ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧೨ ಶ್ರೀಮದ್ರಾಮಾಯಣವು [ಸರ್ಗ ೨೯. ಸೀತೆಯನ್ನು ಪಡೆಯುವುದಾಗಿ ಅತ್ಯಾತುರವುಳ್ಳವನಾಗಿಯೂ ಇದ್ದರೂ, ನಿನ್ನ ಮನಸ್ಸನ್ನು ನೋಯಿಸದೆ ಅದನ್ನನುಸರಿಸಿಯೇ ಹೋಗಬೇಕೆಂಬ ದ ಯಾಸ್ವಭಾವವುಳ್ಳವನಾದುದರಿಂದ, ಈಗ ಮೀರಿಹೋದ ಸ್ವಲ್ಪ ಕಾಲಕ್ಕಾಗಿ ಆತನು ನಿನ್ನನ್ನು ಆಕ್ಷೇಪಿಸಲಾರನು ಆ ರಾಮನು ಸಾಮಾನ್ಯನೆಂದೆಣಿಸಬೇಡ, ಮಹಾವಂಶದಲ್ಲಿ ಹುಟ್ಟಿ ತನ್ನ ನಡತೆಯಿಂದ ಆ ವಂಶಕ್ಕೇ ಒಂದಮೇಲೆಯ ನ್ನುಂಟುಮಾಡಿರುವನು, ನಮಗೆ ಯಾವಾಗಲೂ ಆಪ್ತನಾಗಿರುವವನು ಎಣೆಯಿಲ್ಲದ ಮಹಿಮೆಯುಳ್ಳವನು ನಿನ್ನಲ್ಲಿಯೂ ಆತನಂತೆಯೇ ಅಸಾಧಾರಣ ವಾದ ಗುಣಗಳು ತುಂಬಿರುವುವು ಆದುದರಿಂದ ರಾಮನ ಕಾರವನ್ನು ನೀನು ತಪ್ಪದೆ ಈಗಲೇ ನಡೆಸಬೇಕು ಅವನು ಮೊದಲೇ ನಿನ್ನ ಕಾಲ್ಯವನ್ನು ನಡೆ ಸಿಕೊಟ್ಟಿರುವನಲ್ಲವೆ? ಆ ಕೃತಜ್ಞತೆಯನ್ನಾ ದರೂ ನೀನು ಮನಸ್ಸಿನಲ್ಲಿಟ್ಟು, ಸೀತೆಯನ್ನು ಹುಡುಕುವುದಕ್ಕಾಗಿ ವಾನರಸೈನ್ಯವನ್ನು ಕಳುಹಿಸು ಈಗಲೇ ಕಾಲಾತಿಕ್ರಮವಾಗಿದ್ದರೂ ಚಿಂತೆಯಿಲ್ಲ ರಾಮನು ಕೋಪದಿಂದ ಬಂದು ನಮ್ಮನ್ನು ನಿರ್ಬಂಧಿಸುವುದಕ್ಕೆ ಮೊದಲೇ, ನಾವು ಆ ಕಾಲ್ಯದಲ್ಲಿ ಪ್ರವರ್ತಿಸಿ ಬಿಟ್ಟರೆ, ನಮ್ಮ ದೋಷವು ಅಷ್ಟಾಗಿ ಹೊರಬೀಳದು ಈಗಲೂ ನಾವು ಸು ಮ್ಮನಿದ್ದು ,ಅವನು ಬಂದು ಪ್ರೇರಿಸಿದಮೇಲೆ ಆ ಕಾರೈಕ್ಕಾರಂಭಿಸಿದರೆ ಆಗ ದೋಷಭಾಗಿಗಳಾಗುವೆವು ಎಲೈ ವಾನರೇಂದ್ರನೆ: ಯಾವುದೊಂದು ಪಕಾರವನ್ನೂ ಮಾಡದವರಿಗೆಕೂಡ ನೀನು ಉಪಕರಿಸುವ ಸ್ವಭಾವವುಳ್ಳ ವನು ಹೀಗಿರುವಾಗ ನಿನಗೆ ರಾಜ್ಯವನ್ನೂ, ಧನವನ್ನೂ ಕೊಟ್ಟು, ಮಹೋ ಪಕಾರವನ್ನು ಮಾಡಿದ ಆ ರಾಮನ ವಿಷಯದಲ್ಲಿ ನೀನು ಕೃತಜ್ಞತೆಯನ್ನು ತೋರಿಸಬೇಕೆಂಬುದನ್ನು ಕೇಳಬೇಕೆ? ರಾಮನ ಕಾಲ್ಯವನ್ನು ನಡೆಸುವ ವಿಷ ಯದಲ್ಲಿ ನೀನು ಶಕ್ತಿಯಿಲ್ಲದವನಲ್ಲ' ' ನಿನ್ನ ಪರಾಕ್ರಮವೂ ಕಡಿಮೆಯಾದು ದಲ್ಲ ಅಸಂಖ್ಯಾತವಾದ ವಾನರಭಲ್ಲಕಸಮೂಹವು ನಿನ್ನ ಅಧೀನವಾಗಿ ರುವುದು ಇಷ್ಟು ಸಹಾಯಸಂಪತ್ತಿರುವಾಗಲೂ, ನೀನು ಆ ರಾಮನ ಮ ನೋರಥವನ್ನಿಡೇರಿಸದೆ ಸುಮ್ಮನಿರುವುದೇಕೆ? ಎಲೈ ಕವಿಸಾಲ್ವಭ ಸಮನೆ! ರಾಮನು ತನ್ನಿಂದ ಸಾಧ್ಯವಾಗದುದಕ್ಕಾಗಿ ನಿನ್ನ ಸಹಾಯವನ್ನೇ ನಿರೀಕ್ಷಿಸು ತಿರುವನೆಂದೆಣಿಸಬೇಡ' ಅವನು ತನ್ನ ಬಾಣಗಳಿಂದ ದೇವಾಸುರಮಹೋ