ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೧] ಕಿಷಿಂಧಾಕಾಂಡವು ೧೫೨೫ ಮಾಸಿಹೋಗಿಲ್ಲ ನಿನಗೂ ಅದೇ ದಾರಿಯು ಸಿದ್ಧವಾಗಿರುವುದು ಆದುದರಿಂದ ನೀನು ಆಡಿದ ಮಾತಿಗೆ ತಪ್ಪಿ ಆ ವಾಲಿಯ ದಾರಿಯನ್ನು ಹಿಂಬಾಲಿಸಿ ಹೋಗ ಬೇಡ'ನಾನು ಮೊದಲು ವಾಲಿಯೊಬ್ಬನನ್ನೇ ಕೊಂದೆನು ಆಡಿದಮಾತಿಗೆ ತ ಪ್ಪಿದ ನಿನ್ನ ನ್ನಾದರೋ,ಬಂಧುಮಿತ್ರಪರಿವಾರಗಳೊಡನೆ ಸೇರಿಸಿ, ಆವಾಲಿಯ ಹಿಂದೆ ಕಳುಹಿಸಿಬಿಡುವೆನು!” ಎಂದುತಿಳಿಸು ಈಗಿನ ಕಾರಸ್ಥಿತಿಯಂತೂ ಹೀ ಗಿರುವುದು ಇದಕ್ಕನುಸಾರವಾಗಿ ಏನೇನು ಹೇಳಬೇಕೋ ಅದೆಲ್ಲವನ್ನೂ ಅವನಿ ಗೆ ಚೆನ್ನಾಗಿ ವಿವರಿಸಿ ತಿಳಿಸು ಮುಖ್ಯವಾಗಿ ಕಾಲವು ಮೀರಿ ಹೋಗಬಾರದು ನೀನು ತಡೆಮಾಡದೆ ಬೇಗನೆ ಹೋಗು ! ನೀನು ಹೋಗಿ ಸುಗ್ರೀವನೊಡನೆ “ಎಲೈ ಕಪೀಂದ್ರನೆ' ನೀನು ನಮಗೆ ಮಾಡಿಕೊಟ್ಟ ಪ್ರತಿಜ್ಞೆಯನ್ನ ನುಸರಿಸಿ, ನಡೆಯುವುದೇ ಅಕ್ಷಯವಾದ ಫರವೆಂದು ತಿಳಿದು, ಅದನ್ನು ತಪ್ಪದೆ ನೆಡೆಸಿಬಿ ಡು' ಹಾಗಿಲ್ಲದಿದ್ದರೆ ನೀನು ಆಧರಕ್ಕೊಳಗಾಗುವೆಯಲ್ಲದೆ,ನನ್ನ ಬಾಣಗಳಿಂದ ಹತನಾಗಿ ಯಮಲೋಕದಲ್ಲಿ ವಾಲಿಯೊಡನೆ ಸೇರಬೇಕಾಗುವುದು ಅಂತಹ ಗತಿಯನ್ನು ತಂದುಕೊಳ್ಳಬೇಡ' ಎಂದು ಹೇಳು”ಎಂದನು ಹೀಗೆ ರಾಮನು ಮೇಲೆಮೇಲೆ ಉಕ್ಕಿಬರುತ್ತಿರುವ ಕೋಪದಿಂದಲೂ, ದೈನ್ಯದಿಂದಲೂ ವಿಲಪಿ ಸುವುದನ್ನು ನೋಡಿ, ಉಗ್ರತೇಜಸ್ಸುಳ್ಳ ಲಕ್ಷಣಸಿಗೂ ಸುಗ್ರೀವನ ವಿಷಯ ದಲ್ಲಿ ವಿಶೇಷವಾದ ಕ್ರೋಧವುಂಟಾಯಿತು ಇಲ್ಲಿಗೆ ಮೂವತ್ತನೆಯಸರ್ಗವು ( ಲಕ್ಷ್ಮಣನು ಕೋಪಗೊಂಡು 'ಬರುವುದನ್ನು ಕಂಡು ಅಂಗದನು ಸುಗ್ರೀವನಲ್ಲಿ ತಿಳಿಸಿದುದು " ಹೀಗೆ*ಸೀತೆಯನ್ನು ಕಾಣದ ಸಂಕಂಟವೂಂದು, ಶರತ್ಕಾಲದ ಸೊಗ ಸನ್ನು ನೋಡಿ ಹೆಚ್ಚಿದ ಕಾಮವಿಕಾರವೊಂದು, ಸುಗ್ರೀವನಮೇಲೆ ಆಗ್ರಹ ವೊಂದು, ಈ ನಾನಾವಿಧದಿಂದ ರಾಜೇಂದ್ರಪ್ರತ್ರನಾದ ರಾಮನ ಮನಸ್ಸು

  • ಇಲ್ಲಿ ನರೇಂದ್ರಸೂನುರ್ವತದೇವಪತ್ರ” ಎಂದು ಮೂಲವು ಇದರಲ್ಲಿರು ವ “ದೇ” ಎಂಬ ವರ್ಣವು ಗಾಯಿತ್ರಿಯ ಹನ್ನೊಂದನೆಯ ವರ್ಷವಾದುದರಿಂದ,ಇದು ವರೆಗೆ ರಾಮಾಯಣದಲ್ಲಿ ಹತ್ತು ಸಹಸ್ರಗ್ರಂಥಗಳು ಮುಗಿದು, ಈ ಶ್ಲೋಕದಿಂದ ಹ ನ್ನೊಂದನೆಯಸಹಸ್ರವು ಆರಂಭಿಸುವುದೆಂದು ಗ್ರಾಹ್ಯವು