ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ ೨೬.] ಕಿಂಧಾಕಾಂಡವು. ೧೪೪೧ ನರರು ಆತನಿಗೆ ಸುವದಂಡವುಳ್ಳ ಶ್ವೇತಚ್ಛತ್ರವನ್ನು ತಂದುಹಿಡಿದರು ಕೆಲ ವರು ಚಿನ್ನದ ಹಿಡಿಗಳುಳ್ಳ ಚಾಮರಗಳನ್ನು ತಂದುಬೀಸಿದರು ಮಂಗಳಾರ್ಥ ವಾಗಿ ನವರತ್ನಗಳನ್ನೂ ತಂದಿರಿಸಿದರು ಸಮಸ್ತವಿಧಗಳಾದ ಮಂಗಳಷ ಥಿಗಳೂ,ಮಂಗಳಬೀಜಗಳೂ ತಂದಿರಿಸಲ್ಪಟ್ಟವು ಹಾಲು ಸೋರುತ್ತಿರುವ ಮರದ ಚಿಗುರುಗಳನ್ನೂ ,ಹೂಗಳನ್ನೂ ತಂದಿಟ್ಟರು ಬಿಳೀಬಟ್ಟೆಗಳೂ, ಬಿಳೀ ಗಂಧಗಳೂ, ಸುವಾಸನೆಯುಳ್ಳ ಪುಷ್ಪಹಾರಗಳೂ, ನೆಲದಲ್ಲಿಯೂ ನೀರಿನಲ್ಲಿ ಯೂ ಬೆಳೆಯತಕ್ಕ ಬಗೆಬಗೆಯ ಹೂಗಳೂ ಸಿದ್ಧಪಡಿಸಲ್ಪಟ್ಟುವು ದಿವ್ಯಚಂ ದನಗಳೂ, ಬೇರೆಬೇರೆ ಸುಗಂಧದ್ರವ್ಯಗಳೂ 'ತಂದಿರಿಸಲ್ಪಟ್ಟವು ಮಂ ತ್ರಾಕ್ಷತೆ, ಗಸೆಗಸೆ, ಜೇನು, ತುಪ್ಪ, ಮೊಸರು ಹುಲಿಯಚರ, ಹಂದಿಯ ಚರದಿಂದ ಮಾಡಿದ ಪಾವುಗೆ, ಮೊದಲಾದ ಮಂಗಳಸಾಮಗ್ರಿಗಳೆಲ್ಲವೂ ಸಿದ್ಧವಾದುವು ಈ ಕಾಲಕ್ಕೆ ಸರಿಯಾಗಿ ಹದಿನಾರುಮಂದಿ ಉತ್ತಮಕಕ್ಕೆ ಯರು ವಿಲೇಪನಗಳನ್ನೂ,ಗೋರೋಚನವನ್ನೂ , ಮಣಿಶಿಲೆಯನ್ನೂ ಕೈಯ ಹೈ ಹಿಡಿದು ಸಂತೋಷದಿಂದ ಬಂದುನಿಂತರು ಆಮೇಲೆ ವಾನರರೆಲ್ಲರೂ ಶುಭ ಮುಹೂರ್ತಕ್ಕೆ ಸರಿಯಾಗಿ ಸುಗ್ರೀವನಿಗೆ ಶಾಸೊಕ್ಕವಾಗಿ ಪಟ್ಟವನ್ನು ನಡೆಸಿದರು ಈ ಉತ್ಸವಕ್ಕಾಗಿ ಕರೆಸಿದ್ದ ಬ್ರಾಹ್ಮಣೋತ್ತಮರೆಲ್ಲರಿಗೂ, ರತ್ನಗಳನ್ನೂ, ವಸ್ತ್ರಗಳನ್ನೂ, ಭಕ್ಷ್ಯಭೋಜ್ಯಗಳನ್ನೂ ಕೊಟ್ಟು ಸಂತೋ ಷಪಡಿಸಿದರು ಆಮೇಲೆ ಮಂತ್ರಜ್ಞರಾದ ಬ್ರಾಹ್ಮಣರು ದರ್ಭಪರಿಸ್ತರಣದ ನಡುವೆ ಜ್ವಲಿಸುತ್ತಿರುವ ಆಗ್ನಿ ಯಲ್ಲಿ ಮಂತ್ರಪೂತವಾದ ಹವಿಸ್ಸನ್ನು ಹೋ ಮಮಾಡಿದರು ಆಮೇಲೆ ವಾನರಶ್ರೇಷ್ಠರೆಲ್ಲರೂ ಸುಗ್ರೀವನನ್ನು ಕರೆತಂದು ಉಪ್ಪರಿಗೆಯನ್ನೇರಿಸಿ,ಅಲ್ಲಿ ಸುವರ್ಣಮಯವಾದ ಕಾಲುಗಳುಳ್ಳುದಾಗಿಯೂ, ಉತ್ತಮಾಸ್ತರಣದಿಂದ ಕೂಡಿದುದಾಗಿಯೂ, ಚಿತ್ರವಿಚಿತ್ರಗಳಾದ ಪುಷ್ಪ ಮಾಲಿಕೆಗಳಿಂದಲಂಕೃತವಾಗಿಯೂ ಇದ್ದ ಒಂದು ದಿವ್ಯಾಸನದಲ್ಲಿ ಪೂರಾ ಭಿಮುಖವಾಗಿ ಕುಳ್ಳಿರಿಸಿ, ನಾನಾವಿಧವಾದ ಮಂತ್ರಗಳನ್ನು ಚರಿಸುತಿದ್ದರು ಇಷ್ಟರಲ್ಲಿ ಕೆಲವು ವಾನರರು ಪುಣ್ಯನದಿಗಳಿಂದಲೂ, ನದಿಗಳಿಂದಲೂ, ಸ ಮುದ್ರಗಳಿಂದಲೂ, ಪಣ್ಯತೀರ್ಥಗಳಿಂದಲೂ ತೀರ್ಥಗಳನ್ನು ಸಂಗ್ರಹಿಸಿ ತಂದು ಸುವರ್ಣಕುಂಭಗಳಲ್ಲಿ ಸಿದ್ಧಪಡಿಸಿಟ್ಟರು. ಆಗ ವೇದಗಳಲ್ಲಿಯ,