ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫02 ಸರ್ಗ೨೮ ) ಕಿಂಧಾಕಾಂಡವು, ಗಳ ದ್ವಾರದಲ್ಲಿ ಅತ್ತಿತ್ತಕದಲಿ ಬಿಳುವಾಗ, ಮುತ್ತಿನಹಾರವನ್ನು ಕಿತ್ತು ಚೆಲ್ಲಿ ದಂತೆ ಕಾಣುವುವು ಅಲ್ಲಲ್ಲಿನ ಕಲ್ಲುಬಂಡೆಗಳನ್ನು ತೊಳೆದುಕೊಂಡು ಅತಿವೇ ಗದಿಂದ ಬಿಳುವ ಈ ಪ್ರವಾಹಗಳು, ಮುತ್ತಿನ ಹಾರಗಳಂತೆ ಕಾಣುತ್ತ ಅಲ್ಲ ಫೈನ ಗುಹಾದ್ವಾರಗಳಲ್ಲಿ ತಂಗಿ ಬರುತ್ತಿರುವುದನ್ನು ನೋಡು ಆಕಾಶದಿಂದ ನಾಲ್ಕು ದಿಕ್ಕುಗಳಲ್ಲಿಯೂ ಚದರಿ ಬಿಳುವ ಜಲಧಾರೆಗಳು, ಸಂಭೋಗಸಮ ಯಗಳಲ್ಲಿ ಕಿತ್ತುಹೋದ ದೇವತಾಸ್ತಿಯರ ಹಾರದಿಂದುಹಿರಿಬಿದ್ದ ಮುತ್ತು ಗಳೋ ಎಂಬಂತೆ ಕಾಣುವುವು ಪಕ್ಷಗಳು ಗೂಡಿಗೆ ಸೇರುವುದರಿಂದಲೂ ತಾವರಗಳು ಮುಚ್ಚಿ ಕೊಳ್ಳುವುದರಿಂದಲೂ, ಜಾಜಿಯ ಹೂಗಳು ಅರಳುವು ದರಿಂದಲೂ, ಈಗ ಸೂರನು ಅಸ್ತಂಗತನಾಗುವನೆಂದು ಸೂಚಿತವಾಗುವು ದು ಈಗ ರಾಜರ ಯುದಯಾತ್ರೆಗಳು ನಿಂತುಹೋಗಿವೆ ಇದಕ್ಕೆ ಮೊದಲೇ ಯುದ್ಧೋದ್ಯುಕ್ತವಾಗಿ ಹೊರಟ ಸೇನೆಯಕೂಡ ಹಿಂತಿರುಗಿ ತನ್ನ ಪುರಕ್ಕೆ ಬಂದು ಸೇರುತ್ತಿರುವುದು ಈ ಮಳೆಗಾಲವು ಯುದ್ಧಪ್ರಯತ್ನವನ್ನು ನಿಲ್ಲಿ ಸುವುದು ಮಾತ್ರವೇ ಅಲ್ಲದೆ, ಅಲ್ಲಲ್ಲಿ ಜಲಪ್ರವಾಹಗಳ ಹೆಚ್ಚಿಗೆಯಿಂದ ಅತ್ತಿ ತ ಕದಲುವುದಕ್ಕೂ ಅವಕಾಶವಿಲ್ಲದೆ ರಾಜರಿಗಿರುವ ಪರಸ್ಪರವೈರವನ್ನೆ ಆ ಡಗಿಸಿ ಬಿಡುವಂತಿರುವುದು ಎಲ್ಲೆಲ್ಲಿಯೂ ನೀರು ತುಂಬಿಕೊಂಡಿರುವುದರಿಂ ದ, ಸಂಚಾರಯೋಗ್ಯವಾದ ದಾರಿಯಾವುದೆಂದು ತಿಳಿಯುವುದಕ್ಕೂ ಸಾ ಧ್ಯವಿಲ್ಲದೆ, ಸಮಸ್ತ ಪ್ರದೇಶಗಳೂ ಜಲಮಯವಾಗಿ ಒಂದೇಸಮನಾಗಿ ಕಾ ಣುವುವು ಸಾಮವೇದಿಗಳಾದ ಬ್ರಾಹ್ಮಣರಿಗೆ ಅಧ್ಯಯನಾರಂಭಸಮಯ ವಾದ ಭಾದ್ರಪದಮಾಸದ ಹಸ್ತನಕ್ಷತ್ರವು ಸನ್ನಿ ಹಿತವಾಯಿತು ಕೋಸ ಲದೇಶಾಧೀಶ್ವರನಾದ ನಮ್ಮ ಭರತವು, ಗೃಹೋಪಕರಣಗಳಾಗಲಿ, ಇತರ ವಸ್ತುಗಳಾಗಲಿ ಈ ಮಳೆಗಾಲದ ನಾಲ್ಕು ತಿಂಗಳಲ್ಲಿ ಸಿಕ್ಕುವುದು ಕಷ್ಟ ವೆಂಬುದಕ್ಕಾಗಿ, ಆಷಾಢಮಾಸದ ಹುಣ್ಣಿಮಗೆ ಮೊದಲೇ, ಮನೆಗೆ ಬೇಕಾ ದ ಸಾಮಗ್ರಿಗಳನ್ನು ಸಂಗ್ರಹಿಸುವ ಕಾಶ್ಯವೆಲ್ಲವನ್ನೂ ತೀರಿಸಿಕೊಂಡು, ಧನ ಧಾನ್ಯಗಳನ್ನೂ ಸಂಗ್ರಹಿಸಿಟ್ಟುಕೊಂಡು, * ಆಷಾಢದ ಹುಣ್ಣಿಮೆಯನ್ನೇ

  • ಈ ಚಾತುಯ್ಯಾಸ್ಯ ಕ್ರಮವು ಭಾರತದಲ್ಲಿಯೂ 'ಆಷಾಢಸ್ಯ ಸಿತೇ ಪಕ್ಷ ಏಕಾದಶ್ಯಾಮುಪೋಷಿತ ಚಾತುರಾಸ್ಯ ವ್ರತಂ ಕುರಾದ್ಯಕ್ಕಿಂಚಿತ್ಪಯತೋನರಸಿ