ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨೪ ಶ್ರೀಮದ್ರಾಮಾಯಣವು [ಸರ್ಗ ೩೦ ಸತ್ತಮೇಲೆಕೃತಷ್ಟು ರಾದ ಅವರ ದೇಹವನ್ನು ಮಾಂಸಭಕ್ಷಕಗಳಾದ ನಾಯಿನರಿಗಳೂ ತಿನ್ನಲಾರವು” ಎಂದುತಿಳಿಸು' ಎಲೆವನೆ' ಇನ್ನೆಷ್ಟು, ಹೇಳಿ ದರೇನು?ಮುಖ್ಯವಾಗಿ ಆ ಸುಗ್ರೀವನಿಗೆ ಈಗ ನಾನು ರಣರಂಗದಲ್ಲಿ ನಿಂತು, ಚಿನ್ನದ ಕಟ್ಟುಗಳುಳ್ಳ ಈ ನನ್ನ ಬಿಲ್ಲನ್ನು ಆ ಕರ್ಣಾ೦ತವಾಗಿ ಎಳೆಯುವಾಗ, ಮಿಂಚಿನಂತೆ ಜಾಜ್ವಲ್ಯಮಾನವಾದ ಅದರ ಸ್ವರೂಪವನ್ನು ನೋಡಬೇಕೆಂಬ ಆಸೆಯಿರುವಂತಿದೆ' ನಾನು ಯುದ್ಧರಂಗದಲ್ಲಿ ನಿಂತು ನನ್ನ ಧನುಸ್ಸಿನ ನಾಣ ನ್ನು ಕೋಪದಿಂದ ಮಿಡಿಯುವಾಗ, ಅದರಿಂದ ಸಿಡಿಲಿಗೆ ಸಮಾನವಾಗಿಹೊರ ಡುವ ಧ್ವನಿಯನ್ನು ಪುನಃ ಕೇಳಬೇಕೆಂಬ ಕುತೂಹಲವೂ ಅವನಿಗೆ ಹುಟ್ಟಿರು ವಂತಿದೆ ಸಾಲವೃಕಛೇದನದಿಂದಲೂ, ವಾಲಿವಧದಿಂದಲೂ ನನ್ನ ಪರಾಕ್ರ ಮವನ್ನು ಆ ಸುಗ್ರೀವನು ಚೆನ್ನಾಗಿ ಬಲ್ಲನು ಇದರಮೇಲೆ ಮಹಾವೀರನಾದ ನೀನು ನನಗೆ ಬೆಂಬಲವಾಗಿರುವುದನ್ನೂ ಬಲ್ಲನು ಆದರೂ ನಮ್ಮ ವಿಷಯವಾಗಿ ಸ್ವಲ್ಪವೂ ವಿಚಾರವಿಲ್ಲದಿರುವನಲ್ಲಾ' ಮೊದಲು ತನ್ನ ಕಾರವನ್ನು ಕೈಗೂಡಿ ಸಿಕೊಂಡ ಸುಗ್ರೀವನು' ನಾನು ಅವನೊಡನೆ ಸಖ್ಯವನ್ನು ಮಾಡಿದುದಕ್ಕೂ ವಾಲಿಯನ್ನು ಕೊಂದುದಕ್ಕೂ ಮುಖ್ಯವಾದ ಉದ್ದೇಶವೇನೆಂಬುದನ್ನು ಈಗ ಮರೆತು ಬಿಟ್ಟಂತಿದೆ ಮಳೆಗಾಲವು ಮುಗಿದೊಡನೆಯೇ ಬರುವುದಾಗಿ ಅವನು ನನಗೆ ಪ್ರತಿಜ್ಞೆ ಮಾಡಿಕೊಟ್ಟಿದ್ದರೂ, ಈಗ ಕಾಮೋಪಭೋಗಗಳಲ್ಲಿ ಮು ಭುಗಿ ಮೈಮರೆತಿರುವುದರಿಂದ, ಆ ನಾಲ್ಕು ತಿಂಗಳುಗಳ ಆಗಲೇ ಕಳೆದು ಹೋದುದನ್ನೂ ಕಾಣದಿರುವನಲ್ಲಾ' ಮೊದಲೇ ಕಪಿಯಾದ ಆ ಸುಗ್ರೀವನು ತನ್ನ ನಂಟರಿಷ್ಠರೊಡನೆ ಸೇರಿಕೊಂಡು, ಎಡೆಬಿಡದೆ ಮದ್ಯವನ್ನು ಕುಡಿಯು ತ್ಯ ಅದರಿಂದ ತನ್ನ ಮೈಯನ್ನೇ ತಾನು ಮರೆತುಹೋಗಿರುವಾಗ ಅವನಿಗೆ ನ ಮಸ್ಮರಣೆಯಲ್ಲಿ ಬರುವುದು ನಮ್ಮ ಕಷ್ಟವನ್ನು ಅವನೇನುಬಲ್ಲನು ? ಎಲೆ ವನೆ' ನೀನು ಬಲಾಡ್ಯನಾದುದರಿಂದ ಯಾವುದಕ್ಕೂ ಅಂಜುವವನಲ್ಲ ಈ ಗಲೇ ಕಿಕ್ಕಿಂಧೆಗೆ ಹೋಗು ಸುಗ್ರೀವನಿಗೆ ನನ್ನ ಕೋಪವನ್ನು ಧೈಯ್ಯವಾಗಿ ತಿಳಿಸ ಅವನೊಡನೆ ನೀನು ಹೇಳಬೇಕಾದ ಮತ್ತೊಂದು ಮುಖ್ಯ ವಿಷಯ ವುಂಟು!ನನ್ನ ಮಾತಿನಿಂದ ಅದನ್ನೂ ಅವನಿಗೆ ಸ್ಪಷ್ಟವಾಗಿ ತಿಳಿಸಿಬಿಡು'ಏನೆಂ ದರೋಎಲೆ ಸುಗ್ರೀವನೆ! ನಾವು ವಾಲಿಯನ್ನು ಕಳುಹಿಸಿದ ದಾರಿಯು ಇನ್ನೂ