ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೧] ಕಿಂಧಾಕಾಂಡವು ೧೫೨೯ ತಿಳಿಸಿದರು ಆ ಕಾಲದಲ್ಲಿ ಸುಗ್ರೀವನಾದರೋ ಕಾಮಮೋಹಿತನಾಗಿ ತಾರೆ ಯೊಡನೆ ಏಕಾಂತದಲ್ಲಿ ಕ್ರಿಡಿಸುತ್ತ ಮಲಗಿದ್ದನು ಈವಾನರರು ಹೇಳಿದಮಾ ತುಗಳೊಂದೂ ಅವನ ಕಿವಿಗೇರಲಿಲ್ಲ ಆಗ ಅಲ್ಲಿದ್ದ ಮಂತ್ರಿಗಳು ಕೆಲವು ವಾ ನರವೀರರನ್ನು ಕರೆದು, ಆ ಸಂಗತಿಯೇನೆಂದು ವಿವರವಾಗಿತಿಳಿದುಬರುವುದಕ್ಕಾ ಗಿ ಕಳುಹಿಸಿದರು ಆಗಲೇ ಆ ಮಂತ್ರಿಗಳಾಜ್ಞೆಯಿಂದ ಬೆಟ್ಟಗಳಂತೆಯೂ, ಆನೆಗಳಂತೆಯೂ, ಮೇಫುಗಳಂತೆಯೂ, ಮಹತ್ತಾದ, ಮತ್ತು ಭಯಂಕರ ವಾದ ರೂಪವುಳ್ಳ ಕೆಲವು ಕಪಿವೀರರು, ಕಿಷಿಂಧೆಯಿಂದ ಹೊರಟುಬಂದ ರು ಅವರೆಲ್ಲರಿಗೂ ಅವರವರ ಉಗುರುಗಳು ಮತ್ತು ದಂತಗಳೇ ಆಯುಧಗ ಳಾಗಿದ್ದುವು ಅವರೆಲ್ಲರೂ ವಿಕಾರರೂಪವುಳ್ಳವರು ಎಲ್ಲರೂ ಹೆಬ್ಬುಲಿ ಗಳಂತೆ ಬಲದಿಂದ ಕೊಬ್ಬಿದವರಾಗಿದ್ದರು ಎಲ್ಲರ ಮುಖಗಳೂ ನೋಡು ವಾಗಲೇ ಭಯವನ್ನುಂಟುಮಾಡುವಂತೆ ವಿಕಾರದಿಂದಿದ್ದುವು ಅವರಲ್ಲಿ ಹ ತಾನೆಗಳ ಒಲವುಳ್ಳವರು ಕೆಲವರು ನೂರಾನೆಗಳ ಬಲವುಳ್ಳವರು ಕೆಲವರು ಸಾವಿರಾನೆಗಳ ಬಲವುಳ್ಳವರು ಕೆಲವರು ಹೀಗೆ ಮಹಾಬಲಾಡ್ಯರಾಗಿ, ಕೈ ಯಲ್ಲಿ ದೊಡ್ಡ ದೊಡ್ಡ ಮರಗಳನ್ನು ಹಿಡಿದು ಬರುತ್ತಿರುವ ಕಪಿವೀರರನ್ನು ನೋಡಿದೊಡನೆ, ಮೊದಲೇ ಕೋಪಗೊಂಡಿದ್ದ ಲಕ್ಷ್ಮಣನಿಗೆ ಮತ್ತಷ್ಟು ಕೋಪವು ಹೆಚಿ ತು ಇಂತಹ ವಿರರಾದ ಕಪಿಗಳು ಆ ಕಿಷಿಂಧೆಯ ಸುತ್ತ ಲೂ ತುಂಬಿರುವುದನ್ನು ನೋಡಿದನು ಪ್ರಚಂಡಪರಾಕ್ರಮವುಳ್ಳ ಆ ಕಪಿವೀರ ರರಲ್ಲರೂ ಕಿಷಿಂಧೆಯ ಕೋಟೆಯ ಬಾಗಿಲಿನ ಬಳಿಗೆ ಬಂದು, ಆ ಬಾಗಿಲಿಗೆ ಹಾಕಿದ್ದ ಅಗಳಿಯಕೆಳಗೆ ಲಕ್ಷಣನಿಗೆ ಕಾಣುವಂತೆ ನಿಂತಿದ್ದರು ಅತ್ತಲಾಗಿ ಸುಗ್ರೀವನು ತಮ್ಮಲ್ಲಿ ಅಲಕ್ಷದಿಂದಿರುವುದನ್ನೂ, ಇತ್ತಲಾ ಗಿ ರಾಮನು ದುಃಖದಿಂದ ಕೊರಗುವುದನ್ನೂ ನೆನೆಸಿಕೊಂಡು ಲಕ್ಷಣನಿಗೆ ಮೈಮರೆಯುವಷ್ಟು ಕೋಪವುಂಟಾಯಿತು ಒಂದಾವರ್ತಿ ಬಿಸಿಬಿಸಿಯಾಗಿ ನಿಟ್ಟುಸಿರನ್ನು ಬಿಟ್ಟನು ಅವನ ಕಣ್ಣುಗಳರಡೂ ಕೆಂಪಾದುವು ಹೊಗೆಯೊ ಡನೆ ಬುಸುಗುಟ್ಟುವ ಕಾಲಾಗ್ನಿ ಯಂತೆ ಕಾಣುತ್ತಿದ್ದನು ಬಾಣದ ಆಲಗುಗ ಳೆಂಬ ನಾಲಗೆಗಳಿಂದಲೂ, ಬಿಲ್ಲೆಂಬ ಉದ್ದವಾದ ಮೈಯಿಂದಲೂ, ವೀ ಗ್ಯವೆಂಬ ವಿಷದಿಂದಲೂ ಕೂಡಿದ ಐದುಹೊಡೆಗಳುಳ್ಳ ಮಹಾಸರ್ಪದಂತಿದ್ದ