ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೮ ] ಕಿಷಿಂಧಾಕಾಂಡವು. ೧೪da ಮೇಫುಗಳಲ್ಲಿ ಮೋಹಗೊಂಡು, ಮೇಲೇಳುತ್ತಿರುವ ಈ ಕೊಕ್ಕರೆಗಳ ಸಾ ಲನ್ನು ನೋಡಿದೆಯಾ?ಆಕಾಶದ ಅಲಂಕಾರಾರವಾಗಿ ರಚಿಸಲ್ಪಟ್ಟ ಬಿಳೀ ಕ ಮಲದಮಾಲಿಕೆಯು ಗಾಳಿಯಿಂದಾಡುತ್ತಿರುವಂತೆ ತೋರುವುದು ಈ ಹಸು ರುಹುಲ್ಲಿನಮೇಲೆ, ನಡುನಡುವೆ ಇಂದ್ರಕೋಪಗಳೆಂಬ ಮಳೆಯ ಹುಳುಗಳು ಬಿದ್ದಿರುವುದರಿಂದ ಚಿತ್ರಿತವಾದ ಹಸುರುಬಟ್ಟೆಯನ್ನು ಟ್ಟಿರುವ ಸ್ತ್ರೀಯಂತೆ ಕಾಣುತ್ತಿರುವುದು ನೋಡು ! ಯೋಗನಿದ್ರೆಯು ಶ್ರೀಮಹಾವಿಷ್ಣುವ ನ್ಯೂ, ನದಿಯು ಸಮುದ್ರವನ್ನೂ, ಬಲಾಕಪಚ್ಚೆಗಳು ಆಕಾಶದಲ್ಲಿರುವ ಮೇಫುವನ್ನೂ, ಕಾಮವುಳ್ಳ ಸ್ತ್ರೀಯರು ತಮ್ಮತಮ್ಮ ನಾಯಕರನ್ನೂ ಸೇರುವ ಕಾಲವೇ ಇದು ಈಗಲೇ ವನಪ್ರದೇಶಗಳೆಲ್ಲವೂ ನವಿಲುಗಳ ನರ್ತನದಿಂದ ಶೋಭಿಸುವುವು ಕದಂಬವೃಕ್ಷಗಳು ಪ್ರಷ್ಟ ಸಮೃದ್ಧಿ ಯನ್ನು ಹೊಂದಿರುವುವು ಈಗ ವೃಷಭೆಗಳು ಗೋವುಗಳಲ್ಲಿ ಸಮಾನ ವಾದ ಕಾಮವುಳ್ಳವುಗಳಾಗಿರುವುವು ಈಗ ಭೂಮಿಯು ಅನೇಕ ಸಸ್ಯ ಗಳಿಂದ ಮನೋಹರವಾಗಿ ಕಾಣುತ್ತಿರುವುದು ಈ ಕಾಲದಲ್ಲಿ ನದಿಗಳೆಲ್ಲ ವೂ ತುಂಬಿ ತುಳುಕುತ್ತಿರುವುವು ಮೇಫುಗಳು ಯಥೇಚ್ಛವಾಗಿ ವರ್ತಿಸು ವುವು ಮದದಾನೆಗಳು ಸಂತೋಷದಿಂದ ಗರ್ಜಿಸುವುವು ವನಭೂಮಿಗಳೆ ಲವೂ ಕಾಂತಿವಿಶಿಷ್ಟವಾಗಿರುವುವು ವಿರಹಿಗಳು ಅನವರತವೂ ತಮ್ಮ ತಮ್ಮ ಪ್ರಿಯರನ್ನೇ ಧ್ಯಾನಿಸುತ್ತಿರುವರು ನವಿಲುಗಳು ಅತ್ಯಾನಂದದಿಂದ ನರ್ತಿಸು ತಿರುವುವು ಈ ಕಾಲದಲ್ಲಿ ಕಪಿಗಳಿಗೆ ಇದ್ದ ಕಡೆಯಲ್ಲಿಯೇ ಸಮೃದ್ಧವಾದ ಆಹಾರವು ಸಿಕ್ಕುವುದರಿಂದ ಅವು ನೆಮ್ಮದಿಯಿಂದಿರುವುವು ಅಲ್ಲಲ್ಲಿ ಕಾಡಾನೆಗ ಳು ತಾಳೆಯ ಹೂವಿನ ಸುವಾಸನೆಯಿಂದ ಹರ್ಷಿತಗಳಾಗಿ, ಗಿರಿನಗಳ ಪ್ರ ವಾಹವೇಗದಿಂದುಂಟಾದ ಶಬ್ದವನ್ನು ಕೇಳಿ ರೇಗುತ್ತ, ಅಲ್ಲಲ್ಲಿ ಕೂಗಿಡು ತಿರುವ ನವಿಲುಗಳ ಧ್ವನಿಯನ್ನನುಸರಿಸಿ ಮದದಿಂದ ಗರ್ಜಿಸುವುದನ್ನು ಕೇ ಳಿದೆಯಾ? ಇದೊ' ಇತ್ತಲಾಗಿ ಕದಂಬಪಷ್ಟಗಳಲ್ಲಿ ಮಕರಂದವಾನಕ್ಕಾಗಿ

  • ಇಲ್ಲಿ ಕರೀಮೋಡಗಳಲ್ಲಿ ಸೇರಿರುವ ಬಿಳೀಕೊಕ್ಕರೆಗಳ ಸಾಲನ್ನು ವರ್ಣಿ ಸುವುದರಿಂದ, ಕಾಲಮೇಘಶ್ಯಾಮನಾದ ಭಗವಂತನಲ್ಲಿ ಸೇರುವ ಭಕ್ತಿರೂಪವಾದ ಬು ದಿಯು ಸೂಚಿತವು.