ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೭೩ ಶ್ರೀಮದ್ರಾಮಾಯಣವು (ಸರ್ಗ, ೨೪. ನೋಡಬಹುದು ಆದರೆ ಈ ಅಂಗದನಂತಿರುವ ಸುಪುತ್ರನನ್ನು ಪಡೆಯು ವುದುಮಾತ್ರ ದುರ್ಲಭವು ಮತ್ತು ಯಾವ ದೇಶದಲ್ಲಿಯಾದರೂ ಇತರ ಬಂಧುಗಳನ್ನು ಪಡೆಯಬಹುದೇಹೊರತು ಒಡಹುಟ್ಟಿದವರ ಸಾನ್ನಿಧ್ಯವು ಸಿಕ್ಕಲಾರದು ಎಲೆ ವೀರಾಗ್ರಣಿ' ಒಂದುವೇಳೆ ಆಂಗದನು ಜೀವಿಸಿರು ವಪಕ್ಷದಲ್ಲಿ, ಅವನ ತಾಯಿಯಾದ ತಾರೆಯು ಅವನನ್ನು ರಕ್ಷಿಸುವ ಉದ್ದೇಶ ದಿಂದಲಾದರೂ ಬದುಕಿರಬಹುದು ಹಾಗಿಲ್ಲದೆ ಅಂಗದನು ಪಿತೃವಿಯೋ ಗದುಃಖದಿಂದ ಈಗಲೇ ಪ್ರಾಣವನ್ನು ಬಿಡುವಪಕ್ಷದಲ್ಲಿ, ತಾರೆಯೂ ಬ ದುಕಲಾರಳೆಂಬುದೇ ನಿಶ್ಚಯವು ಇನ್ನು ಮಹಾಪಾಪಿಯಾದ ನಾನು ಬದು ಕಿ ಫಲವೇನು? ನಾನೂ ಈಗಲೇ ಈ ನನ್ನ ಸಹೋದರನೊಡನೆಯೂ, ವತ್ಸ ನಾದ ಈ ಅಂಗದನೊಡನೆಯೂ ಸೇರಿ, ಅವರಿಬ್ಬರಿಗೂ ಸಂಗಡಿಗನಾಗಿ ಈ ರಿಯುವ ಬೆಂಕಿಯಲ್ಲಿ ಬಿದ್ದುಬಿಡುವೆನು ರಾಮಾ"ಇದರಿಂದ ನಿನ್ನ ಕಾರವು ಕೆಟ್ಟು ಹೋಗುವುದೆಂದೆಣಿಸಬೇಡ' ಈ ವಾನರವೀರರೆಲ್ಲರೂ ನಿನ್ನ ಆಜ್ಞೆಗೆ ಆಧೀನರಾಗಿ ಸೀತಯನ್ನು ಹುಡುಕಿಬರುವರು ಇದಕ್ಕಾಗಿ ನಾನಿರಬೇಕಾದು ದಿಲ್ಲ' ನೀನೇ ಅಸಾಧಾರಣಶಕ್ತಿಯುಳ್ಳವನಾದುದರಿಂದ, ನಾನು ಸತ್ತರೂ ನಿನ್ನ ಕಾಠ್ಯವು ಪೂ‌ವಾಗಿ ಸಿದ್ಧಿಯನ್ನು ಹೊಂದುವುದರಲ್ಲಿ ಸಂದೇಹವಿಲ್ಲ ಇಂತಹ ಪಾಪಕಾರವನ್ನು ಮಾಡಿದ ಕುಲಗೇಡಿಯಾದ ನಾನು, ಇನ್ನು ಮೇ ಲೆ ಭೂಮಿಯಲ್ಲಿ ತಲೆಯೆತ್ತಿ ಬದುಕಿರುವುದೇ ಉಚಿತವಲ್ಲ ಇನ್ನು ಅಗ್ನಿ ಪ್ರ ವೇಶಕ್ಕೆ ನನಗೆ ಅನುಜ್ಞೆಯನ್ನು ಕೊಡು ” ಎಂದನು ಹೀಗೆ ದುಃಖದಿಂದ ಕೊರಗುತ್ತಿರುವ ಸುಗ್ರೀವನ ಮಾತನ್ನು ಕೇಳಿ ರಾಮನ ಕಣ್ಣುಗಳಲ್ಲಿಯೂ ಪಳಪಳನೆ ನೀರು ಸುರಿಯಿತು ಅವನಿಗೂ ಪರಿತಾಪವುಂಟಾಯಿತು ಭೂದೇ ವಿಯಂತೆ ತಾಳ್ಮೆಯುಳ್ಳವನಾಗಿಯೂ, ಲೋಕರಕ್ಷಕನಾಗಿಯೂ ಇರುವ ಆ ಶ್ರೀ ರಾಮನೂಕೂಡ ಒಂದು ಮುಹೂರ್ತಕಾಲದವರೆಗೆ ಏನೂ ತೊರಣೆ ಸಬ್ಬನಾಗಿದ್ದನು ಅತ್ತಲಾಗಿ ವ್ಯಸನಸಮುದ್ರದಲ್ಲಿ ಮುಳುಗಿ ಆಗಾಗ ತನ್ನನ್ನೇ ನೋಡಿ ರೋದಿಸುತ್ತಿರುವ ತಾರೆಯನ್ನು ನೋಡಿದಾಗ, ಅವಳಲ್ಲಿ ಯೂ ರಾಮನಿಗೆ ಬಹಳ ಮರುಕವು ಹುಟ್ಟಿ, ಅವಳನ್ನು ಸಮಾಧಾನಪಡಿಸಬೇ ಕೆಂದು ಬಂದನು ಅಷ್ಟರಲ್ಲಿ ತನ್ನ ಪತಿಯನ್ನು ಆಗಾಗ ಅಪ್ಪಿಕೊಳ್ಳು ತ್ಯ, ನೆಲದಮೇಲೆ ಹೊರಳುತಿದ್ದ ಆ ತಾರೆಯನ್ನು, ಅಲ್ಲಿದ್ದ ಕಪಿಶ್ರೇಷ್ಠರೆ