ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫18 ಶ್ರೀಮದ್ರಾಮಾಯಣವು [ಸರ್ಗ ೩೩. ಕಲೆತು, ಹೆಚ್ಚು ತಗ್ಗಿಲ್ಲದೆ ಸಮಸ್ಥಾಯಿಯಾಗಿ, ಅಕ್ಷರಗಳೂ ಪದಗಳೂ ಸ್ಪಷ್ಟವಾಗಿ, ಕೇಳಿಬರುವ ಬಾಯಿಹಾಡುಗಳಿಂದಲೂ ಕೂಡಿ, ಕರ್ಣಾನಂದ ವನ್ನುಂಟುಮಾಡುತಿತ್ತು ಆ ಅಂತಃಪುರದಲ್ಲಿ ನಾನಾವಿಧಗಳಾದ ವೇಷ ಭೂಷಣಗಳನ್ನು ಧರಿಸಿ, ರೂಪದಿಂದಲೂ ಯೌವನದಿಂದಲೂ ಮೇಲೆನಿಸಿ ಕೊಂಡ ಅನೇಕಸಿಯರನ್ನು ನೋಡಿದನು ಅಲ್ಲಿ ಸತ್ತುಲಪ್ರಸೂತರಾಗಿ ಉ ತಮಾಭರಣಗಳಿಂದಲಂಕೃತರಾಗಿ, ಫಲಸಮೂಹಗಳನ್ನೂ , ಪುಷ್ಪಮಾಲಿ ಕೆಗಳನ್ನೂ ಸಂಗ್ರಹಿಸುವುದರಲ್ಲಿ ನಿರತರಾದ ಅನೇಕಚೇಟಿಯರನ್ನೂ ಕಂಡನು ಧನಧಾನ್ಯರತ್ತಾದಿಗಳಿಂದ ನಿತ್ಯತೃಪ್ತರಾಗಿ, ತಮಗೆ ನಿಯಮಿಸಲ್ಪಟ್ಟ ಕಾರ್ ಗಳಲ್ಲಿ ಬಹಳ ಜಾಗರೂಕರಾಗಿ, ಉತ್ತಮವಸ್ತ್ರಾಭರಣಗಳಿಂದ ಅಲಂಕೃತ ರಾಗಿಯೂ ಇದ್ದ ಸೇವಕರನ್ನೂ ಕಂಡನು ಹಾಗೆಯೇ ಅಲ್ಲಿ ವಾನರಸಿ ಯರ ಸುರತಸಂಭ್ರಮದಿಂದುಂಟಾದ ಕಾಲಂದುಗೆಯ ಧ್ವನಿಗಳನ್ನೂ, ಅವ ರ ನಡುಗೆಜ್ಜೆ ಗಳ ಶಬ್ದವನ್ನೂ ಕೇಳಿ, ಈ ಲಕ್ಷಣನಿಗೆ ಒಳಗೊಳಗೆ ನಾಚಿಕೆ ಯುಂಟಾಯಿತು ಹೀಗೆ ಸುಗ್ರೀವನು ಆ ವಾನರಸೀಯರೊಡನೆ ಕ್ರೀಡಿಸು ತ ಮೈಮರೆತಿರುವುದನ್ನು ನೋಡಿ ಲಕ್ಷಣನಿಗೆ ತಡೆಯಲಾರದ ಕೋಪ ವುಂಟಾಯಿತು ಸಮಸ್ತದಿಕ್ಕುಗಳನ್ನೂ ಶಬ್ದದಿಂದ ತುಂಬುವಂತೆ ತನ್ನ ಧ ನುಸ್ಸನ್ನೆತ್ತಿ ಅದರ ನಾಣೆತ್ತಿ ಟಂಕಾರಮಾಡಿದನು ತನ್ನಣ್ಣನಾದ ರಾಮ ನ ಕಷ್ಟವನ್ನು ನೆನೆಸಿಕೊಂಡಷ್ಟೂ ಇವನ ಕೋಪವು ಮೇಲೆಮೇಲೆ ಉಕ್ಕಿ ಬರುತಿತ್ತು, ಆದರೂ ಈತನು ಸಚ್ಚರಿತ್ರವುಳ್ಳವನಾದುದರಿಂದ,ಆ ವಾನರ ಸ್ತ್ರೀಯರಿರುವ ಪ್ರದೇಶಕ್ಕೆ ನೆಟ್ಟನೆ ಪ್ರವೇಶಿಸಲಾರದೆ ಸ್ತ್ರೀಯರಿಲ್ಲದ ವಿವಿ ಕವಾದ ಒಂದುಸ್ಥಳದಲ್ಲಿ ನಿಂತಿದ್ದನು ಲಕ್ಷಣನು ಮಾಡಿದ ಧನುಷ್ಯ೦ಕಾ ರಧ್ವನಿಯು ಅತ್ತಲಾಗಿ ಸುಗ್ರೀವನ ಕಿವಿಗೂ ಬಿದ್ದಿತು ಲಕ್ಷಣನು ಅಂತಃಪ ರಕ್ಕೆ ಬಂದುಬಿಟ್ಟೆನೆಂದು ತಿಳಿದುಕೊಂಡು,ಭಯದಿಂದ ಬೆಜ್ಜರಬಿದ್ದು, ಆಗಲೇ ಧಿಗ್ಗನೆ ಆಸನದಿಂದೆದ್ದು ಹೊರಟುಬರುತ್ತ ತನ್ನಲ್ಲಿ ತಾನು "ಓಹೋ'ಅಂಗದ ನು ಹೇಳಿದಂತೆ ಭ್ರಾತೃವತ್ಸಲನಾದ ಲಕ್ಷಣನು ನಿಜವಾಗಿ ಇಲ್ಲಿಗೆ ಬಂದೇಬಿ ಟೂನೆ?ಅದರಲ್ಲಿ ಸಂದೇಹವೇನಿದೆ”ಎಂದು ತಳಿಸುತ್ತಿದ್ದನು ಮೊದಲೇ ಆಂಗ ದನು ಲಕ್ಷ್ಮಣನ ಕೋಪವನ್ನು ತಿಳಿಸಿದ್ದುದಲ್ಲದೆ, ಈಗ ಭಯಂಕರವಾದಜ್ಞಾ