ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮೨ ಶ್ರೀಮದ್ರಾಮಾಯಣವು [ಸರ್ಗ, ೨೫~ ಅದನ್ನೂ ಅನುಷ್ಠಿಸಬೇಕಾದುದೇ ನ್ಯಾಯವು ನೀವೂ ಹಾಗೆಯೇ ನಡೆಸಿದು ದಾಯಿತಲ್ಲವೆ?ಇನ್ನು ಸಾಕು' ನಿಮ್ಮ ವಿಲಾಪವನ್ನು ನಿಲ್ಲಿಸಿರಿ' ಈಗ ವಾಲಿಗಾ ಗಿ ನೀವು ಮಾಡಬೇಕಾದುದು ಅಪರಸಂಸ್ಕಾರವಲ್ಲದೆ ಬೇರೆ ಕಾರವಲ್ಲ ನೀ ವು ಎಷ್ಟೇ ಪ್ರಯತ್ನ ಪಟ್ಟರೂ ಸತ್ತವನನ್ನು ಬದುಕಿಸಲಾರಿರಿ' ಈಶ್ವರಾಜ್ ಯನ್ನು ಮೀರಬೇಕೆಂದರೆ ಯಾರಿಗೆ ಸಾಧ್ಯವು' ಸಮಸ್ತಲೋಕಗಳಿಗೂ ಈ ಶ್ವರನೇ ಕಾರಣನು ಸಮಸ್ತಕಾಕ್ಯಗಳಿಗೂ ಈ ಕಾಲವೇ ಮುಖ್ಯಸಾಧನವು. ಸಮಸ್ತಭೂತಗಳಿಗೂ, ದೈವವೇ ನಿಯಾಮಕವು ಲೋಕದಲ್ಲಿ ಅದನ್ನು ಮೀ ರಿದುದೊಂದೂ ಇಲ್ಲವು ಸಮಸ್ತಲೋಕವೂ ಆ ಸದ್ದೇಶ್ವರನಿಗೆ ಪರತಂತ್ರ ವಾಗಿಯೇ ಕಾರಗಳನ್ನು ನಡೆಸಬೇಕೇಹೊರತು ಸ್ವತಂತ್ರವಲ್ಲ ಯಾವ ನಾಗಲಿ, ಯಾವಕಾರಕ್ಕೂ ಸ್ವತಂತ್ರವಾಗಿ ಕರ್ತನಾಗುವುದಿಲ್ಲ ಒಬ್ಬನು ಮತ್ತೊಬ್ಬನನ್ನು ನಿಯಮಿಸುವುದಕ್ಕೂ ಸಮರ್ಥನಲ್ಲಿ ಸಮಸ್ತಲೋಕವೂ ಸ್ವಭಾವಕ್ಕೆ (ಈಶ್ವರನಿಗೆ) ಈಡಾಗಿಯೇ ನಡೆಯುತ್ತಿರುವುದು ಆದುದರಿಂದ ಕಾಲವೇ ಲೋಕಗಳಿಗೆಲ್ಲಕ್ಕೂ ಮುಖ್ಯಗತಿಯು ಈಶ್ವರನೊಬ್ಬನೇ ಸ್ವತಂತ್ರ ನು ಆತನೊಬ್ಬನುಮಾತ್ರ ಯಾರಿಗೂ ಅಧೀನನಲ್ಲ ಅವನಿಗೆ ಪಾಪವಾಗಲಿ, ವಿ ಕಾರವಾಗಲಿ ಉಂಟಾಗವು ಅವನ ಸ್ವತಂತ್ರಪ್ರವರ್ತನೆಗೆ ಎಲ್ಲಿಯೂ ತಡೆಯಿ ರದು ಅದರೆ ತಾನು ಮಾಡಿದ ವ್ಯವಸ್ಥೆಯನ್ನು ತಾನೂ ಅತಿಕ್ರಮಿಸಲಾರನು. ಅವನಿಗೆ ಇತರರಲ್ಲಿ ಬಂಧುತ್ವವೆಂಬುದೇ ಇಲ್ಲವಾದುದರಿಂದ, ಪಕ್ಷಪಾತವೂ ಇರದು ಅವನನ್ನು ಅವನ ಅನುಗ್ರಹದಿಂದಲೇ ವಶಪಡಿಸಿಕೊಳ್ಳಬೇಕೇಹೊರ ತು ಅದಕ್ಕೆ ಬೇರೊಂದುರಾಯವಿಲ್ಲ'ಆತನನ್ನು ಜಯಿಸತಕ್ಕ ಪರಾಕ್ರಮಿಯೂ ಇಲ್ಲ ಅವನಿಗೆ ಮತ್ತೊಬ್ಬರಲ್ಲಿ, (ಇವರು ಮಿತ್ರರು, ಇವರು ಜ್ಞಾನಿಗಳು” ಎಂಬ ಸಂಬಂಧವೂ ಇಲ್ಲ ಅಪರಾಧಿಗಳೆಲ್ಲರೂ ಆತಸಿಗೆ ವೈರಿಗಳೇ ಆದುದರಿಂ ದಸಮಸ್ತಲೋಕಕ್ಕೂ ಕಾರಣಭೂತನಾದ ಈಶ್ವರನು,ಜೀವಾತ್ಮನಿಗೆ ಪರ

  • ಇಲ್ಲಿ ಈಶ್ವರ ಕಾಲ ನಿಯತಿ ಸ್ವಭಾವಗಳೆಂಬ ಬೇರೆಬೇರೆ ಶಬ್ದಗಳಿರುವವು ಹೀಗಿದ್ದರೂ ಅವೆಲ್ಲವೂ ಸರೈಶ್ವರವಾಚಕಗಳೆಂದೇ ಗ್ರಾಹ್ಯವು ಹಾಗಿಲ್ಲದಿದ್ದರೆ ಲೋ ಕಕ್ಕೆ ಬಹುನಾಥತ್ವವು ಸಿದ್ಧಿಸುವುದು ರಾಮನು ತನ್ನ ರಹಸ್ಯವನ್ನು ಹೊರಪಡಿಸಬಾ ರದೆಂಬುದಕ್ಕಾಗಿಯೇ ಹೀಗೆ ಬೇರೆಬೇರೆ ಪದಗಳಿಂದ ಈಶ್ವರನ ಶಕ್ತಿಯನ್ನು ತಿಳಿಸಿದು ದಾಗಿ ಗ್ರಹಿಸಬೇಕು