ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ಶ್ರೀಸೀತಾಲಕ್ಷ್ಮಣಸಮೇತ ಶ್ರೀರಾಮಚಂದ್ರಪರಬ್ರಹ್ಮಣೇ ನಮಃ ಶ್ರೀಮದ್ರಾಮಾಯಣವು ಕಬ್ಬಿಂಧಾ ಕಾಂಡವು. ಪಂಪಾವರ್ಣನವು ರಾಮನ ವಿರಹದುಖವು Km (Oರಾಮನು ಲಕ್ಷಣಸಹಿತನಾಗಿ ಸಂಪಾತೀರಕ್ಕೆ ಬಂದು, ಅಲ್ಲಿ ತಾವರೆ, ನೈದಿಲೆ, ಮೊದಲಾದ ನೀರುಹೂಗಳಿಂದಲೂ, ಅನೇಕ ಮಜಾತಿ ಗಳಿಂದಲೂ ಅತಿಮನೋಹರವಾದ ಆ ಕೊಳದ ಅಂದವನ್ನು ನೋಡಿದನು ಆಗ ಅವನ ಮನಸ್ಸು ಕದಲಿತು ಸೀತೆಯನ್ನು ಸ್ಮರಿಸಿಕೊಂಡು ಅಳು ವುದಕ್ಟ್ರಾರಂಭಿಸಿದನು ಅದರ ಅಂದವನ್ನು ನೋಡಿ ನೋಡಿ ಅವನ ಇಂದ್ರಿಯಗಳೆಲ್ಲವೂ ಪರವಶಗಳಾದುವು ಆಗ ಲಕ್ಷಣವನ್ನು ಕುರಿತು ಹೇಳುವನು (ಎಲೆ ವತ್ಸನೆ' *ವೈಡೂಲ್ಯದಂತೆ ಸ್ವಚ್ಛವಾದ ನೀರುಳ್ಳ ಈ ಸಂಪಾಸರೋವರವು - * ಇಲ್ಲಿ ಸ್ವಚ್ಛಜಲವಂಬುದರಿಂದ ಭಕ್ತಿಯುಕ್ತವಾದ ಹೃದಯವೂ, ಕಮಲವಿ ಕಸವೇ ಮೊದಲಾದವುಗಳಿಂದ ಆ ಭಕ್ತಿಸೂಚಕಗಳಾದ ಮುಖಪ್ರಸಾದಾದಿಗಳೂ ಸೂಚಿತವ,