ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫&೦ ಶ್ರೀಮದ್ರಾಮಾಯಣವು [ಸರ್ಗ ೩೧. ನು ಹಿಗೆ ಉರಿಯುವ ಕಾಲಾಗ್ನಿ ಯಂತೆಯೂಕೋಪಗೊಂಡ ಮಹಾಸರ್ಪ ದಂತೆಯೂ ರೌದ್ರಾವೇಶದಿಂದಿರುವ ಲಕ್ಷ್ಮಣನನ್ನು ಕಂಡೊಡನೆ, ಅಲ್ಲಿದ್ದ ಅಂಗದನಿಗೆ ಮಹತ್ತಾದ ಭಯವೂ ಚಿಂತೆಯೂ ಉಂಟಾಯಿತು ಇಷ್ಟರಲ್ಲಿ ಕೋಪದಿಂದ ಕೆಂಪೇರಿದ ಕಣ್ಣುಳ್ಳ ಮಹಾಯಶಸ್ವಿಯಾದ ಲಕ್ಷಣನು ಆ ಆಂಗದನನ್ನು ನೋಡಿ 'ಎಲೆ ವತ್ರನೆ' ನಾನು ಬಂದಿರುವವಿಷಯವನ್ನು ಈಗಲೇ ಹೋಗಿ ಸುಗ್ರೀವನಿಗೆ ತಿಳಿಸು' ಯಾವಶತ್ರುಗಳನ್ನಾದರೂ ಹುಟ್ಟಡಗಿಸತ ಕ್ಯ ಲಕ್ಷಣನು ನಿನ್ನನ್ನು ನೋಡುವುದಕ್ಕಾಗಿ ಬಂದು ಬಾಗಿಲಲ್ಲಿ ನಿಂತಿರುವ” ನೆಂದು ಹೇಳು' ಮತ್ತು ತನ್ನ ನಿಗುಂಟಾದ ವ್ಯಸನವನ್ನು ನೋಡಿ ತಡೆಯ ಲಾರದೆ ಲಕ್ಷಣನು ಬಾಗಿಲಲ್ಲಿ ಬಂದುನಿಂತಿರುವನು ಅವನ ಮಾತನ್ನು ಕೇ ಳುವುದಕ್ಕೆ ನಿನಗಿಷ್ಟವಿದ್ದ ಪಕ್ಷದಲ್ಲಿ ಈಗಲೇ ನೀನು ಅವನಲ್ಲಿಗೆ ಹೊರಡು ! ಇಲ್ಲವೇ ಅವನನ್ನೆ ಇಲ್ಲಿಗೆ ಕರಸು ನಿನಗೆ ಹೇಗೆ ಯುಕ್ತವೆಂದು ತೋರುವು ದೋ ಹಾಗೆ ನಡೆಸು” ಎಂದು ಹೇಳಿ ಬೇಗನೆ ಹಿಂತಿರುಗಿ ಬಾ” ಎಂ ದನು ಇದನ್ನು ಕೇಳಿ ಅಂಗದನು ಮನಸ್ಸಿನಲ್ಲಿ ಭಯದಿಂದ ತತ್ತಳಿಸುತ್ತ, ತ ವ್ಯ ಚಿಕ್ಕಪ್ಪನಾದ ಸುಗ್ರೀವನಬಳಿಗೆ ಬರುವಾಗಲೇ ( ಅದೋ ಲಕ್ಷಣನು ಬಂದು ನಿಂತಿರುವನು” ಎಂದು ಸಂಭ್ರಮದಿಂದ ಕೂಗಿಕೊಂಡು ಮುಂದೆ ಹೋದನು ಲಕ್ಷ್ಮಣನ ಮಾತನ್ನು ಕೇಳಿದಾಗಿನಿಂದ ಅವನ ಮನಸ್ಸು ಭಯದಿಂದ ತತ್ತಳಿಸುತಿತ್ತು ಅವನ ಮುಖವು ಕಳೆಗುಂದಿತು ಅತಿದೈನ್ಯದಿಂ ದ ಸುಗ್ರೀವನಬಳಿಗೆ ಬಂದು, ಮೊದಲು ಅವನ ಪಾದಗಳರಡನ್ನೂ ಹಿಡಿದು ನಮಸ್ಕಗಿಸಿದನು ಹೀಗೆ ತಂದೆಯ ಪಾದಗಳನ್ನು ಹಿಡಿದು ನಮಸ್ಕರಿಸಿದಮ ಲೆ ತನ್ನ ತಾಯಿಯಾದ ತಾರೆಯ ಪಾದಗಳಿಗೂ ನಮಸ್ಕರಿಸಿದನು ಆ ಮೇ ಲೆ ತನ್ನ ಚಿಕ್ಕತಾಯಿಯಾದ ರುಮೆಗೂ ಪಾದವಂದನವನ್ನು ಮಾಡಿ, ಲಕ್ಷ ಣನು ತನಗೆ ಹೇಳಿದ ವಾಕ್ಯಗಳನ್ನೇ ಹೇಳತೊಡಗಿದನು ಆದರೆ ನಿದ್ರೆಯಿಂದ ಲೂ, ಮದ್ಯಮದದಿಂದಲೂ ಮೈಮರೆತು ಮಲಗಿದ್ದ ಸುಗ್ರೀವನಿಗೆ,ಇದೊಂ ದೂ ತಿಳಿಯಲಿಲ್ಲ ಇಷ್ಟರಲ್ಲಿ ಅತ್ತಲಾಗಿ ಪರದ್ವಾರಕ್ಕೆ ಹೋಗಿದ್ದ ವಾನರ ರೆಲ್ಲರೂ ಲಕ್ಷ್ಮಣನ ಕೋಪವನ್ನು ಕಂಡು,ಭಯದಿಂದ ಮೈತಿಳಿಯದವರಾಗಿ, ದೈನ್ಯದಿಂದ ಲಕ್ಷಣನ ಮನ್ನಣೆಯನ್ನು ಬೇಡುತ್ತ,ದೊಡ್ಡಕಿಲಕಿಲಧ್ವನಿಯ