ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೧] ಕಿಷಿಂಧಾಕಾಂಡವು ೧೫೩೧ ನ್ನು ಮಾಡುತಿದ್ದರು ಮಹಾಪ್ರವಾಹವು ಬರುವಂತೆ ತಡೆಯಿಲ್ಲದೆ ಕಿಷಿಂ ಧೆಗೆ ಬಂದು, ಸಿಡಿಲಿನಂತೆ ಆರ್ಭಟಿಸುತ್ತ ಕೂರನಾಗಿರುವ ಆ ಲಕ್ಷಣವನ್ನು ನೋಡಿ ವಾನರರೆಲ್ಲರೂ ಒಟ್ಟಾಗಿ ಸೇರಿ,ಆ ಲಕ್ಷಣನ ಸಮೀಪದಲ್ಲಿ ನಿಂತು, ಒಬ್ಬರಿಗೊಬ್ಬರು ಸಿಡಿಲುಬಡಿದಂತೆ ಫುಟ್ಟಿಯಾಗಿ ಗದ್ದಲವನ್ನು ಮಾ ಡುತಿದ್ದರು ಈ ಮಹಾಧ್ವನಿಯುಸುಗ್ರೀವನ ಕಿವಿಗೆ ಬಿದ್ದಿತು ಆಗಲೇ ಅವನಿಗೆ ಎಚ್ಚರವಾಯಿತು ಮದ್ಯಮದದಿಂದ ಕೆಂಪೇರಿದ ಕಣ್ಣುಳ್ಳವನಾಗಿಯೂ, ಕೆದರಿದ ಪುಷ್ಪಾಭರಣಗಳುಳ್ಳವನಾಗಿಯೂ ಹಾಸಿಗೆಯಿಂದ ಎದ್ಧನು ಇಷ್ಟ, ರಲ್ಲಿ ಸುಗ್ರೀವನಿಗೆ ಹಿತರಾಗಿಯೂ, ಕಾಲೋಚಿತವಾದ ಮಂತ್ರಾಲೋಚನ ಶಕ್ತಿಯುಳ್ಳವರಾಗಿಯೂ, ಅಂತಃಪುರದೊಳಗೆ ಪ್ರವೇಶಿಸುವ ಸ್ವಾತಂತ್ರವು ಳ್ಳವರಾಗಿಯೂ ಇದ್ದ ಹೃಕ್ಷ ಪ್ರಭಾವರೆಂಬ ಮಂತ್ರಿಗಳಿಬ್ಬರು, ಅಂಗದನ ಮಾತನ್ನು ಕೇಳಿದೊಡನೆ ಅಂತಃಪುರದೊಳಗೆ ಪ್ರವೇಶಿಸಿದರು ಅಲ್ಲಿ ಸುಗ್ರೀ ವನನ್ನು ನೋಡಿ ('ಸ್ವಾಮಿ' ಲಕ್ಷಣನು ನಿಮ್ಮ ಧಾರಗಳ ವಿಷಯವಾಗಿ ಕೆಲವು ಮಾತುಗಳನ್ನಾಡಬೇಕಂದು ನಿಮ್ಮಲ್ಲಿಗೆ ಬಂದಿರುವನು” ಎಂದು ದೇವೇಂದ್ರನಂತೆ ಉತ್ತಮಾಸನದಲ್ಲಿ ಕುಳಿತಿದ್ದ ಸುಗ್ರೀವನನ್ನು, ಅವರಿಬ್ಬ ರೂ ಮೊದಲು ಹೀಗೆ ಸಾಮವಾಕ್ಯದಿಂದ ಪ್ರಸನ್ನ ನಾಗಿ ಮಾಡಿಕೊಂಡು, ಅವನ ಪಕ್ಕದಲ್ಲಿ ಕುಳಿತು ಎಲೈ ಕಪೀಂದ್ರನ' ರಾಮಲಕ್ಷ್ಮಣರಿಬ್ಬರೂ ಸತ್ಯ ಸಂಧರು'ಮಹಾತ್ಮರು ಆ ಒಡಹುಟ್ಟಿದವರಿಬ್ಬರೂ ತಾವಾಗಿಯೇ ಈ ನಮ್ಮ ರಾಜ್ಯವನ್ನು ವಶಪಡಿಸಿಕೊಂಡು ಪಾಲಿಸಬಲ್ಲವರಾಗಿದ್ದರೂ, ನಿನ್ನೊಡನೆ ಸ ಖ್ಯವನ್ನು ಮಾಡಿದುದಕ್ಕಾಗಿ ನಿನಗೆ ರಾಜ್ಯವನ್ನು ಕೊಟ್ಟಿರುವರು ಆಇಬ್ಬರಲ್ಲಿ ಲಕ್ಷ್ಮಣನೆಂಬವನು ಈಗ ಧನುರ್ಧಾರಿಯಾಗಿ ಬಾಗಿಲಲ್ಲಿ ನಿಂತಿರುವನು ಅವನ ನ್ನು ನೋಡಿ ನಮ್ಮ ವಾನರವೀರರೆಲ್ಲರೂ ಭಯದಿಂದ ನಡುಗುತ್ತಾ ಕೂಗಿಕೊ ಳ್ಳುತ್ತಿರುವನು ಆ ಲಕ್ಷಣನು ತಾನು ಏಕಾಗಿಯಾಗಿದ್ದರೂ, ಈ ನಮ್ಮ ಗುಹೆಯು ಎಂತವರಿಗೂ ದುರ್ಗಮವಾಗಿದ್ದರೂ, ರಾಮಾಜ್ಞೆಯ ಬಲದಿಂದ ಅದನ್ನೇ ಸಾರಥಿಯನ್ನಾಗಿಯೂ ತನ್ನ ಮನೋರಥವನ್ನೇ ರಥವ ಸ್ನಾಗಿಯೂ ಮಾಡಿಕೊಂಡು ಬಂದು, ಅಂಗದನನ್ನು ನಿನ್ನಲ್ಲಿಗೆ ಕಳು ಹಿಸಿರುವನು ವೀರಶಾಲಿಯಾದ ಆ ಲಕ್ಷಣನ ಕಣ್ಣುಗಳಲ್ಲಿ ಕೋಪವು.