ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ಸರ್ಗ ೩೦ } ಕಿಷಿಂಥಾಕಾಂಡವು ದ ಸಂಕಟವುಂಟಾಯಿತು ಹಾಗೆಯೇ ಮೂರ್ಛಹೋದನು ಆದರೆ ಆತನುಥೀ ರನಾದುದರಿಂದ, ಮೂಹೂರ್ತದೊಳಗಾಗಿ ಪುನಃ ಚೇತರಿಸಿಕೊಂಡು, ಸೀತೆ ಯು ತನ್ನ ಮನಸ್ಸಿನಲ್ಲಿಯೇ ಇರುತಿದ್ದರೂ ಅವಳ ವಿಷಯವಾದ ಚಿಂತೆಯ ನ್ನು ತಂದುಕೊಂಡು ಕೊರಗುತಿದ್ದನು ಸುವರ್ಣದಿಂದಲೂ, ಗೈರಿಕಾದಿ ಧಾತುಗಳಿಂದಲೂ ವಿಚಿತ್ರಿತವಾದ ಆಪರತದ ಒಂದುಶಿಖರದಮೇಲೆ ಕುಳಿ ತು, ಶರತ್ಕಾಲಸಂಬಂಧದಿಂದ ನಿರ್ಮಲವಾದ ಆಕಾಶವನ್ನು ನೋಡಿದನು ಆ ಸನ್ನಿ ವೇಶದ ಸೊಗಸನ್ನು ನೋಡಿದಷ್ಟೂ ಇವನಿಗೆ ಸೀತೆಯ ಚಿಂತೆಯು ಪ್ರಬಲವಾಗಿಹೋಯಿತು ಮಿಂಚುಮೋಡಗಳಿಲ್ಲದೆ ನಿರ್ಮಲವಾದ ಆಕಾಶ ವನ್ನೂ , ಅಲ್ಲಲ್ಲಿ ಕೂಗುತ್ತಿರುವ ಸಾರಸಪಕ್ಷಿಗಳ ಕಿವಿಗಿಂಪಾದ ಕೂಗನ್ನೂ ಕೇಳಿ ಅತಿದುಃಖದಿಂದ ವಿಲಪಿಸುತಿದ್ದನು ಆಗ ಅವನು ತನ್ನ ಮನಸ್ಸಿನಲ್ಲಿ ಆ ಹಾ' ಈ ಸಾರಸಪಕ್ಷಿಯಂತೆಯೇ ಇಂಪಾದ ಧ್ವನಿಯುಳ್ಳ ನನ್ನ ಪ್ರಿಯೆಯು, ಮೊದಲು ಈ ಪಕ್ಷಿಗಳ ಧ್ವನಿಯನ್ನು ಕೇಳಿದೊಡನೆ ಎಷೋ ಆನಂದಿಸುತ್ತಿದ್ದ ಳು ಈಗ ಯಾವಾಗಲೂ ರಾಕ್ಷಸರ ಕ್ರೂರವಚನಗಳನ್ನು ಕೇಳುತ್ತಿರುವ ಆಕೆ ಗೆ ಯಾವ ವಿಧದಲ್ಲಿ ಸಂತೋಷವುಂಟು' ಬಂಗಾರದಂತೆ ನಿರ್ಮಲವಾಗಿ ಹೊ ಳೆಯುತ್ತಿರುವ ಈಗಿನ ಬಂಧೂಕಪುಷ್ಪಗಳನ್ನು ನೋಡಿಯೂ, ಆಪ್ರಿಯೆಯನ ಇನ್ನು ನೋಡದಿದ್ದರೆ ಹೇಗೆ ಸಂತೋಷಹೊಂದುವಳು' ಇಂಪಾದ ಮುದ್ದು ಮಾತುಗಳುಳ್ಳವಳಾಗಿ,ಯಾವ ಅವಯವಗಳಲ್ಲಿಯೂ ಕಂದುಕುಂದಿಲ್ಲದ ಆ ನ « ಕಾಂತೆಯು, ಮೊದಲು ಇಂತಹ ಕಲಹಂಸಗಳ ಧ್ವನಿಯನ್ನು ಕೇಳಿದೊಡ ನೆ ಎಚ್ಚರಗೊಳ್ಳುತಿದ್ದಳಲ್ಲಾ' ಈಗ ಹೇಗೆ ಎಚ್ಚರಗೊಳ್ಳುವಳು?ತನ್ನ ಸುತ್ತ ಲೂ ಸಂಚರಿಸುತಿದ್ದ ಚಕ್ರವಾಕಪಕ್ಷಿಗಳ ಧ್ವನಿಯನ್ನು ಕೇಳಿ ಸಂತೋಷಿಸು ತಿದ್ದ ಪುಂಡರೀಕಾಕ್ಷಿಯಾದ ಆ ನನ್ನ ಪ್ರಿಯೆಯು ಇನ್ನು ಬದುಕಿರುವ ಬಗೆಯೇ ನು? ಜಿಂಕೆಯ ಕಣ್ಣಿನಂತೆ ಕಣ್ಣುಳ್ಳ ಆನನ್ನ ಪ್ರಿಯೆಯಿಲ್ಲದುದರಿಂದ್ರಮನೋ ಹರಗಳಾದ ಇಲ್ಲಿನ ಕೂಳಗಳೂ,ನದಿಗಳೂ, ಬಾವಿಗಳೂ, ಅಡವಿಗಳೂ, ತೋ ವಗಳೂ ನನಗೆ ಸ್ವಲ್ಪವಾದರೂ ಹಿತಕರವಾಗಿಲ್ಲ ಈಶರತ್ಕಾಲದಲ್ಲಿ, ವಿರಹಿಗಳಿ ಗೆ ವಿಶೇಷವಾದ ಉದ್ದೀಪನವನ್ನುಂಟುಮಾಡುವ ಈಪರಿಕರಗಳನ್ನಿಟ್ಟುಕೊಂ ಡಿರುವ ಮನ್ಮಥನು, ಸುಕುಮಾರಾಂಗಿಯಾದ ಆ ಸೀತೆಯು ನನ್ನನ್ನಗಲಿ ರುವ