ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬೦.] ಕಿಂಧಾಕಾಂಡವ, " ೧೫೨೩. ಕಷ್ಟಗಳಿಗೂ ಈಡಾದೆನು ರಾಜ್ಯಭ್ರಷ್ಟನಾಗಿ ಬಂದು ಕಾಡುಕಾಡಾಗಿ ಯೂ ತಿರುಗುತ್ತಿರುವೆನು ಈ ಸ್ಥಿತಿಯನ್ನು ನೋಡಿಯೂ ಸುಗ್ರೀವನಿಗೆ ನನ್ನ ... ಮರುಕವಿಲ್ಲದಿರುವುದನ್ನು ನೋಡಿದೆಯಾ? ಲಕ್ಷ ಣಾ' ಈಗ ನನಗೊಂ ದು ತೋರಿರುವುದು ನಾನು ಗಾಜಭ್ರಷ್ಟನಾಗಿ ದಿಕ್ಕಿಲ್ಲದೆ ಅಲೆಯುತ್ತಿರು ವುದನ್ನೂ, ರಾವಣನಿಂದ ಭಂಗಹೊಂದಿದುದನ್ನೂ, ಮನೆ ಮರಗಳನ್ನೂ ಹೆಂಡತಿಯನ್ನೂ ಕಳೆದುಕೊಂಡು ಇಷ್ಟು ದೂರದೇಶಕ್ಕೆ ಹೊರಟುಬಂದಿರು ವುದನ್ನೂ ನೋಡಿ, ದುರಾತ್ಮನಾದ ಸುಗ್ರೀವನು ನನ್ನನ್ನು ಕೇವಲತುಚ್ಚಿ ಭಾವದಿಂದ ಕಾಣುವಂತಿದೆ ಇದರಮೇಲೆ ನಾನು ದೈನ್ಯದಿಂದ ಆತನಲ್ಲಿಗೆ ಹೋಗಿ 'ನೀನೇ ಗತಿ”ಯೆಂದು ಮರೆಬಿದ್ದುದನ್ನೂ ನೋಡಿ ಆತನಿಗೆ ನನ್ನಲ್ಲಿ ಇನ್ನೂ ಅಲಕ್ಷವುಂಟಾಯಿತು ಈ ಕಾರಣಗಳಿಂದಲೇ ಅವನು ನನ್ನ ನ್ನು ಉದಾಸೀನಮಾಡಿ ತಿರಸ್ಕರಿಸುವನಲ್ಲದೆ ಬೇರೆಯಲ್ಲಿ ಸುಗ್ರೀವನು ಅವನಿಗೆ ಪಟ್ಟವಾಗುವುದಕ್ಕೆ ಮೊದಲು, ಸೀತೆಯನ್ನು ಹುಡುಕುವವಿಷಯದ ಲ್ಲಿ ನನಗೆ ಕಾಲನಿರ್ಣಯವನ್ನು ಮಾಡಿಕೊಟ್ಟು, ಆವಿಷಯದಲ್ಲಿ ದೃಢಪ್ರತಿಜ್ಞೆ ಯನ್ನೂ ಮಾಡಿದ್ದನು ಆದರೇನು? ಈಗ ತನ್ನ ಕೆಲಸವಾದಮೇಲೆ ನಮ್ಮ ನ್ನು ಉಪೇಕ್ಷಿಸುತ್ತಿರುವನು ಸ್ವಕಾಠ್ಯಧುರಂಧರನಾದ ಆ ದುರಾತ್ಮನು, ತಾನು ಮೊದಲು ಮಾಡಿಕೊಟ್ಟ ಪ್ರತಿಜ್ಞೆಯನ್ನೂ, ನನ್ನನ್ನೂ ಮರೆತು ಬಿ ಟೈರುವನು ವ ಅಕ್ಷಣಾ' ಈಗಲೂ ನೀನು ಕಿಷಿಂಧೆಗೆ ಹೋಗಿ ಕೇವ ಲಗ್ರಾಮ್ಯಸುಖದಲ್ಲಿ ಮುಳುಗಿ ಮೈಮರೆತಿರುವ ಮೂರ್ಖನಾದ ಆ ಸು ಗ್ರೀವನಿಗೆ ನನ್ನ ಮಾತಿನಿಂದ ಹೀಗೆಂದು ತಿಳಿಸು'ಕಾಲ್ಯಾರ್ಥಿಯಾಗಿ ಬಂದು ತನ್ನಲ್ಲಿ ಮರೆಹೊಕ್ಕು, ಮೊದಲು ತನಗೆ ಉಪಕಾರವನ್ನೂ ಮಾಡಿರುವವ ನಿಗೆ, ಯಾವನು ಮಾತುಕೊಟ್ಟು, ಆಮೇಲೆ ಆಶಾಭಂಗವನ್ನು ಮಾಡು ವನೋ, ಅವನೇ ಲೋಕದಲ್ಲಿ ಪುರುಷಾಧಮನೆನಿಸುವನು ಯಾವನು ಒಳ್ಳೆ ದಾಗಲಿ, ಕೆಟ್ಟುದಾಗಲಿ, ಆಡಿದ ಮಾತನ್ನು ತಪ್ಪದೆ ನಡೆಸುವನೋ ಅಂತಹ ವೀರನೇ ಪುರುಷೋತ್ತಮನೆನಿಸುವನು ಯಾರು ಮತ್ತೊಬ್ಬರಿಂದ ಉಪಕಾ ರವನ್ನು ಪಡೆದು, ತಮ್ಮ ಕಾವ್ಯವು ಕೈಗೂಡಿದಮೇಲೆ ಆ ಉಪಕಾರಿಗಳ ಕೊ ರಿಕೆಯನ್ನು ಈಡೇರಿಸದೆ, ಉದಾಸೀನರಾಗಿದ್ದು ಬಿಡುವರೋ, ಅಂತವರು