸ್ತ್ರೀಯರಲ್ಲಿ ರಜಸ್ಸಿನ ರೂಪದಿಂದಲೂ ಇಂದ್ರನ ಪಾಪವು ಹಂಚಿಡಲ್ಪಟ್ಟಿರುವುದೆಂದು ಪೂರಕಥೆಯು