ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮೬ - ಶ್ರೀಮದ್ರಾಮಾಯಣವ " [ಸರ್ಗ ೨೫. 'ಪ್ರಿಯಪತಿಯನ್ನು ನೋಡಿ,ಸಂಕಟವನ್ನು ತಡೆಯಲಾರದೆ,ಅವನ ತಲೆಯ ನೆತ್ತಿ ತನ್ನ ತೊಡೆಯಮೇಲಿಟ್ಟುಕೊಂಡು, ಹಾನಾಥನೆ' ಹಾ ವಾನರೇ ನೆ' ಹಾ ವತ್ಸಲನೆ! ಹಾ ಪೂಜ್ಯನೆ' ಹಾ ಮಹಾಬಾಹುವೆ' ಹಾ ನನ್ನ ಮೋಹಪ್ರಿಯನೆ' ನನ್ನನ್ನು ಕಣ್ಣೆತ್ತಿ ನೋಡಬಾರದೆ? ನಾನು ಹೀಗೆ ಗೋಳಿ ಟ್ಟು ಸಂಕಟಪಡುವಾಗಲೂ ನಿನಗೆ ನನ್ನಲ್ಲಿ ಮರುಕವಿಲ್ಲವೆ? ಹಾಪ್ರಿಯನೆ | ಈಗ ನೀನು ಮೃತನಾಗಿದ್ದರೂ ನಿನ್ನ ಮುಖದಲ್ಲಿ ಜೀವಕಳೆಯು ಉಕ್ಕುತಿ ರುವುದು ಸಂತೋಷದಿಂದ ನಗುವಂತಿರುವುದು ಸಾಯಂಕಾಲದ ಸೂರ ಬಿಂಬದಂತೆ ದಿವ್ಯತೇಜಸ್ಸು ಹೊ-ಡುತ್ತಿರುವುದು ಹಾ ಕಷ್ಟವೆ' ಯಮನೇ ಹೀಗೆ ರಾಮರೂಪಂದ ಬಂದು, ಒಂದೇಬಾಣದಿಂದ ನಮ್ಮಲ್ಲರನ್ನೂ ವಿಧ ವೆಯರನ್ನಾಗಿ ಮಾಡಿ, ನಿನ್ನನ್ನು ಸೆಳೆದುಕೊಂಡುಹೋದನಲ್ಲಾ 'ಎಲೈ ರಾಜ ಶ್ರೇಷ್ಠತೆ ನಿನಗೆ ಪರಮಪ್ರಿಯೆಯರಾಗಿಯೂ, ಸುಖಾರ್ಹರಾಗಿಯೂ, ಸುಕುಮಾರಾಂಗಿಯರಾಗಿಯೂ ಇರುವ ಈ ವಾನರಸಿಯರೆಲ್ಲರೂ ಈಗ ಎಷ್ಟೋ ದೂರದಿಂದ ಕಾಲುನಡೆಯಲ್ಲಿಯೇ ನಿನ್ನನ್ನು ಹಿಂಬಾಲಿಸಿ ಬರುತ್ತಿ ರುವುದನ್ನು ಕಾಣೆಯಾ? ಇವರ ಕಷ್ಟವನ್ನು ನೋಡಿಯಾದರೂ ನಿನಗೆ ಮ ರುಕವು ಹುಟ್ಟಲಿಲ್ಲವೆ? ಚಂದ್ರಮುಖಿಯರಾದ ಅವರೆಲ್ಲರೂ ನಿನಗೆ ಮೋಹ ದ ಪತ್ನಿ ಯರಲ್ಲವೆ? ಇನ್ನೂ ನೀನೇಕೆ ಸುಮ್ಮನಿರುವೆ ನಿನ್ನ ಪ್ರಿಯಸಹೋ ದರನಾದ ಸುಗ್ರೀವನನ್ನಾ ದರೂ ನೋಡಬಾರದೆ? ತಾರನೇ ಮೊದಲಾದ ನಿನ್ನ ಮಂತ್ರಿಗಳೂ, ಇತರಪುರಜನಗಳೂ ಈಗ ನಿನ್ನನ್ನು ಹಿಂಬಾಲಿಸಿ ಬರು ತಿರುವರು ನೋಡು' ಇವರೆಲ್ಲರಿಗೂ ಅವರವರ ಗಾರವಕ್ಕೆ ತಕ್ಕಂತೆ ರಾಜಾ ಜ್ಞೆಯನ್ನಿತ್ತು ಕಳುಹಿಸು ನಾವೆಲ್ಲರೂ ಸೇರಿ ವಿನೋದದಿಂದ ಕ್ರೀಡಿ ಸಬೇಡವೆ ?” ಎಂದಳುತಿದ್ದಳು ಹೀಗೆ ಪತಿಯನ್ನು ಬಿಡಲಾರದೆ ತಾ ರೆಯು ಸಂಕಟಪಡುವುದನ್ನು ನೋಡಿ, ಕೆಲವು ವಾನರಸೀಯರು ಬಂದು, ಅವಳನ್ನೆತ್ತಿ ಕುಳ್ಳಿರಿಸಿ ಹಿಂದಕ್ಕೆ ಕರೆದುಕೊಂಡು ಹೋದರು ಆಮೇಲೆ ಸುಗ್ರೀವನೂ ಅಂಗದನೂ ಬಂದು ದುಃಖದಿಂದ ರೋದಿಸುತ್ತ ವಾಲಿಯ ದೇಹವನ್ನು ಚಿತೆಯಮೇಲಕ್ಕೆ ಏರಿಸಿದರು ಅಂಗದನು ಶಾಸೊಕ್ಕವಾ ಗಿ ಅಗ್ನಿ ಯನ್ನಿಟ್ಟು ಚಿತೆಗೆ ಪ್ರದಕ್ಷಿಣವನ್ನು ಮಾಡಿ ತಂದೆಗೆ ದಹನಸಂ ಸ್ಟಾರಗಳನ್ನು ನಡೆಸಿದನು ಆಗಲೇ ಕೆಲವು ವಾನರರು ಜಲತರಣಕಾರ :