ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦೮ ಶ್ರೀಮದ್ರಾಮಾಯಣವು [ಸರ್ಗ ೨೮, ವ್ರತಾಂಗವಾಗಿ ಸ್ವೀಕರಿಸಿರುವನೆಂಬುದರಲ್ಲಿ ಸಂದೇಹವಿರದು ನಾನು ಎಲ್ಲಿ ಗಾದರೂ ಹೋಗಿ ಹಿಂತಿರುಗಿಬಂದಾಗ, ಅಯೋಧ್ಯಾವಾಸಿಗಳು ನನ್ನ ಪ್ರತ್ಯಾ ಗಮನವನ್ನು ನೋಡಿ ಆನಂದದಿಂದ ಕೋಲಾಹಲವನ್ನು ಮಾಡುತಿದ್ದಂತೆ ಮ ಳೆಗಾಲದಲ್ಲಿ ಜಲಪೂರಿತವಾದ ಸರಯೂ ನದಿಯು, ಈಗ ಕೋಲಾಹಲದಿಂದ ಧ್ವನಿಮಾಡುತ್ತಿರಬಹುದಲ್ಲವೆ? ಸುಗ್ರೀವನು ತನ್ನ ವೈರಿಯನ್ನು ನಿಗ್ರಹಿಸಿ,ರಾ ಜ್ಯವನ್ನೂ, ತನ್ನ ಪತ್ನಿ ಯಾದ ರೂಮೆಯನ್ನೂ ವಶಪಡಿಸಿಕೊಂಡಿರುವುದರಿಂದ ಈ ಮನೋಹರವಾದ ಮಳೆಗಾಲವೆಲ್ಲವನ್ನೂ ಎಷ್ಟೊಸುಖದಿಂದ ಕಳೆಯು ತಿರುವನು ವತ್ರನೆ' ನನಗೆ ಆಭಾಗ್ಯವೆಲ್ಲಿಯದು ? ಇಂತಹ ಭೋಗ್ಯವಾದ ಕಾಲದಲ್ಲಿಯೂಕೂಡ ನಾನು ಹೆಂಡತಿಯನ್ನೂ, ರಾಜ್ಯವನ್ನೂ ಕಳೆದುಕೊಂ ಡು, ಈ ಕಾಡಿನಲ್ಲಿ ಕಷ್ಟಪಡುತ್ತ, ಈಗ ಅಲ್ಲಲ್ಲಿ ಪ್ರವಾಹವೇಗದಿಂದ ಕಿತ್ತು ಹೋದ ನದಿಯ ದಡದಂತೆ ಹೀನದಶೆಯನ್ನನುಭವಿಸುತ್ತಿರುವೆನು ನನ್ನ ದುಃಖ ವೋ ಅಪರಿಮಿತವಾಗಿರುವುದು ಈಮಳೆಗಾಲದಲ್ಲಿ ಒಂದೊಂದು ಮುಹೂ ರ್ತವನ್ನು ಕಳೆಯುವುದೂ ಎಷ್ಟೋ ಕಷ್ಟವಾಗಿರುವುದು ರಾವಣನಾದರೂ ನಮಗೆ ದೊಡ್ಡ ಶತ್ರುವಾಗಿರುವನು ಈ ಮೂರನ್ನೂ ದಾಟುವದೇ ನಮಗೆಶ ಕೈವಲ್ಲವೆಂದು ತೋರುವುದು ಯುದಯಾತ್ರೆಗೆ ಈ ಕಾಲವು ಎಷ್ಟು ಮಾತ್ರ ವೂ ಉಚಿತವಾಗಿ ತೋರಲಿಲ್ಲ ದಾರಿಯಲ್ಲಿ ನಡೆಯುವುದೇ ಅಶಕ್ಯವಾಗಿರುವು ದು ಇದನ್ನು ನೋಡಿಯೇ ನಾನು, ಈಗಲೇ ರಾವಣನನ್ನು ಕೊಂದು ಸೀತೆಯ ನ್ನು ತರುವುದಕ್ಕೆ ಪ್ರಯತ್ನಿಸಬೇಕೆಂದು ಸುಗ್ರೀವನು ನನ್ನ ನೈನಿರ್ಬಂಧಿಸು ತಿದ್ದರೂ ಅದಕ್ಕೊಪ್ಪದೆ ಹೋದೆನು ಇದಲ್ಲದೆ ಸುಗ್ರೀವನು ಇದುವರೆಗೂ ಎಷ್ಟೊಕಷ್ಟಗಳಿಂದ ಕಂದಿಕುಂದಿ ಕೃಶನಾಗಿ ಬಹುಕಾಲಕ್ಕೆ ಈಗಲೇ ತನ್ನ ಪತ್ನಿ ಯನ್ನು ಪಡೆದಿರುವನು ನಮ್ಮ ಕಾವ್ಯವೋ ಬಹಳ ಮಹತ್ತಾಗಿರುವುದು. ಸ್ವಲ್ಪ ಪ್ರಯತ್ನದಿಂದಾಗಲಿ, ಸ್ವಲ್ಪ ಕಾಲದಲ್ಲಾಗಲಿ ಸಾಧ್ಯವಾಗತಕ್ಕುದಲ್ಲ. ಇದಕ್ಕಾಗಿಯೇ ನಾನು ಅವನನ್ನು ಈಗ ನಮ್ಮ ಕಾಲ್ಯದಲ್ಲಿ ಪ್ರಯತ್ನಿಸು ವುದಕ್ಕೊಪ್ಪಲಿಲ್ಲ' ಸುಗ್ರೀವನು ಕೃತಜ್ಞತೆಯುಳ್ಳವನಾದುದರಿಂದ ಈ ಮಳೆ ವಾರ್ಷಿಕಾಂಶ ತುರೋ ಮಾರ್ಸಾ ವ್ರತಂ ಕಿಂಚಿತ್ಯಮಾಪಯೇತ್ | ಅಸಂಭವೇ ತು ಲಾರ್ಕೆಪಿ ಕರವ್ಯಂ ತತ್ಸ ಯತ್ನತಃ” ಎಂಬುದಾಗಿ ಹೇಳಲ್ಪಟ್ಟಿದೆ - --