ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೫ ] ಕಿಷಿಂಧಾಕಾಂಡವ ೧೪೮೫ ವನೂ ಅಂಗದನೂಸೇರಿ, ದುಃಖದಿಂದ ಗೋಳಿಡುತ್ತ ಬಂದು, ಆ ವಾಲಿಯ ದೇಹವನ್ನೆತ್ತಿ ಪಲ್ಲಕ್ಕಿಯಮೇಲೆ ಏರಿಸಿದರು ಆ ಮೃತದೇಹವನ್ನು ವಾಹನ ದಲ್ಲಿಟ್ಯೂಡನೆ , ಆದನ್ನು ನಾನಾವಿಧಗಳಾದ ವಸ್ತ್ರಾಭರಣಗಳಿಂದಲಂ ಕರಿಸಿದರು ಆಮೇಲೆ ಸುಗ್ರೀವನು ಅಲ್ಲಿದ್ದ ವಾನರಾನುಚರರೆಲ್ಲರನ್ನೂ ಕರೆದು (ಆರನಾದ ನಾಲಿಗೆ ಕ್ರಮವಾಗಿ ಉತ್ತರಕ್ರಿಯೆಗಳನ್ನು ನಡೆಸ ಬೇಕು ಕೆಲವು ವಾನರರು ನವರತ್ನರಾಶಿಗಳನ್ನು ಚೆಲ್ಲುತ್ತ ಪಲ್ಲಕ್ಕಿಯ ಮುಂ ದೆನಡೆಯಲಿ' ಅವರನ್ನು ಹಿಂಬಾಲಿಸಿ ಈ ಪಲ್ಲಕ್ಕಿಯು ನಡೆಯಲಿ” ಎಂದಾಜ್ಞಾಪಿಸಿದನು ರಾಜರಿಗೆ ಅವರವರ ಭಾಗ್ಯಕ್ಕನುರೂಪವಾಗಿ ಯಾವ ವಿಧವಾದ ವೈಭವ ತಂದ ಉತ್ತರಕ್ರಿಯೆಗಳನ್ನು ನಡೆಸುವರೋ, ಅದೇ ರೀತಿ ಯಲ್ಲಿ ಸುಗ್ರೀವಾದಿವಾನರರೆಲ್ಲರೂ ಸಮಸ್ಯವೈಭವಗಳೊಡನೆ ನಾಲಿಗೆ ಉತ್ತರಕ್ರಿಯೆಗಳನ್ನು ನಡೆಸಿದರು ಆಗ ವಾಲಿಗೆ ಸಮೀಪಬಂಧುಗಳಾದ ತಾರನೇ ಮೊದಲಾದವರೆಲ್ಲರೂ, ಅಂಗದನ ಸುತ್ತಲೂ ಸೇರಿ, ಅವನನ್ನು ಹಿ ಡಿದುಕೊಂಡು ರೋದಿಸುತ್ತ, ಮುಂದೆ ನಡೆಯುತಿದ್ದರು ಹಾಗೆಯೇ ನಾಲಿಗೆ ಕೇವಲ ವಶವರ್ತಿಸಿಯರಾಗಿಯೂ, ಸಮೀಪಬಂಧುಗಳಾಗಿಯೂ ಇದ್ದ ಕೆಲ ವು ವಾನರಸಿಯರೂ ಅಲ್ಲಲ್ಲಿ ಗುಂಪಾಗಿ ಸೇರಿಕೊಂಡು, 'ಹಾವೀರನೆ' ಹಾ ಶೂರನೆ!"ಎಂದು ಗಟ್ಟಿಯಾಗಿ ಗೋಳಿಟ್ಟು ಕೂಗುತಿದ್ದರು ತಾರೆ ಮೊದಲಾ ದ ಆತನ ಪ್ರಿಯಪತ್ತಿ ಯರು ಒಂದುಕಡೆಯಲ್ಲಿ ಸೇರಿ, ಕಲ್ಲುಗಳನ್ನು ಕೂಡ ಕಠ ಗಿಸುವಂತೆ ದೈನ್ಯದಿಂದ ವಿಲಪಿಸುತ್ತ ಬಂದರು ಹೀಗೆ ಒಟ್ಟಾಗಿ ಸೇರಿದ ಈ ವಾನರಸ್ತಿಯರೆಲ್ಲರ ಆಕ್ರಂದನಧ್ವನಿಗಳಿಂದ ಅಲ್ಲಿನ ವನಪಲ್ವತಗಳೆಲ್ಲವೂ ಪ್ರತಿಧ್ವನಿಯನ್ನು ಕೊಡುತ್ತ, ಅವೂ ಒಟ್ಟಾಗಿ ಕೂಗಿಕೊಳ್ಳುವಂತೆ ತೋ ರುತಿತ್ತು ಹೀಗೆ ವಾಲಿಯನ್ನು ಸಾಗಿಸಿಕೊಂಡು ಬರುವಷ್ಟರಲ್ಲಿ, ಕೆಲವು ವಾನರರು ಮುಂದಾಗಿಹೋಗಿ, ಒಂದುಬೆಟ್ಟದ ತೊರೆಯ ಬಳಿಯಲ್ಲಿ, ಏಕಾಂ ತವಾಗಿಯೂ ಶುದ್ಧವಾಗಿಯೂ ಇರುವ ಜಲಸಮೃದ್ಧಿಯುಳ್ಳ ಒಂದುಸ್ಥಳ ವನ್ನು ನೋಡಿ, ಅಲ್ಲಿ ಚಿತೆಯನ್ನೊಡ್ಡಿದರು. ಆ ಸ್ಥಳದಲ್ಲಿ ವಾಹಕರು ಪಲ್ಲಕ್ಕಿ ಯನ್ನಿಳಿಸಿ ದುಃಖಿತರಾಗಿ ಒಂದು ಕಡೆಯಲ್ಲಿ ನಿಂತಿದ್ದರು ಪಲ್ಲಕ್ಕಿಯನ್ನಿ ಳಿಸಿದೊಡನೆ ತಾರೆಯು ಸಮೀಪಕ್ಕೆ ಬಂದು, ಅದರಲ್ಲಿ ಮಲಗಿಸಲ್ಪಟ್ಟಿದ್ದ ತ