ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೭ ]. ಕಿಷಿಂಧಾಕಾಂಡವು ೧೪೯೬ ರಾವಣನನ್ನೂ, ಅವನ ರಾಷ್ಟ್ರವನ್ನೂ, ಅವನ ಪರಿವಾರಗಳನ್ನೂ ಹುಟ್ಟ ಡಗಿಸಬಹುದು ಅಣ್ಣಾ'ಈಗ ನಾನು ನಿನಗೆ ಉಪದೇಶಿಸುವೆನೆಂದು ತಿಳಿಯ ಬೇಡ' ಬೂದಿಯಲ್ಲಿ ಮುಚ್ಚಿ ಹೋದ ಬೆಂಕಿಯನ್ನು ಅಗ್ರು ದ್ವೀಪಕಗಳಾದ ಆಹುತಿಗಳಿಂದ ಉರಿಸುವಂತೆ, ಈಗ ಸೀತಾವಿರಹದುಃಖದಿಂದ ನಿದ್ರೆಮಾ ಡುತ್ತಿರುವ ನಿನ್ನ ವಿಧ್ಯವನ್ನು ಎಚ್ಚರಗೊಳಿಸುತ್ತಿರುವೆನೇ ಹೊರತುಬೇರೆ ಯಲ್ಲ” ಎಂದನು ಹೀಗೆ ಹಿತವಾಗಿಯೂ ಶ್ರೇಯಸ್ಕರವಾಗಿಯೂ ಇರುವ ಲಕ್ಷಣನ ಮಾತನ್ನು ಕೇಳಿ, ರಾಮನು ಅದನ್ನ ಭಿನಂದಿಸುತ್ಯ ಆತನನ್ನು ಕು ರಿತು ಸ್ನೇಹಪೂಕವಾಗಿ ವತ್ರನೆ' ನಿಜವಾದ ಅನುರಾಗವುಳ್ಳವನಾಗಿಯೂ ಪ್ರಿಯನಾಗಿಯೂ, ಹಿತವಾಗಿಯೂ, ಸತ್ಯಪರಾಕ್ರಮಗಳುಳ್ಳವನಾಗಿಯೂ ಇರುವ ಮಿತ್ರನು ಯಾವಮಾತುಗಳನ್ನಾಡಬೇಕೊ, ಅಂತಹ ಮಾತುಗಳನ್ನೇ ನೀನೂ ಆಡಿರುವೆ ಇದೊ' ಈಗಲೇ ನಾನು ನನ್ನ ಸಮಸ್ತಕಾಠ್ಯಗಳಿಗೂ ಭಂಗವನ್ನುಂಟುಮಾಡುತ್ತಿರುವ ಈ ನನ್ನ ಶೋಕವನ್ನು ಬಿಟ್ಟುಬಿಟ್ಟೆನು ಇನ್ನು ನಾನು ಎಂತಹ ಪರಾಕ್ರಮಕಾರಗಳಲ್ಲಿಯೂ ನಿರಂಕುಶವಾಗಿ ಪ್ರವರ್ತಿಸ ತಕ್ಕ ನನ್ನ ವೀಠ್ಯವನ್ನೆ ಪ್ರೋತ್ಸಾಹಿಸುವೆನು ಮುಂದಿನ ಶರತ್ಕಾಲವನ್ನೇ ಇದಿರು ನೋಡುತ್ತಿರುವೆನು ಎಲೆವನೆ' ನೀನು ಹೇಳಿದಂತೆಯೇ ನಡೆಸುವೆನು ಸುಗ್ರಿವನ ಅನುಗ್ರಹವನ್ನೂ ನದಿಗಳ 'ಪ್ರಸನ್ನತೆಯನ್ನೂ ನಿರೀಕ್ಷಿಸುತ್ತಿರು ವೆನು ಲೋಕದಲ್ಲಿ ಕೃತಜ್ಞನಾದ ವೀರನು, ತಾನು ಇತರರಿಂದ ಪಡೆದ ಉ ಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡದಿರಲಾರನು ಕೃತಜ್ಞತೆಯಿಲ್ಲದವ ನಾದರೂ ತಾನು ಹೊಂದಿದ ಉಪಕಾರವನ್ನು ಸ್ಮರಿಸದೆ, ಪ್ರತ್ಯುಪಕಾರ ವನ್ನೂ ..ಾಡದೆ ಮಹಾತ್ಮರ ಮನಸ್ಸನ್ನು ನೋಯಿಸುವನು” ಎಂದನು ಇದನ್ನು ಕೇಳಿ ಲಕ್ಷ್ಮಣನು,ರಾಮನ ಮಾತನ್ನು ಮನ್ನಿಸಿ, ಆತನಿಗೆ ವಿನಯದಿಂ ದ ಕೈಮುಗಿದುನಿಂತು, ಮುಂದಿನ ಕಾರ್ಯವನ್ನು ಮನಸ್ಸಿನಲ್ಲಿ ಚಿಂತಿಸುತ್ತ ಆ ರಾಮನನ್ನು ಕುರಿತು, ಅಣ್ಣಾ' ನೀನು ಹೇಳಿದುದು ನಿಜವು ಸುಗ್ರೀವ ನು ನಿನ್ನ ಕೋರಿಕೆಯನ್ನು ಶೀಘ್ರದಲ್ಲಿಯೇ ಕೈಗೂಡಿಸುವನು ಈಮಳೆಗಾಲ ವು ಮುಗಿದು ಶರತ್ಕಾಲವು ಬರುವವರೆಗೂ ಸಹಿಸಿಕೊಂಡಿರು ನಿನ್ನ ಶತ್ರುವ ನ್ನು ನಿಗ್ರಹಿಸುವವಿಷಯದಲ್ಲಿ ಎದೆಗುಂದದೆ ಉತ್ಸಾಹಯುಕ್ತ ನಾಗಿರು' ಆ