ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪8೪ ಶ್ರೀಮದ್ರಾಮಾಯಣವು [ಸರ್ಗ, ೨೫, ವುದಕ್ಕೆ ಸಮರರಾಗಿಯೂ ಬಲಾಡ್ಯರಾಗಿಯೂ ಇರುವ ಕೆಲವು ವಾನರರು ಸಿದ್ಧವಾಗಿರಲಿ!”ಎಂದನು ಹೀಗೆ ಲಕ್ಷಣನು ಸುಗ್ರೀವನಿಗೆ ಹೇಳಿ,ತನ್ನಣ್ಣ ನಾದ ರಾಮನ ಸಮೀಪದಲ್ಲಿ ನಿಂತಿದ್ದನು ಆ ಕ್ಷಣವೇ ತಾರನು ಲಕ್ಷ ಣನ ಮಾತಿನಂತೆ ಪಲ್ಲಕ್ಕಿಯನ್ನು ತರುವುದಕ್ಕಾಗಿ ಗುಹೆಗೆ ಹೋಗಿ, ಶೀಘ್ನು ದಲ್ಲಿಯೇ ವಾಹನವನ್ನು ಹೊರಿಸಿಕೊಂಡು ಬಂದನು ವಾಹನವನ್ನು ಹೊತ್ತು ಬಳಿಕೆಯುಳ್ಳ ಬಲಾಡ್ಯರಾದ ಕೆಲವು ವಾನರರು ಅದನ್ನು ಶೀಘ್ರದಲ್ಲಿ ಯೇ ಹೊತ್ತುತಂದರು ಆ ಪಲ್ಲಕ್ಕಿಯಾದರೋ ದೇವಯೋಗ್ಯವಾದ ವಿ ಮಾನದಂತೆ ಆತಿಮನೋಹರವಾಗಿ ತೋರುತಿತು ರಥದಂತ ವಿಸಾ ರ ವಾಗಿ, ನಡುವೆ ರಾಜಾಸನದಿಂದ ಕೂಡಿ ಶೋಭಿಸುತಿತ್ತು ಅದರ ಸುತ್ತಲೂ ಚಿತ್ರಕಾರಗಳಿಂದ ಮಾಡಲ್ಪಟ್ಟ ಬಗೆಬಗೆಯ ಪಕ್ಷಿಗಳೂ ವೃಕ್ಷಗಳೂ ನೇ ತ್ರಾನಂದಕರಗಳಾಗಿದ್ದುವು ನಡುನಡುವೆ ಚಿತ್ರವಿಚಿತ್ರಗಳಾದ ರೇಖೆಗ ಛು ಕೆತ್ತಲ್ಪಟ್ಟಿದ್ದುವು ಒಟ್ಟಾಗಿ ಅದರ ಆಕಾರಸನ್ನಿವೇಶವು ಅಂದವಾಗಿ ಯೂ,ದೃಢದಾಗಿಯೂ ಇದ್ದಿತು ಮತ್ತು ಅದು ಆಕಾಶದಲ್ಲಿ ಸಂಚರಿಸುವ ಸಿದ್ಧವಿಮಾನದಂತೆ ಸಣ್ಣ ಕಿಟಿಕಿಗಳಿಂದಲೂ, ದೊಡ್ಕಗವಾಕ್ಷಗಳಿಂದಲೂ, ಕೂಡಿ ಬಲವಾದ ಕೀಲುಗಳುಳ್ಳುದಾಗಿತ್ತು ವಿಸ್ತಾರವಾದ ಆ ಪಲ್ಲಕ್ಕಿಯ ನ್ನು ವಿಶ್ವಕಮ್ಮನು ತನ್ನ ಚಾತುರವೆಲ್ಲವನ್ನೂ ಉಪಯೋಗಿಸಿ ರಚಿಸಿದಂತೆ ತೋರುತಿತ್ತು ಅದರಲ್ಲಿ ಅಲ್ಲಲ್ಲಿ ಮರಗಳಿಂದ ಕೆತ್ತಲ್ಪಟ್ಟ ಕ್ರೀಡಾಪರೂತಗ ಳು ಕಂಗೊಳಿಸುತ್ತಿದ್ದುವು ಮತ್ತು ಅದು ಸುತ್ತಲೂ ನಯಗೆಲಸಗಳಿಂದ ವಿ ರುಗಿಡಲ್ಪಟ್ಟು, ಥಳಥಳಿಸುತಿತ್ತು ಸುತ್ತಲೂ ರತ್ನದ ಕೆತ್ತನೆಗಳಿಂದಲೂ ಹಾರ ಗಳಿಂದಲೂ ಪುಷ್ಪಮಾಲಿಕಗಳಿಂದಲೂ ಅಲಂಕೃತವಾಗಿತ್ತು ಮತ್ತು ಆದ ರ ಸುತ್ತಲೂ ಅಲ್ಲಲ್ಲಿ ಕೃತ್ರಿಮಗಳಾದ ಗುಹೆಗಳೂ,ಅಡವಿಗಳೂ ಕೆತ್ತಲ್ಪಟ್ಟಿ ಈುವು ಅಲ್ಲಲ್ಲಿ ರಕ್ತಚಂದನಾನುಲೇಪನದಿಂದಲೂ ಪುಷೋಪಹಾರದಿಂದ ಲೂ ಅಲಂಕೃತವಾಗಿತ್ತು ಬಾಲಸೂರಬಿಂಬಗಳಂತಿರುವ ಕೆಂದಾವರೆಯ ಹೂಗಳಿಂದ ಶೋಭಿಸುತಿತ್ತು ಹೀಗೆ ಸರೊತ್ತಮವಾದ ಪಲ್ಲಕ್ಕಿಯು ಸಿ “ವಾಗಿ ಬಂದೊಡನೆ, ಆದನ್ನು ನೋಡಿ ರಾಮನು, ಲಕ್ಷಣವನ್ನು ಕುರಿತು « ವತ್ಸನೆ' ಶೀಘ್ರದಲ್ಲಿಯೇ ವಾಲಿಯನ್ನು ಸಾಗಿಸಿ ಅವನಿಗೆ ಪ್ರೇತಕಾರಗಳ ನ್ನು ನಡೆಸುವಂತೆ ಮಾಡಬೇಕು,”ಎಂದನು" ಇದನ್ನು ಕೇಳಿದೊಡನೆ ಸುಗ್ರೀ