ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೩೬ ಶ್ರೀಮದ್ರಾಮಾಯಣವು (ಸರ್ಗ ೩೩ ಕೈಮುಗಿದು ನಿಂತರು ಕೋಪದಿಂದ ನಿಟ್ಟುಸಿರನ್ನು ಬಿಡುತ್ತ ಮುಂದೆಬರು ತಿರುವ ದಶರಥಪುತ್ರನಾದ ಆ ಲಕ್ಷಣನನ್ನು ಕಂಡೊಡನೆ ಅವರಿಗೆ ಮ ಹಾಭಯವೂ ಹುಟ್ಟಿತು ಯಾರೂ ಅವನ ಸಮೀಪಕ್ಕೆ ಬರಲಾರದೆ ಹಿಂದಾ ಗಿಯೇ ಇದ್ದರು ಲಕ್ಷ ಣನು ಮುಂದೆಹೋಗಿ ಆ ಗುಹೆಯನ್ನು ಸುತ್ತಲೂ ಕಣ್ಣಿಟ್ಟು ನೋಡಿದನು ಆ ಪ್ರದೇಶವೆಲ್ಲವೂ ಕೇವಲರತ್ನ ಮಯವಾದಂತೆ ಯೇ ಕಾಣುತಿತ್ತು ಅಲ್ಲಿನ ತೋಟಗಳೆಲ್ಲವೂ ಪುಷ್ಪಭರಿತಗಳಾಗಿ ದೇ ವಯೋಗ್ಯವಾದ ಪ್ರದೇಶದಂತೆ ಕಾಣುತಿತ್ತು ಎಲ್ಲೆಲ್ಲಿಯೂ ರತ್ನ ರಾಶಿ ಗಳನ್ನೆ ರಚಿದಂತೆ ಅತಿರಮ್ಯವಾಗಿದ್ದಿತು ಅದರಲ್ಲಿ ಉಪ್ಪರಿಗೆಗಳೂ, ದೇವಾಲ ಯಗಳೂ ಹೇರಳವಾಗಿದ್ದುವು ಬಗೆಬಗೆಯ ಅಂಗಡಿಗಳೂ ಶೋಭಿಸುತ್ತಿದ್ದು ವು ಬೇಕಾದ ಹಣ್ಣುಗಳಿಂದಲೂ, ಪಷ್ಟಗಳಿಂದಲೂ ತುಂಬಿದ ವೃಕ್ಷಗಳು ಕಂಗೊಳಿಸುತ್ತಿದ್ದುವು ದೇವಗಂಧಶ್ವರ ಅಂಶಗಳಿಂದ ಜನಿಸಿದವರಾಗಿಯೂ, ಕಾಮರೂಪಿಗಳಾಗಿಯೂ, ದಿವ್ಯಮಾಲಿಕೆಗಳನ್ನೂ, ದಿವ್ಯವಸ್ಯಗಳನ್ನೂ ಧ ರಿಸಿದವರಾಗಿಯೂ, ಪ್ರಿಯದರ್ಶನ ವುಳ್ಳವರಾಗಿಯೂ ಇದ್ದ ಅನೇಕವಾನರ ರು ತುಂಬಿದ್ದರು ಅಗರು ಚಂದನ ಪದ್ಯಗಳೆಂಬ ಬಗೆಬಗೆಯ ಸುಗಂಧವುಳ್ಳ ಲೇಪನದ್ರವಗಳಿಂದಲೂ, ಬಗೆಬಗೆಯ ಮದ್ಯಗಳಿಂದಲೂ, ಅಲ್ಲಿನ ರಾಜವೀಥಿ ಗಳೆಲ್ಲವೂ ಸುವಾಸಿತಗಳಾಗಿ ಫುಮಫುಮಿಸುತ್ತಿದ್ದುವು ಸ್ವಚ್ಛವಾದ ನೀ ರುಳ್ಳ ಗಿರಿನದಿಗಳು ಅಲ್ಲಲ್ಲಿ ಪ್ರವಹಿಸುತ್ತಿದ್ದುವು ಈ ಶೋಭಾಶಯಗಳೆಲ್ಲವ ನ್ನೂ ನೋಡುತ್ತ ಲಕ್ಷ್ಮಣನು, ಆ ಗುಹೆಯ ರಾಜಬೀದಿಯಲ್ಲಿ ಹೋಗುತಿಟ್ಟಾ ಗ, ಅಲ್ಲಲ್ಲಿ ನಡುನಡುವೆ ಆಪುರದಲ್ಲಿ ಪ್ರಮುಖರಾದ ವಾನರವೀರರ ಮನೆಗೆ ಛನ್ನು ನೋಡಿದನು ಮೊದಲು ಅತ್ತಿಮನೋಹರವಾದ ಅಂಗದನ ಆರಮನೆ ಯನ್ನು ಕಂಡನು ಹಾಗೆಯೇ ಮೈಂದ, ದ್ವಿವಿದ, ಗವಯ, ಗವಾಕ್ಷ, ಗಜ, ಶರಭ, ವಿದ್ಯುನ್ಮಾಲಿ, ಸಂಪಾತಿ, ಸೂಲ್ಯಾಕ್ಷ, ಹನುಮಂತ, ವೀರಬಾಹು, ಸುಬಾಹು, ಮಹಾತ್ಮನಾದ ನಳಿ, ಕುಮುದ, ಸುಷೇಣ, ತಾರ, ಜಾಂಬವಂತ, ದಧಿಮುಖ, ನೀಲ, ಸುಪಾಟಲ, ಸುನೇತ್ರರೇ ಮುಂತಾಗಿ ಮಹಾತ್ಮರಾದ ಅನೇಕಕಪಿಮುಖ್ಯರು ವಾಸಮಾಡುತ್ತಿದ್ದ ದೃಢವಾ ದ ದೊಡ್ಡ ಮನೆಗಳ ಸಾಲನ್ನು ನೋಡುತ್ತ ಹೋದನು. ಒಂದೊಂದು