ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨೨ ಶ್ರೀಮದ್ರಾಮಾಯಣವು (ಸರ್ಗ, ೩೦ ರಗಳ ಮದಝೇಂಕಾರಗಳಿಂದ ಕೂಡಿದ ವನಗಳಲ್ಲಿ, ಈಗ ಮನ್ಮಥನು ಬಿಲ್ಲು ಬಾಣಗಳನ್ನು ಧರಿಸಿ, ವಿರಹಿಗಳಿಗೆ ಭಯವನ್ನುಂಟುಮಾಡುತ್ತ ಉದ್ದಂಡ ವಾಗಿ ತಿರುಗುತ್ತಿರುವನು ಇದುವರೆಗೂ ಮೇಫುಗಳು ಎಡೆಬಿಡದೆ ಮಳೆ ಯನ್ನು ಸುರಿಸಿ, ಪ್ರಜೆಗಳನ್ನು ಸಂತೋಷಪಡಿಸಿ, ಕೆರೆತೊರೆಗಳನ್ನೆಲ್ಲಾ ತುಂಬಿ, ಪೈರುಗಳನ್ನೂ ವೃದ್ಧಿಗೊಳಿಸಿ, ಈಗ ಆಕಾಶವನ್ನು ಬಿಟ್ಟು ಹೊರಟು ಹೋಗಿವೆ ಎಲೆ ಸೌಮ್ಯನೆ' ಈಗ ಜಲಾಶಯಗಳೆಲ್ಲವೂ ಸ್ವಚ್ಛವಾದ ನೀರಿನಿಂ ದತುಂಬಿ, ಕಾಂಚಪಕ್ಷಿಗಳ'ಧ್ವನಿಗಳಿಂದಲೂ, ಚಕ್ರವಾಕಗಳ ಸಮೂಹ ದಿಂದಲೂ, ಸತ್ಯೇಂದ್ರಿಯಗಳಿಗೂ ಆನಂದವನ್ನುಂಟುಮಾಡುವುವು ಬೆ ಟ್ಟದ ತಪ್ಪಲುಗಳಲ್ಲಿ, ಬಂಧೂಕವೃಕ್ಷಗಳೂ, ಏಳೆಲೆಬಾಳೆಗಳೂ, ಕಾಂಚ ನವೃಕ್ಷಗಳೂ, ಕೋವಿದಾರಗಳೂ, ದಾಸವಾಳದ ಗಿಡಗಳೂ, ಪ್ರಿಯಂಗು ಲತೆಗಳೂ ಸಮೃದ್ಧವಾದ ಪ್ರಷ್ಟ ಸಮೂಹದಿಂದ ಶೋಭಿಸುತ್ತಿರುವುವು ಈಗ ನದಿಯ ದಡದಲ್ಲಿ ಕಾಣುವ ಮಳಲುದಿಣ್ಣೆಗಳೆಲ್ಲವೂ ಹಂಸಗಳಿಂದಲೂ, ಸಾರಸಗಳಿಂದಲೂ, ಚಕ್ರವಾಕಗಳಿಂದಲೂ, ಕಂಚಗಳಿಂದಲೂ ತುಂಬಿ ರುವುದನ್ನು ನೋಡಿದೆಯಾ?ಪರಸ್ಪರವೈರವನ್ನು ಬಳೆಸಿ ಜಯಾಪೇಕ್ಷೆಯಿಂದ ಆತುರಗೊಂಡಿರುವ ರಾಜರಿಗೆ, ಯುದ್ಯೋದ್ಯಮಕಾಲವು ಬಂದೊದಗಿತು ರಾ ಜರು ಯುದ್ಧಕ್ಕಾಗಿ ಪ್ರಥಮಪ್ರಯಾಣಮಾಡುವುದಕ್ಕೆ ಇದೇ ಸಮಯವು ಹೀಗಿದ್ದರೂ ಈಗ ಸುಗ್ರೀವನ ಸುಳಿವನ್ನೇ ಕಾಣಲಿಲ್ಲ ಅವನು ನಮಗಾಗಿ ಯಾವಪ್ರಯತ್ನ ವನ್ನಾ ದರೂ ಮಾಡುತ್ತಿರುವಂತೆಯೂ ತೋರಲಿಲ್ಲ ಸೀತೆ ಯನ್ನು ಕಾಣದೆ ದುಃಖಪೀಡಿತನಾದ ನನಗೆ ಈ ಮಳೆಗಾಲದ ನಾಲ್ಕು ತಿಂಗ ಳನ್ನು ಕಳೆಯುವುದೇ ನೂರಾರುವರ್ಷಗಳನ್ನು ಕಳೆದಷ್ಟು ಕಷ್ಟವಾಯಿತು ಅದನ್ನ ಹೇಗೋ ಕಳೆದುದಾಯಿತು ಚಕ್ರವಾಕಿಯು ತನ್ನ ಪತಿಯಾದ ಚ ಕ್ರವಾಕವನ್ನು ಎಡೆಬಿಡದೆ ಹಿಂಬಾಲಿಸುವಂತೆ, ಸೀತೆಯು ನನ್ನನ್ನು ಬಿಟ್ಟಿರ ಲಾರದೆ ಅರಣ್ಯಕ್ಕೂ ಹೊರಟುಬಂದಳು, ಅತಿಥೋರವಾದ ದಂಡಕಾರಣ್ಯಕ್ಕೆ ಬಂದಾಗಲೂ ನನ್ನ ಸಹವಾಸಸಂತೋಷದಿಂದ, ಸಮಸ್ತ ಕಷ್ಟಗಳನ್ನೂ ಸಹಿಸಿಕೊಂಡು ಉದ್ಯಾನಗಳಲ್ಲಿರುವಂತೆಯೇ ಸಂತೋಷದಿಂದಿದ್ದಳು ಎಲೆ ವತ್ರನೆ' ಆ ಪ್ರಿಯಪತ್ನಿಯನ್ನೇ ಕಳೆದುಕೊಂಡುದಲ್ಲದೆ, ಇನ್ನೂ ಎಷ್ಟೋ