ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m೧೮ ಶ್ರೀಮದ್ರಾಮಾಯಣವು [ಸರ್ಗ' ೩೦ ಸೂರಚಂದ್ರನಕ್ಷತ್ರಗಳ ಕಾಂತಿಗಳಲ್ಲಿಯೂ, ವಾನರಶ್ರೇಷ್ಠರ ಲೀಲೆಗಳಲ್ಲಿ ಯೂ ತನ್ನ ಕಾಂತಿಯನ್ನು ವಿಭಾಗಿಸಿಟ್ಟಂತೆ ಪ್ರಕಾಶಿಸುತ್ತಿರುವುದುನೋಡು. ಶರತ್ಕಾಲದ ಗುಣದಿಂದ ಉತ್ಕರ್ಷವನ್ನು ಹೊಂದಿದ ಈಗಿನ ದಿನಲಕ್ಷ್ಮಿಯು, ಸೂ‌ಕಿರಣಗಳ ಸ್ಪರ್ಶದಿಂದ ವಿಕಸಿತವಾದ ತಾವರೆಕೊಳಗಳಲ್ಲಿ, ಕಪ್ಪು, ಕೆಂಪ, ಬಿಳುಪು, ಮುಂತಾದ ಬಣ್ಣಗಳುಳ್ಳ ತಾವರೆಗಳಿಂದ ವಿಚಿತ್ರಶೋಭೆ ಯನ್ನು ಹೊಂದಿ ವಿಶೇಷವಾಗಿ ಪ್ರಕಾಶಿಸುವುದು ಈಗ ವನದಲ್ಲಿ ಬೀಸುವ ಗಾಳಿಯು ಏಳೆಲೆಬಾಳೆಯ ಹೂಗಳ ಸುವಾಸನೆಯಿಂದಲೂ, ಭಮರಗಳ ಝಂಕಾರದಿಂದಲೂ ಇಲ್ಲಿನ ಮದದಾನೆಗಳ ಮದವನ್ನು ಮತ್ತಷ್ಟು ಹೆಚ್ಚಿ ಸುತ್ತಿರುವುದು ಅಲ್ಲಲ್ಲಿ ಹಂಸದಂಪತಿಗಳೂ, ಚಕ್ರವಾಕದಂಪತಿಗಳೂ ಜತೆಜತೆಯಾಗಿ ಸೇರಿ,ಪ್ರೀತಿಯಿಂದ ಒಂದಕ್ಕೊಂದು ಇದಿರಾಗಿ ಕುಳಿತು,ಕಮ ಲಥಳಿಗಳಿಂದ ತುಂಬಿದ ಗರಿಗಳನ್ನು ಬಿಚ್ಚಿ ಕೊಂಡು ನದೀತೀರದ ಮಳ ದಿಣ್ಣೆಗಳಮೇಲೆ ಆನಂದದಿಂದ ವಿಹರಿಸುತ್ತಿರುವುವು ವಿಶೇಷವಾಗಿ ಮದವೇ ರಿದ ಆನೆಗಳಲ್ಲಿಯೂ, ಕೊಬ್ಬಿದ ಎತ್ತುಗಳ ಮಂದೆಯಲ್ಲಿಯೂ, ಸ್ವಚ್ಛವಾದ ನೀರುಳ್ಳ ನದಿಗಳಲ್ಲಿಯೂ ಈ ಶರತ್ಕಾಲದ ಸೊಬಗನ್ನು ಅನೇಕವಿಧವಾಗಿ ವಿಭಾಗಿಸಿಟ್ಟಂತಿರುವುದು ಆಕಾಶದಲ್ಲಿ ಮೇಫುಗಳಿಲ್ಲದುದನ್ನು ನೋಡಿ,ಕಾಡಿ ನಲ್ಲಿರುವ ನವಿಲುಗಳು, ವ್ಯಸನದಿಂದ ತಮಗಲಂಕಾರಭೂತಗಳಾದ ಗರಿಗ ಇನ್ನು ಡುಗಿಸಿಕೊಂಡು, ತಮ್ಮ ಪ್ರಿಯೆಯರಲ್ಲಿಯೂ ಆಸಕ್ತಿಯನ್ನು ಬಿಟ್ಟು, ಕಾಂತಿಗುಂದಿ, ಅಂದಗೆಟ್ಟು, ಕೇಕಾಧ್ವನಿಯನ್ನೂ ತೋರಿಸದೆ ಚಿಂತಾಕುಲ ವಾಗಿ ಏನೋಧ್ಯಾನವನ್ನು ಮಾಡುವಂತಿರುವುವು ಮನೋಹರವಾದ ಸುವಾ ಸನೆಯುಳ್ಳುದಾಗಿಯೂ, ಹೂಗಳ ಭಾರದಿಂದ ಬಗ್ಗಿದ ಕೊನೆಗಳುಳ್ಳು ದಾಗಿಯೂ, ಬಂಗಾರದ ಬಣ್ಣವುಳ್ಳುದಾಗಿಯೂ, ನೇತ್ರಾನಂದಕರವಾಗಿ ಯೂ ಇರುವ ಅನೇಕಬಂಧೂಕಪುಷ್ಪಸಮೂಹದಿಂದ ಇಲ್ಲಿನ ಅರಣ್ಯಗಳಿಗೆ ದೀಪವಿಟ್ಟಂತೆ ಒಂದು ಅಪೂವ್ವಶೋಭೆಯುಂಟಾಗಿರುವುದು ನೋಡು ಇ. ದೋ' ಆನೆಗಳು ತಮ್ಮ ತಮ್ಮ ಹೆಣ್ಣಾನೆಗಳೊಡಗೂಡಿ ತಾವರೆಕೊಳ ಗಳಲ್ಲಿಯೂ, ವನಗಳಲ್ಲಿಯೂ ವಿಹರಿಸಬೇಕೆಂಬ ಆತುರದಿಂದ ಅಲ್ಲಲ್ಲಿ ಸುತ್ತು ಇ.ಮದವೇರಿದವುಗಳಾಗಿ,ಗಂಡಸ್ಥಲಗಳಿಂದ ಮಗಜಲವನ್ನು ಸುರಿಸುತ್ತ,ಮೆ