೧೫c೪ ಶ್ರೀಮದ್ರಾಮಾಯಕವ (ಸರ್ಗ ೨೮. ಬರುತ್ತಿರುವ ದುಂಬಿಗಳ ದುರವಸ್ಥೆಯನ್ನು ನೋಡು ಇವು ಈ ಪುಷ್ಪಗಳಲ್ಲಿ ಸಮೃದ್ಧವಾಗಿರುವ ಮಕರಂದವನ್ನು ಕುಡಿಯುವುದರಿಂದ, ಕ್ಷಣಮಾತ್ರದಲ್ಲಿ ಮದವೇರಿದ್ದರೂ, ಮೇಲೆ ಬೀಳುವ ಮಳೆಯ ಬಡಿತಕ್ಕೆ ತಡೆಯಲಾರದೆ ಕ್ಷ ಇಕ್ಷಣಕ್ಕೂ ಕೂಂಬೆಗಳ ಮರೆಯಲ್ಲಿ ಅವಿತುಕೊಳ್ಳುವುವು ಇರರಿಂದ ಅವುಗ ಳ ಮದವೆಲ್ಲವೂ ನಿಮಿಷಮಾತ್ರದಲ್ಲಿ ಉಡುಗಿಹೋಗುತ್ತಿರುವುದು ಇದ್ದಲಿನ ರಾಶಿಯಂತೆ ಕಪ್ಪಾಗಿಯೂ, ರಸಪೂರ್ಣವಾಗಿಯೂ ಇರುವ ಹಣ್ಣುಗಳಿಂದ ತುಂಬಿದ ಈ ನೇರಳೆಯ ಮರದ ಕೊಂಬೆಗಳನ್ನು ನೋಡಿದೆಯಾ?ಇವುಗಳ ಸು ತಲೂ ದುಂಬಿಗಳು ಬಂದು ಮುತ್ತಿರುವಂತೆ ತೋರುವುವು ಮಿಂಚುಗಳೊ ಡಗೂಡಿ ಗಂಭೀರವಾಗಿ ಗರ್ಜಿಸುತ್ತಿರುವ ಈ ಮೇಫುಗಳು, ಪತಾಕೆಗಳಿಂದ ಲಂಕೃತಗಳಾಗಿ ಯುದ್ಧದಲ್ಲಿ ನಿಂತು ಗರ್ಜಿಸುವ ಆನೆಗಳಂತಿರುವುವು ಈಬೆಟ್ಟ ದ ಮೇಲಿನ ಆಡವಿಗಳ ದಾರಿಯನ್ನು ಹಿಡಿದು ಹೋಗುತ್ತಿರುವ ಈ ಕಾಡಾ ನೆಗಳು,ಆಗಾಗ ಮೇಫುಧ್ವನಿಯನ್ನು ಕೇಳಿ, ಪ್ರತಿಗಜಗರ್ಜನೆಯೆಂಬ ಭ್ರಾಂ ತಿಯಿಂದ ಕೋಪಗೊಂಡು, ಅದರೊಡನೆ ಹೋರಾಡಬೇಕೆಂದು ವೇಗದಿಂದ ಹಿಂತಿರುಗುತ್ತಿರುವುದನ್ನು ನೋಡು, ವತ್ಸನೆ' ಚಿತ್ರವಿಚಿತ್ರಗಳಾದ ಅನೇಕವಿ ಷಯಗಳನ್ನೊಳಗೊಂಡ ಈ ಕಾಡುಗಳ ಸನ್ನಿವೇಶವನ್ನು ನೋಡಿದೆಯಾ ? ಭ್ರಮರಸಮೂಹಗಳಿಂದ ಈ ವನವೇ ಅಲ್ಲಲ್ಲಿ ಗಾನಮಾಡುವಂತಿರುವುದು ನ ವಿಲುಗಳಿಂದ ಕುಣಿಯುವಂತಿರುವುದು ಮದದಾನೆಗಳಿಂದ ಮತ್ತೇರಿದಂತಿರು ವುದು ಅಲ್ಲಲ್ಲಿ ಕಡವು,ಮತ್ತಿ,ಬಾಳೆ ಮುಂತಾದ ಹೂಗಳು ಕಾಣುತ್ತಿರುವ ದರಿಂದಲೂ, ಅಲ್ಲಲ್ಲಿ ಸ್ವಚ್ಛವಾದ ಹೊಸನೀರು ನಿಂತಿರುವುದರಿಂದಲೂ, ಅಲ್ಲಲ್ಲಿ ಮದವೇರಿದ ನವಿಲುಗಳು ಕುಣಿಯುತ್ತಿರುವುದರಿಂದಲೂ, ಈ ವನಭೂ ಮಿಯು ಒಂದುಶಾನಭೂಮಿಯಂತೆಯೇ ನನಗೆ ತೋರುತ್ತಿರುವುದು, ಅಲ್ಲಲ್ಲಿ ಮರದೆಲೆಗಳಮೇಲೆ ಮುತ್ತಿನಮಣಿಗಳಂತೆ ಅಂಟಿಕೊಂಡಿರುವ ಸ್ವಚ್ಛವಾದ ಮಳೆಯಹನಿಯನ್ನು ನೋಡಿ, ವಿಚಿತ್ರವಾದ ಗರಿಗಳುಳ್ಳ ಈ ಚಾತಕಪಕ್ಷಿಗ ಳು, ಪರಮಸಂತೋಷಗೊಂಡು, ತಮಗೆ ದೇವೇಂದ್ರದತ್ತವಾದ ಆ ನೀರ ನ್ನು ಬಹುಕಾಲದಿಂದ ತಮಗಿದ್ದ ದಾಹವೆಲ್ಲವೂ ಅಡಗುವಂತೆ ಕುಡಿಯುವುವು ನೋಡು, ಭ್ರಮರಝಂಕಾರಗಳೆಂಬ ತಂತ್ರಿಧ್ವನಿಗಳಿಂದಲೂ, ಕಪಿಗಳ
ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೩
ಗೋಚರ