ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ೮೦ ಶ್ರೀಮದ್ರಾಮಾಯಣವು [ಸರ್ಗ, ೨೪, ನಾದ ಬೆಟ್ಟದ ತಪ್ಪಲಲ್ಲಿರುವಾಗಲೂ, ನೀನು ಸೀತೆಯನ್ನು ಕಾಣದೆ ಹೇಗೆ ಪರಿತಪಿಸುತ್ತಿರುವೆಯೋ ನೋಡು' ಹಾಗೆಯೇ ವಾಲಿಯೂ ಸತ್ಯಭೋಗ , ನಿಧಾನವಾದ ಸ್ವರ್ಗದಲ್ಲಿದ್ದರೂ ನನ್ನನ್ನು ಬಿಟ್ಟು ತಪಿಸಲಾರನೆ' ಯೌವನ ವಂತನಾದ ಪುರುಷನಿಗೆ ಪತ್ನಿ ವಿಯೋಗದಿಂದ ಎಷ್ಟು ದುಃಖವುಂಟಾಗುವು ದೋ, ಅದು ನಿನಗೇ ಚೆನ್ನಾಗಿ ತಿಳಿದಿರುವುದು ಒಂದುವೇಳೆ ನನ್ನನ್ನು ಕೊ ಲುವುದರಿಂದ ಸ್ನೇಹತ್ಯಾಪಾತಕವು ಬರುವುದೆಂದು ನೀನೆಣಿಸಬಹುದು ಆ ದು ಯುಕ್ತವಲ್ಲ ನಾನು ಈ ವಾಲಿಗೆ ಆತ್ಮವೆಂದೇ ತಿಳಿದುಕೊಂಡು ನನ್ನ ನ್ನು ಕೊಂದುಬಿಡು' ನಿನಗೆ ಸ್ತ್ರೀವಥಪಾಪವು ಬರಲಾರದು * ಅನೇಕಶಾ ಸಪ್ರಮಾಣಗಳಿಂದಲೂ, ವೇದವಿಧಿಗಳಿಂದಲೂ, ಪುರುಷನಿಗೆ ಪತ್ನಿ ಯರೇ ಆತ್ಮವೆಂದು ಸ್ಪಷ್ಟವಾಗಿ ತಿಳಿದುಬರುವುದು ನೀನು ನನ್ನನ್ನು ನನ್ನ ಪತಿ ಯೊಡನೆ ಸೇರಿಸಿ ಬಿಡುವುದರಿಂದ ಪುಣ್ಯವೂ ಉಂಟೆಂದು ತಿಳಿ ಲೋಕ ದಲ್ಲಿ ಸೀದಾನಕ್ಕಿಂತಲೂ ಉತ್ತಮವಾದ ಬೇರೆ ದಾನವಿಲ್ಲ ಆದು ದರಿಂದ ನೀನು ಈ ಧಮ್ಮಸೂಕ್ಷವನ್ನು ಪರಾಲೋಚಿಸಿ,ನನ್ನನ್ನು ನನ್ನ ಪ್ರಿ ಯನೊಡನೆ ಸೇರಿಸಿಬಿಡು' ಈ ವಿಧವಾದ ಸಿದಾನದಿಂದ, ನಿನಗೆ ಮೊದಲು ನಿರಪರಾಧಿಯಾದ ಆ ವಾಲಿಯನ್ನು ಕೊಂದ ಅಧರ್ಮವೂ ನೀಗುವುದು ಪತಿಯನ್ನಗಲಿ ದುಃಖಿತೆಯಾಗಿ ದಿಕ್ಕಿಲ್ಲದೆ ಗೋಳಿಡುತ್ತಿರುವ ನನ್ನ ಸಂಕಟವೂ ನೀಗುವುದು ಆನೆಯಂತ ಗಂಭೀರವಾದ ನಡಗೆಯುಳ್ಳವ ನಾಗಿಯೂ, ಕಪಿಸಿದ್ಮನಾಗಿಯೂ, ಬುದ್ಧಿವಂತನಾಗಿಯೂ, ಸರೋ ತಮವಾದ ಕಾಂಚನಮಾಲಿಕೆಯನ್ನು ಧರಿಸಿದವನಾಗಿಯೂ ಇರುವ ಆ ನನ್ನ ಪ್ರಿಯನನ್ನು ಬಿಟ್ಟು ನಾನು ಬದುಕಿರಲಾರೆನು ” ಎಂದಳು ಇದನ್ನು ಕೇಳಿ ಲೋಕವಿಭುವಾಗಿಯೂ ಮಹಾತ್ಮನಾಗಿಯೂ ಇರು ವ ರಾಮನು, ಆ ತಾರೆಯನ್ನು ಸಮಾಧಾನಪಡಿಸುತ್ತ ಹಿತವಾಕ್ಯಗಳ ನ್ನು ಹೇಳುವನು ಎಲೆ ವೀರಪತ್ನಿ ' ಧೈರಗುಂದಬೇಡ' ಈ ಸಮಸ್ತ ಲೋಕವೂ ಬ್ರಹ್ಮನಿರ್ಮಿತವಾದುದಲ್ಲವೆ ? ಆ ಬ್ರಹ್ಮನ ಸಂಕಲ್ಪದಂತೆ ಯೇ ಸುಖದುಃಖಗಳುಂಟಾಗುವುದೆಂಬುದನ್ನು ಲೋಕವೆಲ್ಲವೂ ಬಲ್ಲುದು

  • 'ಅರೆವಾ ಎಷ ಆತ್ಮನೋ ಯತ್ನ, ಆತ್ಮಾ ಮೈದಾರಾ" ಎಂಬಿವೇ ಮೊದಲಾದ ವೇದವಾಕ್ಯಗಳ ಅರ್ಥವೇ ಇಲ್ಲಿ ನಿರೂಪಿಸಲ್ಪಟ್ಟಿರುವುದಾಗಿ ಊಹೃತ