ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨೬ ಶ್ರೀಮದ್ರಾಮಾಯಣವು (ಸರ್ಗ, ೩೧ ಕಳವಳಹೊಂದಿತು, ಅದರಿಂದ ಅತಿದೀನನಾಗಿ ಕೊರಗುತ್ತಿರುವುದನ್ನು ನೋ ಡಿ, ಅವನ ತಮ್ಮನಾದ ಲಕ್ಷಣನು ಮರುಕಗೊಂಡು, ಅಣ್ಣನನ್ನು ಕುರಿತು « ಅಣ್ಣಾ'ನನಗೂ ನೀನು ಹೇಳಿದಂತೆಯೇ ತೋರಿರುವುದು ಆ ಕಪಿಯು ಸಾಧು ಜನಗಳ ನಡತೆಯಲ್ಲಿರುವಂತೆ ತೋರಲಿಲ್ಲ ಮಾತಿಗೆ ತಪ್ಪಿದ ಪಾಪಕ್ಕೆ ಫಲವೇ ನೆಂಬುದನ್ನೂ ಅವನು ತಿಳಿಯಲಿಲ್ಲ ಮುಖ್ಯವಾಗಿ ಅವನು ಇನ್ನು ಮುಂದೆ ವಾನ ರರಾಜ್ಯವನ್ನನುಭವಿಸಲಾರನು ಅದಕ್ಕಾಗಿಯೇ ಅವನಿಗೆ ಸರಿಯಾದ ಬುದ್ಧಿ ಯು ಹುಟ್ಟಲಿಲ್ಲ ಅವನು ಕೇವಲಬುದ್ದಿಹೀನನಾದುದರಿಂದಲೇ ಗ್ರಾಮ್ಯ ಸುಖದಲ್ಲಿ ಮುಳುಗಿಹೋಗಿರುವನು ನೀನು ಅವನಲ್ಲಿ ತೋರಿಸಿದ ಪರಮಾ ನುಗ್ರಹಕ್ಕೆ ತಕ್ಕ ಪ್ರತ್ಯುಪಕಾರವನ್ನು ಮಾಡಬೇಕೆಂಬ ಬುದ್ಧಿಯೂ ಆತನಿಗೆ ಹುಟ್ಟಲಿಲ್ಲ ಅಣ್ಣಾ' ಆದರೇನು? ಅವನೂ ನಮ್ಮಿಂದ ಹತನಾಗಿ ತನ್ನಣ್ಣ ನಾದ ವಾಲಿಯ ಬಳಿಗೇ ಹೋಗಿ ಸೇರಲಿ' ಹೀಗೆ ದುರ್ಗುಣವುಳ್ಳವನಿಗೆ ರಾ ಜ್ಯವನ್ನು ಕೊಡುವುದೇ ಉಚಿತವಲ್ಲ ಅಣ್ಣಾ' ನಿನ್ನ ಕೋಪವೂ ಹಾಗಿರಲಿ! ಈಗ ನನಗಂತೂ ತಡೆಯಲಾರದ ಕೋಪವು ಉಕ್ಕಿಬರುತ್ತಿರುವುದು ಸು ೪ಾಡಿದ ಆ ಸುಗ್ರೀವನನ್ನು ಈ ಕ್ಷಣವೇ ಕೊಂದುಬರುವೆನು ಅವನನ್ನು ಕೊಂದುಬಿಟ್ಟಮಾತ್ರಕ್ಕೆ ನಮ್ಮ ಕೆಲಸವು ಕೆಡುವುದೆಂದೆಣಿಸಬೇಡ 1 ವಾಲಿ ಪತ್ರನಾದ ಅಂಗದನಿಗೆ ಪಟ್ಟವನ್ನು ಕಟ್ಟಿಬಿಟ್ಟರೆ, ಅವನೇ ಕಪಿವೀರರೂಡ ನೆ ಸೇರಿ ಸೀತೆಯನ್ನು ಹುಡುಕುವನು” ಎಂದು ಹೇಳಿ, ಆಗಲೇ ಧನುಸ್ಸನ್ನು ಕೈಗೆತ್ತಿಕೊಂಡು ಪ್ರಚಂಡಕೋಪದಿಂದ ಮೇಲಕ್ಕೆದ್ದನು ಇದನ್ನು ನೋಡಿ ದೂರದೃಷ್ಟಿಯುಳ್ಳ ರಾಮನು, ಆ ಲಕ್ಷಣವನ್ನು ಕುರಿತು, ಅನುನಯಪೂರ ಕವಾಗಿ, (ಎಲೆ ವತ್ರನೆ' ಇಷ್ಟು ಕೋಪವೇಕೆ ? ಲೋಕದಲ್ಲಿ ನಿನ್ನಂತಹ ಗುಣಾಢನು ಮಿತ್ರವಧರೂಪವಾದ ಪಾಪಕಾರಕ್ಕೆ ಪ್ರವರ್ತಿಸಬಾ ರದು ಒಂದುವೇಳೆ ಆಕಸ್ಮಿಕವಾಗಿ ಅಂತಹ ಕೋಪವುಂಟಾದರೂ, ಆ ಕೋಪವನ್ನು ಯಾವನು ವಿವೇಕದಿಂದ ಅಡಗಿಸಿಕೊಳ್ಳುವನೋ ಅಂತಹ ವೀರನೇ ಪುರುಷರಲ್ಲಿ ಮೇಲೆನಿಸಿಕೊಳ್ಳುವನು ಸಾಧುವೃತ್ತವುಳ್ಳ ನೀನೇ ಹೀಗೆ ಮಿತ್ರವಥವೆಂಬ ಪಾಪಕೃತ್ಯವನ್ನು ಚಿಂತಿಸಬಾರದು ಸುಗ್ರೀವನಲ್ಲಿ ಮೊದಲಿದ್ದ ಪ್ರೀತಿಯನ್ನೇ ನೀನು ಅನುವರ್ತಿಸುತ್ತಿರು ಮೊದಲು ನಮಗೂ