೧೫೨೭ ಸರ್ಗ ೩೧ } ಕಿಷಿಂಧಾಕಾಂಡವು ಅವನಿಗೂ ನಡೆದ ಸ್ನೇಹವೃತ್ತಾಂತವನ್ನೂ ಚೆನ್ನಾಗಿ ಮನಸ್ಸಿನಲ್ಲಿಟ್ಟಿ ರು ಸುಗ್ರೀವನು ನಮಗೆ ನಿರ್ಣಯಿಸಿದ ಕಾಲಕ್ಕೆ ಸರಿಯಾಗಿ ಬಾರದೆ ಹೋದನೆಂಬುದೊಂದುಮಾತ್ರವೇ ಅವನ ತಪ್ಪೇಹೊರತು, ಬೇರೊಂದು ವಿಧದಿಂದಲೂ ಅವನು ನಮಗೆ ಅಪರಾಧಿಯಲ್ಲಿ ಇಷ್ಟು ಮಾತ್ರಕ್ಕೆ ನೀನು ಆ ವನನ್ನು ಕೊಂದುಬಿಡುವುದಾಗಿ ಹೇಳಬಾರದು ಮೊದಲು ನೀನು ಅವನೊ ಡನೆ ಪರುಷವಾಕ್ಯಗಳನ್ನಾದರೂ ಆಡಬಾರದು ಒಳ್ಳೆ ಮಾತುಗಳಿಂದಲೇ ಅವನಿಗೆ ನಾನು ಹೇಳಿದ ಬುದ್ದಿವಾದಗಳನ್ನು ಹೇಳು ” ಎಂದನು ಹೀಗೆ ರಾ ಮನು ಧರಾತಿಕ್ರಮವಿಲ್ಲದಂತೆ ನಡೆಸಬೇಕಾದ ಕಾಠ್ಯವನ್ನು ನಿಯಮಿಸ ಲು, ಲಕ್ಷಣನು ಆಗಲೇ ಅಣ್ಣನಾಜ್ಞೆಯಂತೆ ಕಿಷಿಂಧೆಯಕಡೆಗೆ ಹೊರ ಟನು ಲಕ್ಷಣನು ಬಹಳ ಸುಸ್ವಭಾವವುಳ್ಳವನಾಗಿ, ಯುಕ್ತಾಯುಕ್ಕಗಳೆ | ಲ್ಲವನ್ನೂ ಚೆನ್ನಾಗಿ ಬಲ್ಲವನಾಗಿದ್ದರೂ, ಯಾವಾಗಲೂ ತನ್ನಣ್ಣನಾದ ರಾಮನ ಕ್ಷೇಮಚಿಂತೆಯಲ್ಲಿಯೇ ಅತ್ಯಾಸಕ್ತನಾದುದರಿಂದ, ರಾಮ ನ ದೈನ್ಯವನ್ನು ನೋಡಿದಾಗ ಆತನಿಗುಂಟಾದ ಕೋಪವು ಚೆನ್ನಾಗಿ ಶಾಂತ ವಾಗಲೇ ಇಲ್ಲ ಆದರೆ ಸುಗ್ರೀವನನ್ನು ಕೊಂದುಬಿಡಬೇಕೆಂಬ ಉದ್ದೇಶ ವುಮಾತ್ರ ತಗ್ಗಿ ಹೋಯಿತು ಆ ಕೋಪವನ್ನು ಪ್ರಯತ್ನದಿಂದ ತನ್ನಲ್ಲಿ ಯೇ ಆಡಗಿಸಿಕೊಂಡು, ಸುಗ್ರೀವನ ನಿವಾಸಕ್ಕೆ ಬಂದನು ಇಂದ್ರಧನುಸ್ಸಿ ನಂತೆಯೂ, ಬೆಟ್ಟದ ಶಿಖರದಂತೆಯೂ ಮಹತ್ತಾದ ಧನುಸ್ಸನ್ನು ಕೈಯಲ್ಲಿ ಹಿಡಿದು, ಕಾಲಾಂತಕನಂತೆ ಕೋಪಗೊಂಡು ಬರುತಿದ್ದ ಆ ಲಕ್ಷಣನು, ತ ಸ್ಪಲಿನಿಂದ ಕೂಡಿದ ಮಂದರಪರೈತದಂತೆ ಕಾಣುತಿದ್ದನು ರಾಮಾಜ್ಞೆ ಯನ್ನು ಸ್ವಲ್ಪವೂ ಮೀರದೆ ನಡೆಯತಕ್ಕವನಾದ ಆಲಕ್ಷಣನು,ಬುದ್ದಿಯಲ್ಲಿ ಬೃಹಸ್ಪತಿಗೆ ಸಮಾನನಾದುದರಿಂದ, ತಾನು ಸುಗ್ರೀವನೊಡನೆ ಹೇಳಬೇ ಕಾದ ಮಾತಿನ ಕ್ರಮವನ್ನೂ, ಅದಕ್ಕೆ ಸುಗ್ರೀವನು ಹೇಳಬಹುದಾದ ಪ್ರತ್ಯುತ್ತರವೇನೆಂಬುದನ್ನೂ, ಅದಕ್ಕೆ ತಾನು ಪುನಃ ಹೇಳಬೇಕಾದ ಉತ್ತ ರಗಳನ್ನೂ ಮನಸ್ಸಿನಲ್ಲಿಯೇ ಆಲೋಚಿಸುತ್ತ ಬಂದನು ಸೀತಾವಿಷಯಕ ವಾದ ಕಾಮದಿಂದಲೂ, ಸುಗ್ರೀವನ ಮೇಲಿನ ಕೋಪದಿಂದಲೂ, ರಾಮ ನಿಗುಂಟಾಗಿದ್ದ ಮನಃಕಾಲುಷ್ಯವೆಂಬ ಬೆಂಕಿಯು, ಈ ಲಕ್ಷ್ಮಣನ ಮನಸ್ಸಿ
ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೬
ಗೋಚರ