ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪೫ ಸರ್ಗ, ೨೮ ] ಕಿಷಿಂಧಾಕಾಂಡವು ಕೂಗೆಂಬ ಕರತಾಳಗಳಿಂದಲೂ ಈಗ ಈ ಕಾಡುಗಳೆಲ್ಲವೂ ಸಂಗೀತವನ್ನಾ ರಂಭಿಸಿದಂತಿರುವುವು ಅಲ್ಲಲ್ಲಿ ಕೆಲವು ನವಿಲುಗಳು ನರ್ತನಗಳನ್ನು ಮಾ ಡುತ್ತಿರುವುವು ಮತ್ತೆ ಕೆಲವು ಕೇಕಾಧ್ವನಿಗಳನ್ನು ತೋರಿಸುತ್ತಿರುವುವು ಮತ್ತೆ ಕೆಲವು ಮರಗಳನ್ನ ಪ್ಪಿ ಸ್ತಬ್ಧವಾಗಿ ನಿಂತಿರುವುವು ಇದನ್ನು ನೋ ಡಿದರ ನರ್ತಕರಿಂದಲೂ, ಗಾಯಕರಿಂದಲೂ, ಅವುಗಳನ್ನು ಅಭಿನಂದಿಸು ತಿರುವ ಸಾಮಾಜಿಕರಿಂದಲೂ, ತುಂಬಿದ ದೊಡ್ಡ ಗಾನಸಭೆಯೊಂದು ಈ ಕಾಡಿನಲ್ಲಿ ನಡೆಯುವಂತಿರುವುದು ನೋಡು' ಬಗೆಬಗೆಯಾದ ಆಕಾರಗ ಳಿಂದಲೂ, ಬಣ್ಣಗಳಿಂದಲೂ, ಧ್ವನಿಗಳಿಂದಲೂ ಕೂಡಿದ ಇಲ್ಲಿನ ಕಪಿಗಳು, ಮೇಫುಗಳ ಗರ್ಜನವನ್ನು ಕೇಳಿ ಬಹುಕಾಲದಿಂದ ತಾವು ಅನುಭವಿಸುತಿದ್ದ ನಿದ್ರೆಯನ್ನೂ ಬಿಟ್ಟು ಎಚ್ಚತ್ತು,ಮಳೆಯ ಬಡಿತಕ್ಕೆ ಸಿಕ್ಕಿ ಅರಚಿಕೊಳ್ಳುವುವು ನೋಡು ಕಾಮಮದದಿಂದುಬ್ಬಿದ ಯುವತಿಯರು ತಮ್ಮ ತಮ್ಮ ಹಿರಿಯರ ನ್ಯೂ,ಪರಿಜನರನ್ನೂ ಲಕ್ಷ್ಯಮಾಡದೆ,ಉಬ್ಬಿದ ಸ್ತನಗಳು ಜಗ್ಗುವಂತೆನವೋ ಡೆಯರಾದ ಸ್ತ್ರೀಯರಿಗಿರಬೇಕಾದ ಲಜ್ಜೆಯನ್ನೂ ಬಿಟ್ಟು, ಉತ್ತಮವಾದಫಲಾ ದ್ಯುಪಚಾರಗಳನ್ನೂ, ಚಂದನಕಝರ ಕುಸುಮತಾಂಬೂಲಾದಿ ಭೋಗ ದ್ರವ್ಯಗಳನ್ನೂ ಕೈಕಾಣಿಕೆಯಾಗಿ ತೆಗೆದುಕೊಂಡು, ತಮ್ಮ ತಮ್ಮ ಪ್ರಿಯರ ಬಳಿಗೆ ಅತ್ಯಾತುರದಿಂದೋಡುವಂತೆ, ಈ ನದಿಗಳೂಕೂಡ, ಉಕ್ಕಿಬರುವ ತ ಮ್ಯ ಪ್ರವಾಹವೇಗದಿಂದ ಎರಡುಪಕ್ಕದ ದಡಗಳನ್ನೂ ಒದರಿಕೊಂಡು, ತ ಮ್ಮ ಮೇಲೆ ತೇಲಾಡುವ ಚಕ್ರವಾಕದಂಪತಿಗಳೊಡನೆಯೂ ಪ್ರವಾಹವೇಗ ದಲ್ಲಿ ಕೊಚ್ಚಿ ಬರುವ ಪುಷ್ಟಫಲಾದಿಗಳೊಡನೆಯೂ ಕೂಡಿ, ತಮ್ಮ ಪತಿಯಾ ದ ಸಮುದ್ರರಾಜನಕಡೆಗೆ ವೇಗದಿಂದೂಡುತ್ತಿರುವುವು ಕಾಡುಗಿಚಿ ನಿಂದ ಬೆಂದ ಬೆಟ್ಟಗಳು ಒಂದರಮೇಲೊಂದು ಕಾಣುವಂತೆ ದೊಡ್ಡ ದೊಡ್ಡ ಕರೀ ಮೇಫುಗಳನಡುವೆ ಹೊಸನೀರಿನಿಂದ ತುಂಬಿ ಕಪ್ಪಾದ ಸಣ್ಣ ಮೇಘಗಳ ಪದರಗಳು ಕಾಣುವುವು ಸಂತೋಷದಿಂದ ಕೇಕಾಧ್ವನಿಯನ್ನು ಮಾಡುವ ನವಿ ಲುಗಳಿಂದಲೂ, ಇದ್ರಕೋಪಗಳೆಂಬ ಕೆಂಪುಹುಳುಗಳಿಂದ ತುಂಬಿದ ಹ ಸುರುಹುಲ್ಲಿನ ನೆಲದಿಂದಲೂ, ಕಡವು ಮುಂತಾದ ಹೂಗಳ ವಾಸನೆಯಿಂದ ಲೂ, ಸತ್ಯೇಂದ್ರಿಯಗಳಿಗೂ ಆನಂದವನ್ನುಂಟುಮಾಡುವ ಈ ಅಡವಿಗಳ 95