ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೪ ] ಕಿಷಿಂಧಾಕಾಂಡವು ೧೪ee ಲ್ಲರೂ ಮೇಲಕ್ಕೆತ್ತಿ ಕುಳ್ಳಿರಿಸಿ ಅನೇಕವಿಧದಿಂದ ಸಮಾಧಾನಪಡಿಸಿದರು | ತಾರೆಯು ಪತಿಯನ್ನಗಲಲಾರದೆ ದುಃಖಾತಿಶಯದಿಂದ ರೋದಿಸುತ್ತ, ಆ ವನಮೇಲೆ ಬಿದ್ದು ಹೊರಳುತಿದ್ದಳು ಕಪಿಮಂತ್ರಿಗಳು ಬಲಾತ್ಕಾರದಿಂದ ಅವಳನ್ನು ಕರೆತಂದರು ಆಗ ತಾರೆಯು ರಾಮನಬಳಿಗೆ ಬಂದು, ಧನುರ್ಧಾ ರಿಯಾಗಿ ಸೂರನಂತೆ ಜ್ವಲಿಸುತಿದ್ದ ಆ ರಾಮನನ್ನು ಮಟ್ಟದೃಷ್ಟಿಯಿಂ ದ ನೋಡುತಿದ್ದಳು, ಮೃಗನೇತ್ರೆಯಾದ ಆ ತಾರೆಯು, ಸಮಸ್ತರಾಜ ಲಕ್ಷ ಣಗಳಿಂದ ಕೂಡಿದವನಾಗಿಯೂ, ಹಿಂದೆ ಎಂದೂ ಕಾಣದ ರೂಪಾತಿಶಯ ವುಳ್ಳವನಾಗಿಯೂ ಪುಂಡರೀಕಾಕ್ಷನಾಗಿಯೂ ಪುರುಷೋತ್ತಮನಾಗಿ ಯೂ ಇರುವ ಆತನನ್ನು ನೋಡಿ, ಇವನೇ ವಾಲಿಯನ್ನು ಕೊಂದ ಆ ರಾ ಮನೆಂದು ತಿಳಿದುಕೊಂಡಳು ಪೂಜ್ಯಳಾದ ಆ ತಾರೆಯು ದುಃಖಿತೆಯಾಗಿ ಸಂಕಟದಿಂದ ಆಗಾಗ ಪ್ರಜ್ಞೆತಪ್ಪ, ಇಂದ್ರಸಮಾನನಾಗಿಯೂ, ಮ ಹಾನುಭಾವನಾಗಿಯೂ ಇರುವ ಆ ರಾಮನ ಸಮೀಪಕ್ಕ ಆತುರದಿಂದ ಬಂ ದಳು ದುಃಖದಿಂದ ಆಕಗೆ ತಡೆಯಲಾರದ ಕೋಪವುಂಟಾಯಿತು ಅವಳ ದೇಹವೇ ಅವಳ ಸ್ವಾಧೀನವಿಲ್ಲದೆ ಹೋಯಿತು ಅವಳು ಉದಾರಮನಸ್ಸು ಇವಳಾಗಿಯೂ, ಶುದ್ಧ ಸ್ವಭಾವಳಾಗಿಯೂ ಇದ್ದರೂ, ಕೂರಬಾಣ ದಿಂದ ತನ್ನ ಪತಿಯನ್ನು ಕೊಂದ ರಾಮನನ್ನು ನೋಡಿ, ಕೋಪವನ್ನು ತಡೆ ಯಲಾರದ, ತನಗೆ ತೋರಿದವರಗೂ ಅವನನ್ನು ಕುರಿತು ಪರುಷವಾಕ್ಯಗಳ ನ್ಯಾಡಿಬಿಡಬೇಕೆಂಬ ನಿಶ್ಚಯದಿಂದ ಮುಂದೆ ನಿಂತಳು ಆದರೇನು / ಅವಳು ರಾಮನ ಮುಂದೆ ಬಂದು ನಿಂತಾಗಲೇ, ಆತನ ಸಾನ್ನಿಧ್ಯದ ಮಹಿಮೆಯಿಂದ ಅವಳ ಮಾತುಗಳೆಲ್ಲವೂ ಸ್ತುತಿರೂಪಗಳಾಗಿಯೇ ಪರಿಣಮಿಸಿದುವು ಆಗ ತಾರೆಯು ರಾಮನನ್ನು ಕುರಿತು ಎಲೈ ರಾಮನೆ ' * ನೀನಾದರೋ ಹೀಗೆಂ

  • ಇಲ್ಲಿ ತ್ವಮಪ್ರಮ ಮಶ್ನ ದುರಾಸದಶ್ ಜಿತೇಂದ್ರಿಯಕ್ಕೊಮಧಾರಿ ಕಶ್ನ 1 ಅಕ್ಷಯ್ಯ ಕೀರ್ತಿಕ್ಷ್ಯ ವಿಚಕ್ಷಣಕ್ಷ್ಯ ಕಿತಿಕ್ಷಮಾರ್ವಾ ಕ್ಷತಚೋಪಮಾಕ್ಷ!” ಎಂದು ಮೂಲವು ಇದರಿಂದ ತಾರೆಯು ರಾಮನ ಪರತ್ವವನ್ನು ಕೊಂಡಾಡುವಳೆಂದು ಗ್ರಾಹ್ಯ ವು (ತ್ವಂ ಅಪ್ರಮೇಯ: ಇಲ್ಲಿ ನನಗಿದಿರಾಗಿ ಧನುರ್ಬಾಣಗಳನ್ನು ಹಿಡಿದಿರುವ ನೀನು, ಇಷ್ಟು ಸೌಲಭ್ಯದಶಯನ್ನು ತೋರಿಸುತ್ತಿದ್ದರೂ,ನಿನ್ನ ಮಹಿಮೆಯು ಇಷ್ಟೆಂದು ನಿರ್ಣ ಯಿಸಲಸಾಧ್ಯವಾಗಿರುವುದು,ವೇದಾಹಂ , ಮಹಾನಂ ಕ ಇತ್ತಾ ವೇದ” ಎಂಬಂ