ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨೮ ಶ್ರೀಮದ್ರಾಮಾಯಣವು (ಸರ್ಗ, ೩೧, ನಲ್ಲಿ ಕುಡಿಯುತಿತ್ತು ಅದನ್ನು ನೆನೆಸಿಕೊಂಡ ಹಾಗೆಲ್ಲಾ ಕೋಪಯುಕ್ತ ನಾಗಿ,ಅಗ್ನಿ ಸಹಿತವಾದ ವಾಯುವಿನಂತೆ ಅತಿವೇಗದಿಂದ ಕಿಕ್ಕಿಂಧೆಗೆ ಬಂದು ಸೇರಿದನು ಬರುವದಾರಿಯಲ್ಲಿ ಅಡ್ಡಲಾಗಿದ್ದ, ಸಾಲೆ, ತಾಳೆ, ಅಶ್ವಕರ್ಣಿ ಮೊದಲಾದ ಗಿಡಗಳನ್ನೂ, ಇನ್ನೂ ಬೇರೆಬೇರೆ ವೃಕ್ಷಗಳನ್ನೂ, ತನ್ನ ಕೈ ಯಿಂದಲೇ ಮುರಿದು ಕೆಡಹುತ್ತ, ಅಲ್ಲಲ್ಲಿದ್ದ ಬೆಟ್ಟದ ಶಿಖರಗಳನ್ನು ರುಳಿಸು ತ್ಯ, ತನ್ನ ಕಾಲುಗಳ ತುಳಿತದಿಂದಲೇ ಕಲ್ಲುಗಳನ್ನು ಪುಡಿಪುಡಿಯಾಗಿಸುತ್ತ, ವೇಗದಿಂದೋಡುವ ಆನೆಯಂತೆ ಕಾರ್ಯಾ ತುರದಿಂದ ದೂರದೂರಕ್ಕೆ ಹೆ ಜೈಯನ್ನಿಡುತ್ತ ಅತಿವೇಗದಿಂದ ಒಂದನು ಇಕ್ಷಾಕುಕುಲನಿಂಹನಾದ ಲಕ್ಷ ಇನು ಹೀಗೆ' ವೇಗದಿಂದ ಬಂದು, ಮುಂದೆ ಕಿಕ್ಕಿರಿಸಿದ ಪರತಗಳ ನಡುವೆ ಅನೇಕವಾನರಸೈನ್ಯದಿಂದ ರಕ್ಷಿತವಾಗಿ, ಇತರರಿಗೆ ದುರ್ಗಮವಾದ ವಾನರ ರಾಜಧಾನಿಯಾದ ಕಿಷಿಂಧೆಯನ್ನು ಕಂಡನು ಅದನ್ನು ನೋಡಿದಾಗ ಇವ ನಿಗೆ ಇನ್ನೂ ಕೋಪವು ಹೆಚ್ಚಿತು ಈ ಕೂಪದಿಂದ ನೆಲವನ್ನು ನಡುಗಿಸು ವಂತ ಹೆಜ್ಜೆಯಿಡುತ್ತ ಇನ್ನೂ ಮುಂದೆ ಬಂದಮೇಲೆ, ಆ ಪಟ್ಟಣದ ಹೊರ | ಗೆ ಸಂಚರಿಸುತಿದ್ದ ಭಯಂಕರಸ್ವರೂಪವುಳ್ಳ ಕಲವು ವಾನರರನ್ನು ಕಂಡ ನು ಆನೆಗಳಂತೆ ಕೊಬ್ಬಿದ ಮೈಯುಳ್ಳ ಆ ಕಪಿಗಳು, ಲಕ್ಷ್ಮಣನು ಬಂದುದ ನ್ನು ಕಂಡೊಡನೆ, ಯಾವನೋ ಶತ್ರುವು ತಮ್ಮ ಪಟ್ಟಣಕ್ಕೆ ಪ್ರವೇಶಿಸುವ ನೆಂದೆಣಿಸಿ,ಕೋಪದಿಂದ ಎಲ್ಲರೂ ಗುಂಪಾಗಿ ಸೇರಿದರು ಆಗಲೇ ಕಲವರು ಆ ಅಲ್ಲಿದ್ದ ದೊಡ್ಡ ಮರಗಳನ್ನು ಕಿತ್ತುಕೊಂಡರು ಲಕ್ಷ್ಮಣನನ್ನು ಹೊಡೆ ದೋಡಿಸುವುದಕ್ಕಾಗಿ ಕೆಲವರು ದೊಡ್ಡ ದೊಡ್ಡ ಬೆಟ್ಟದ ಶೆಖರಗಳನ್ನೇ ಕೈ ಗೆತ್ತಿಕೊಂಡು ನಿಂತರು ಹೀಗೆ ಜಗಳಕ್ಕೆ ಸಿದ್ಧರಾಗಿ, ಆಯುಧಗಳನ್ನು ಹಿಡಿದಿ ರುವ ಆಕಪಿಗಳನ್ನು ಕಂಡೊಡನೆ, ಲಕ್ಷ್ಮಣನ ಕೋಪವು ಇಮ್ಮಡಿಯಾಗಿ ಅಗ್ರಿ ಯಂತೆ ಜ್ವಲಿಸುತಿದ್ದನು ಆದರೆ ಪ್ರಳಯಕಾಲದ ಮೃತ್ಯುವಿನಂತೆ ಬರುತ್ತಿರುವ ಲಕ್ಷ್ಮಣನ ಕೋಪವನ್ನು ನೋಡಿದೊಡನೆ, ಆ ವಾನರರೆಲ್ಲರ ಆ ರ್ಭಟವೂ ಆಡಗಿಹೋಯಿತು ಅವರ ಮೈ ನಡುಗಲಾರಂಭಿಸಿತು ನಾಲ್ಕು ಕ ಡೆಗಳಿಗೂ ಚದರಿ ಓಡಿಹೋದರು ಆ ಕ್ಷಣವೇ ಕೆಲವರು ಸುಗ್ರೀವನ ಮನೆ ಗೆ ಬಂದು,ಲಕ್ಷಣನು ಕೋಪದಿಂದ ಕಿಷಿಂಧೆಗೆ ಬರುತ್ತಿರುವನೆಂಬುದನ್ನು