ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೬.] ಕಿಕ್ಕಿಂಧಾಕಾಂಡವು, ರುವುದು ಇಲ್ಲಿ ನಾನಾಜಾತಿಯ ಹಕ್ಕಿಗಳು ನೂರಾರು ಕಡೆಗಳಲ್ಲಿ ಗುಂಪು ಗುಂಪಾಗಿ ಸೇರಿ ಬಗೆಬಗೆಯ ಸ್ವರಗಳಿಂದ ಕೂಗುತ್ತಿರುವುವು ಒಂದಕ್ಕೊಂ ದಕ್ಕೆ ಸಮಾನವಾದ ಅನುರಾಗವುಳ್ಳ ಚಕ್ರವಾಕಪಕ್ಷಿಗಳು ಅಲ್ಲಲ್ಲಿ ಜತೆಜತೆ ಯಾಗಿ ಸೇರಿ ವಿಹರಿಸುತ್ತಿರುವ ಸೊಗಸನ್ನು ನೋಡು'ಒಂದುಕಡೆಯಲ್ಲಿ ಕರೀ ನೈದಿಲೆಗಳೂ, ಮತ್ತೊಂದು ಕಡೆಯಲ್ಲಿ ಕೆಂಪುತಾವರಗಳೂ, ಬೇರೊಂದು ಕ ಡೆಯಲ್ಲಿ ಬಿಳೀನೈದಿಲೆಗಳೂ ಈ ನದಿಯಮೇಲೆ ದಟ್ಟವಾಗಿ ಮುಚ್ಚಿಕೊಂಡು ಎಷ್ಟು ಮನೋಹರವಾಗಿರುವುದು ನೋಡು ಅಲ್ಲಲ್ಲಿ ನೂರಾರಕೂಕ್ಕರೆಗ ಭೂ, ನವಿಲುಗಳೂ ಕೌಂಚಗಳೂ ಕಿವಿಗಿಂಪಾಗಿ ಕೂಗುತ್ತಿರುವುವು ವತ್ರನೆ' ಇದೊ' ಇದರ ತೀರದಲ್ಲಿ, ಹಂಸಗಳಿಂದಲೂ, ಸಾರಸಪಕ್ಷಿಗಳಿಂ ದಲೂ ಶೋಭಿತಗಳಾಗಿ ಅತಿಮನೋಹರಗಳಾದ ಈ ಮಳಲು ದಿಣ್ಣೆಗಳನ್ನು ನೋಡಿದೆಯಾ?ಇವೆಲ್ಲವನ್ನೂ ನೋಡಿದರೆ, ಸಾಂಗಸುಂದರಿಯಾಗಿ ಸಮ ಸ್ನಾಭರಣಗಳಿಂದಲಂಕೃತಳಾದ ಹೆಂಗಸೊಬ್ಬಳು ನಮ್ಮ ಮುಂದೆ ನಿಂತು ನಗುವಂತೆಯೇ ಕಾಣುತ್ತಿರುವುದು ಎಲೈ ಸೌಮ್ಯನೆ' ಅನೇಕಮಹರ್ಷಿಗಳಿಂ ದ ಸೇವಿತವಾದ ಈ ನದಿಯ ದಡದಲ್ಲಿ ಒಂದಕ್ಕೊಂದಕ್ಕೆ ಜೋಡಿಸಿದಂತೆ ಸಾಲಾಗಿ ಬೆಳೆದಿರುವ ಚಂದನವೃಕ್ಷಗಳನ್ನು ನೋಡು' ಇದೊ'ಇಲ್ಲಿ ಚಂದ ನವೃಕ್ಷಗಳ ಸಾಲಗಳೂಕೂಡ ಮನಸ್ಸಂಕಲ್ಪದಿಂದಲೇ ಉದ್ಭವಿಸಿದಂತೆ ಎ ಷ್ಟು ಮನೋಹರವಾಗಿರುವುವ ನೋಡು' ಆಹಾ'ಎಲೈ ಶತ್ರುಸೂದನನೆ' ಈ ಪ್ರದೇಶವೇನೋ ಬಹಳರಮಣೀಯವಾಗಿ ಇರುವುದು ಇದು ನಮ್ಮ ಮನಸ್ಸಿ ಗೂ ಬಹಳ ಹಿತಕರವಾಗಿರುವುದು ಇಲ್ಲಿಯೇ ವಾಸಮಾಡುವೆವು ಚಿತ್ರ ಚಿತ್ರ ಗಳಾದ ಕಾಡುಗಳುಳ್ಳ ಸುಗ್ರೀವನಗರಿಯಾದ ಕಿಷಿಂಧೆ ಯೂ ಕೂಡ ಇಲ್ಲಿಗೆ ಬಹಳ ದೂರವಾಗಿಲ್ಲವೆಂದೇ ತೋರುವುದು ಆಪಟ್ಟಣದಲ್ಲಿ ಮೃದಂಗಧ್ವನಿ ಗಳೊಡನೆ ಉತ್ಸಾಹದಿಂದ ಕೂಗಿಡುತ್ತಿರುವ ಅನೇಕವಾನರರ ಘೋಷವೂ, ಆವರೆ ಗಾನಧ್ವನಿಗಳೂ, ವಾದ್ಯಧ್ವನಿಗಳೂ ಇಲ್ಲಿಗೇ ಕೇಳಿಸುತ್ತಿರುವುದಲ್ಲವೆ? ಕಪಿರಾಜನಾದ ಸುಗ್ರೀವನು ಕೈತಪ್ಪಿ ಹೋಗಿದ್ದ ತನ್ನ ರಾಜ್ಯವನ್ನೂ, ತನ್ನ ಪ ತ್ನಿಯನ್ನೂ ಪಡೆದು, ತನ್ನ ಮಿತ್ರರೊಡಗೂಡಿ, ಮಹಾಭಾಗ್ಯವನ್ನು ಹೊಂದಿ ಸಂತೋಷಿಸುತ್ತಿರುವುದಲ್ಲಿ ಸಂದೇಹವಿಲ್ಲ” ಎಂದು ಹೇಳಿ,ರಾಮನು ಆ ಲಕ್ಷ ಣನೊಡಗೂಡಿ, ಅನೇಕವಸ್ತುಸಮೃದ್ಯಗಳಾದ ಗುಹೆಗಳಿಂದಲೂ, ಪೊದರು