ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರ್ಗ, ೨೭ | ಕಿಷಿಂಧಾಕಾಂಡವು, ೧೪t (ರಾಮನು ಪರೈತಗುಹೆಯಲ್ಲಿ ಏಕಾಂತವಾಗಿ ಕುಳಿತು,) ಸೀತೆಯನ್ನು ನೆನೆಸಿಕೊಂಡು ವಿರಹತಾಪದಿಂದ ದುಖಿಸುವುದನ್ನು ನೋಡಿ, ಲಕ್ಷಣನು ಆತನನ್ನು ಸಮಾಧಾನಪಡಿಸಿದುದು - ಹೀಗೆ ಪಟ್ಟಾಭಿಷಿಕ್ತನಾದ ಸುಗ್ರೀವನು ಕಿಕ್ಕಿಂಧೆಯನ್ನು ಪ್ರ ವೇಶಿಸಿ ಅಲ್ಲಿ ಸುಖದಿಂದಿರುತ್ತಿರಲು, ರಾಮನು ಲಕ್ಷ ಇನೊಡಗೂಡಿ ಅತ್ತಲಾಗಿ ಮಾಲ್ಯವತ್ಪವ್ವತಕ್ಕೆ ಹೋಗಿ ಸೇರಿದನು ಆ ಪೈತದಲ್ಲಿ ಯಾ ವಾಗಲೂ ಹುಲಿಗಳೂ ಇತರ ಮೃಗಗಳೂ, ಕೂಗುತ್ತಿರುವುವು ಸಿಂಹ ಗಳು ಭಯಂಕರವಾದ ಗರ್ಜನೆಯನ್ನು ಮಾಡುತ್ತಿರುವುವು ಪೊದೆಗ ಳಿಂದಲೂ, ಬಳ್ಳಿಗಳಿಂದಲೂ, ಬಗೆಬಗೆಯ ಮರಗಳಿಂದಲೂ, ತುಂಬಿದ ಆ ಬೆಟ್ಟದಲ್ಲಿ ಕರಡಿಗಳೂ, ಕಪಿಗಳೂ, ಗೋಲಾಂಗೂಲಗಳೂ, ಕಾಡುಬೆ ಕುಗಳೂ ಸುತ್ತಲೂ ಸಂಚರಿಸುತ್ತಿರುವುವು ಆ ಪರತವು ಮೇಫುಗಳೇ ಗುಂಪುಗೂಡಿದಂತೆ ಕಾಣುತಿತ್ತು ಎಲ್ಲೆಲ್ಲಿ ನೋಡಿದರೂ ನಿಲವಾದ ನೀ ರುಳ್ಳ ಮಡ ಗಳು ತುಂಬಿದ್ದುವು ಆ ಬೆಟ್ಟದ ಶಿಖರದಲ್ಲಿ ರಾಮನು ಲಕ್ಷಣ ನೊಡನೆ ಒಂದು ವಿಸ್ತಾರವಾದ ಗುಹೆಯನ್ನು ನೋಡಿ, ಅದನ್ನು ತಮ್ಮ ವಾಸ ಕ್ಯಾಗಿ ನಿಶ್ಚಯಿಸಿಕೊಂಡನು ಆಮೇಲೆ ಶ್ರೀರಾಮನು, ತಾನು ಸುಗ್ರೀವನೊ ಡನೆ ಮಾಡಿಕೊಂಡ ಸಂಕೇತವನ್ನು ಸ್ಮರಿಸಿಕೊಂಡು, ಸಮೀಪದಲ್ಲಿ ವಿನಯ ದಿಂದ ನಿಂತಿದ್ದ ಲಕ್ಷ್ಮಣನನ್ನು ಕುರಿತು, ತತ್ಕಾಲೋಚಿತವಾಗಿ ಒಂದಾನೊಂ ದುಮಾತನ್ನು ಹೇಳುವನು ವತ್ಸ, ಲಕ್ಷಣನೆ ! ಈ ಬೆಟ್ಟದ ಗುಹೆಯು ಬ ಹಳ ರಮ್ಯವಾಗಿರುವುದು ವಿಸ್ತಾರವಾಗಿಯೂ ಇರುವುದು ತಕ್ಕಷ್ಟುಗಾಳಿ ಯೂ ಬೀಸುತ್ತಿರುವುದು ಈ ಮಳೆಗಾಲವು ಮುಗಿಯುವವರೆಗೂ ನಾವಿಬ್ಬ ರೂ ಇಲ್ಲಿಯೇ ವಾಸಮಾಡುವೆವು ಇದರ ಶಿಖರವು ಎಷ್ಟು ವಿಸ್ತಾರವಾಗಿ ಯೂ, ಉನ್ನತವಾಗಿಯೂ ಇರುವುದು ನೋಡು ಅಲ್ಲಲ್ಲಿ ಬಿಳುಪು, ಕಪ್ಪು, ಕೆಂಪು ಮೊದಲಾದ ಬಗೆಬಗೆಯ ಬಣ್ಣಗಳಿಂದ ಕೂಡಿದ ಕಲ್ಲುಗಳು ಈಸ್ಥಳ ಕೈ ಎಷ್ಟೋ ಅಂಗವನ್ನುಂಟುಮಾಡುತ್ತಿರುವುವು ಬಗೆಬಗೆಯ ಧಾತುಗಳೂ ತುಂಬಿರುವುವು ಅಲ್ಲಲ್ಲಿ ಗುಹೆಗಳೂ ಗಿರಿನದಿಗಳೂ ಶೋಭಿಸುವುವು ಬಗೆಬಗೆ ಯ ಮರದ ಗುಂಪುಗಳು ದಟ್ಟವಾಗಿ ಬೆಳದಿರುವುವು ಮನೋಹರಗಳಾದ ಬಗೆಬಗೆಯ ಬಳ್ಳಿಗಳು ಹಬ್ಬಿರುವುವು ಅನೇಕಪಕ್ಷಿಗಳು ಕೊಗುತ್ತಿರುವು