ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ೨೬, ୨ ಶ್ರೀಮದ್ರಾಮಾಯಣವು ಮನ್ನಾಡಿಸ್ಕೃತಿಗಳಲ್ಲಿಯೂ, ವಿಹಿತಗಳಾದ ಕ್ರಮವನ್ನೇ ಅನುಸರಿಸಿ, ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ, ಮೈಂದ, ದ್ವಿವಿದ, ಹನುಮಂತ, ಜಾಂಬವಂತ, ನಳವೇ ಮುಂತಾದ ಕಪಿಶ್ರೇಷ್ಠರೆಲ್ಲರೂ ಸೇರಿ, ಎತ್ತಿನಕೊಂ ಬುಗಳಿಂದಲೂ, ಸುವರ್ಣಪಾತ್ರೆಗಳಿಂದಲೂ ಆ ಸುಗಂಧತೀರ್ಥವನ್ನೆತ್ತಿ, ಅ ವ್ಯವಸುಗಳು ಇಂದ್ರನಿಗೆ ಅಭಿಷೇಕಮಾಡುವಂತೆ ಆ ಸುಗ್ರೀವನಿಗೆ ಅಭಿಷೇ ಕವನ್ನೂ ನಡಿಸಿದರು ಅಲ್ಲಲ್ಲಿ ಅನೇಕ ವಾನರಶ್ರೇಷ್ಠರು ಗುಂಪುಗುಂಪಾಗಿ ಸೇರಿ ಈ ಸುಗ್ರೀವಪಟ್ಟಾಭಿಷೇಕೋತ್ಸವಸಂಭ್ರಮವನ್ನು ಸಂತೋಷದಿಂದ ಕೂಗಿ ಕೊಂಡಾಡುತಿದ್ದರು ಆಮೇಲೆ ವಾನರರಾಜನಾದ ಸುಗ್ರೀವನು ರಾ ಮಾಜ್ಞೆಯನ್ನು ಜ್ಞಾಪಿಸಿಕೊಂಡು ತನ್ನ ಇನಮಗನಾದ ಅಂಗದನನ್ನು ಸಂ ತೋಷದಿಂದಪ್ಪಿ ಕರೆತಂದು ಪೀರದಲ್ಲಿರಿಸಿ, ಅವನಿಗೆ ಯೌವರಾಜ್ಯಾಭಿಷೇಕ ವನ್ನೂ ಮಾಡಿದನು. ಈ ಅಂಗದನ ಯೌವರಾಜ್ಯಾಭಿಷೇಕವನ್ನು ನೋಡಿ ಅಲ್ಲಿ ನ ವಾನರಗೆ ಮೊದಲಿಗಿಂತಲೂ ಮಿತಿಮೀರಿದ ಸಂತೋಷವುಂಟಾಯಿತು ಎಲ್ಲರೂ ಸುಗ್ರೀವನನ್ನು ನೋಡಿ “ಭಲೆ ಭಲೆ : ಶಹಬಾಸ್!” ಎಂದು ಕೊಂ ಡಾಡುತಿದ್ದರು ಈಮಹೋತ್ಸವಗಳಿಗೆಲ್ಲಾ ಮುಖ್ಯ ಕಾರಣನಾದ ಶ್ರೀರಾಮ ನನ್ನೂ, ಲಕ್ಷಣವನ್ನೂ ಎಬೆಬಿಡದೆ ಸ್ತುತಿಸುತಿದ್ದರು ಅಲ್ಲಿನ ಪುರವಾಸಿಗಳ ಆರೂ ಸಂತೋಷದಿಂದುಬ್ಬುತಿದ್ದರು ಆ ಪಟ್ಟಣದಲ್ಲಿ ಎಲ್ಲೆಲ್ಲಿ ನೋಡಿದರೂ ಧ್ವಜಪತಾಕಗಳು ಕಂಗೊಳಿಸುತ್ತಿದ್ದುವು, ಕಿಷಿಂಧೆಯೆಂಬ ಆಬೆಟ್ಟದ ಗುಹೆಗೆ ಆಗ ಒಂದು ಅಪೂವ್ವಶೋಭೆಯೇ ಉಂಟಾದಂತೆ ಕಾಣುತಿತ್ತು ಈಪಟ್ಟಾಭಿ ಷೇಕೋತ್ಸವವು ಮುಗಿದೊಡನೆಯ, ಕಪಿರಾಜನಾದ ಸುಗ್ರೀವನು ತಾನಾ ಗಿಯೇ ಮಹಾತ್ಮನಾದ ರಾಮನಬಳಿಗೆ ಬಂದು, ತನ್ನ ಪಟ್ಟಾಭಿಷೇಕವೈಭವಗ ಲೆಲ್ಲವನ್ನೂ ಆತನಿಗೆ ತಿಳಿಸಿ ಬಂದು, ಇಂದ್ರನು ಸ್ವರ್ಗಾಧಿಪತ್ಯವನ್ನನುಭವಿ ಸುವಂತೆ ವಾನರರಾಜ್ಯಾಧಿಪತ್ಯದಲ್ಲಿ ರಾಜಭೋಗಗಳನ್ನನುಭವಿಸುತ್ತ ತನ್ನ ಪ್ರಿಯಪತ್ನಿ ಯಾದ ರುಮೆಯೊಡಗೂಡಿ ಸುಖದಿಂದಿದ್ದನು ಇಲ್ಲಿಗೆ ಇಪ್ಪ ತಾರನೆಯ ಸರ್ಗವು