ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೬.] ಕಿಷಿಂಧಾಕಾಂಡವು ೧೪೮೯ ದೊಂದು ಪ್ರಯತ್ನ ವನ್ನು ಮಾಡುವುದಕ್ಕೂ ಸಾಧ್ಯವಿಲ್ಲ ಅದುವರೆಗೆ ನೀನು ನಿನ್ನ ಪಟ್ಟಣದಲ್ಲಿರು ನಾನೂ ಲಕ್ಷಣವೊಡನೆ ಈ ಪತದಲ್ಲಿ ಇರು ವೆನು ಇಲ್ಲಿನ ಪ್ರತಗುಹೆಯಕೂಡ ರಮ್ಯವಾಗಿಯೂ ವಿಸ್ತಾರವಾಗಿಯೂ ಇರುವುದು ತಕ್ಕಷ್ಟು, ಗಾಳಿಯೂ ಬೀಸುತ್ತಿರುವುದು ಇಲ್ಲಿ ಜಲಸಮೃದ್ಧಿ ಯೂ ಚೆನ್ನಾಗಿರುವುದು ತಾವರ, ನೈದಿಲೆ ಮೊದಲಾದ ಹೂಗಳೂ ಸಮ್ಮ ದೃವಾಗಿ ಸಿಕ್ಕುವುವು ಆದರೆ ಎಲೆಮಿತ್ರನೆ' ಮುಂದಿನ *ಕಾರ್ತಿಕಮಾಸವು ಆರಂಭಿಸುವುದರೊಳಗಾಗಿ ನೀನು ರಾವಣವಧಕ್ಕೆ ತಕ್ಕ ಪ್ರಯತ್ನವನ್ನು ಮಾ ಡಬೇಕು ಈ ಸಂಕೇತವನ್ನು ಮಾತ್ರ ನೀನು ಮರೆಯದೆ ಮನಸ್ಸಿನಲ್ಲಿಟ್ಟಿರ ಯುದ್ಧಾರ್ಹಗಳಲ್ಲವೆಂಬುದಕ್ಕಾಗಿ, ಇಲ್ಲಿ ನಾಲ್ಕು ತಿಂಗಳುಗಳೆಂದು ಹೇಳಲ್ಪಟ್ಟಿವೆ ಅಥ ವಾ 'ಪಕ್ಷಾವೈಮಾಸಾಃ” ಎಂಬ ಶ್ರುತಿಯಂತೆ, ಇಲ್ಲಿ ಮಾಸಗಳೆಂಬುದಕ್ಕೆ ಪಕ್ಷಗಳೆಂಬ ಅರ್ಥವನ್ನು ಮಾಡಿ ನಾಲ್ಕು ಪಕ್ಷಗಳಿಂದ ಕೂಡಿದ ವರ್ಷತರ್ುವೆಂದೂ ಹೇಳಬಹುದು

  • ಇಲ್ಲಿ ಕಾರ್ತಿಕೇ ಸಮನುಪ್ರಾಪ್ತ” ಎಂದುಮೂಲವು ಕಾರ್ತಿಕಮಾಸವು ಸ ಮೀಪಿಸುವುದನ್ನು ಹೇಳಿರುವುದರಿಂದ, ಆಶ್ವಯುಜಮಾಸದ ಕೊನೆಯೆಂದು ಗ್ರಹಿಸಬೇ ಕು ಇದು ಅಶ್ವಯುಜಾಂತವೆಂಬುದನ್ನು ರಾಮನೇ ಇನ್ನೊಂದುಕಡೆಯಲ್ಲಿ “ವಯ ಮಾಶ್ವಯಜೇ ಮಾಸಿ ಪಿಂಗಾಕ್ಷಪ್ರತಿಚ್ಛೇದಿತಾಃ” ಎಂದು ಸ್ಪಷ್ಟವಾಗಿ ಹೇಳಿರುವ ನು ಆದರೆ ಇಲ್ಲಿ ಪ್ರಚೋದನವೆಂದರೆ ಪ್ರೇರಣಾದಿಸನ್ನಾ ಹಗಳೇಹೊರತು ಪ್ರಯಾಣ ವಲ್ಲ ಮಾರ್ಗಶೀರ್ಷದಲ್ಲಿ ಪ್ರಯಾಣವು ಹೀಗೆ ವಾನರರೆಲ್ಲರೂ ಸೀತಾನ್ವೇಷಣಾರ ವಾ ಗಿ ಮಾರ್ಗಶೀರ್ಷದಲ್ಲಿ ಗುಹೆಯನ್ನು ಬಿಟ್ಟು ಹೊರಟಮೇಲೆ, ಸ್ವಯಂಪ್ರಭೆಯ ಬಿಲದಲ್ಲಿ ಬಹಳಕಾಲವಿದ್ದು, ಅಲ್ಲಿಂದ ಹಿಂತಿರುಗಿದಾಗ 'ದುರ್ಮಾವಾಸಂತಿರ್ಕಾದೃಷ್ಟಾ?” ಎಂ ದು, ವಸಂತಕಾಲದ ಗಿಡಗಳನ್ನು ನೋಡಿದುದಾಗಿ ಹೇಳಿದ್ದರೂ,ಆಗ ವಸಂತಕ್ಕೆ ಮೊದ ಲಿನ ತಿಂಗಳಾದ ಫಾಲ್ಕುನಮಾಸವೆಂದೇ ಗ್ರಾಹ್ಯವು ಅಥವಾ ಫಾಲ್ಕು ನಚೈತ್ರಮಾಸಗಳೇ ವಸಂತಕಾಲವೆಂದು ಹೇಳಿದುದಾಗಿ ಕೆಲವರ ಮತವು ಮುಖ್ಯವಾಗಿ •ಉತ್ತರಸ್ಕಾದಿನಾ ಪೂರಸ್ಕಾವಧಿಂಜಾನೀಯಾತ್” ಎಂಬ ನ್ಯಾಯದಿಂದ,ಮುಂದಿನ ಕಾಲದ ಆರಂಭವನ್ನು ಹೇಳುವುದರಿಂದ,ಅದರ ಪೂರೈಕಾಲದ ಕೊನೆಯಭಾಗವನ್ನು ಸೂಚಿಸುವುದು ವಾಲ್ಮೀ ಕಿಯರದ್ಧತಿಯು, ಆದುದರಿಂದ ವಸಂತಾರಂಭವೆಂಬುದಕ್ಕೆ ನಾಲ್ಕುನವೆಂದು ಗ್ರಹಿಸಿ, ವಾನರರು ಸ್ವಯಂಪ್ರಭೆಯ ಬಿಲವನ್ನು ಬಿಟ್ಟು ಹೊರಟುದು ಫಾಲ್ಕುಣಮಾಸವೆಂದೇ ನಿಶ್ಚಯಿಸಬೇಕು ಇಲ್ಲಿ ತಿಳಿಯಬೇಕಾದ ಕಾಲಕ್ರಮವೇನೆಂದರೆ:-ಚೈತ್ರಮಾಸದಲ್ಲಿ ರಾಮನು ಅಯೋಧ್ಯೆಯನ್ನು ಬಿಟ್ಟು ಹೊರಟುದು, ಅಗಸ್ತಾಶ್ರಮವನ್ನು ಸೇರುವುದಕ್ಕೆ

94